Film News

ನಟಿ ರಾಶಿ ಖನ್ನಾ ಗೋವಾದಲ್ಲಿ ಸಖತ್ ಎಂಜಾಯ್: ಪೊಟೋಸ್ ವೈರಲ್

ಹೈದರಾಬಾದ್: ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರೊಲ್ಲೊಬ್ಬರಾದ ರಾಶಿ ಖನ್ನಾ ಗೋವಾದಲ್ಲಿ ಎಂಜಾಯ್ ಮಾಡುತ್ತಿದ್ದು, ಅವರು ಶೇರ್ ಮಾಡುವ ಪೊಟೋಗಳಿಗೆ ಅಭಿಮಾನಿಗಳಿಂದ ವಿವಿಧ ರೀತಿಯಲ್ಲಿ ಕಾಮೆಂಟ್ಸ್ ಬರುತ್ತಿದ್ದು, ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಕೊರೋನಾ ಲಾಕ್‌ಡೌನ್ ಸಮಯದಲ್ಲಿ ನಟಿ ರಾಶಿ ಖನ್ನಾ ವಾರಕ್ಕೊಮ್ಮೆ ಪೊಟೋ ಶೂಟ್ ನಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ಪೈಕಿ ಲಂಗಾದವಣಿ ಪೊಟೋ ಹೈಲೆಟ್ ಆಗಿ ಉಳಿದಿದೆ. ಇನ್ನೂ ಈ ಎಲ್ಲಾ ಪೊಟೋಗಳಿಗೂ ನಟಿ ರಾಶಿ ಖನ್ನಾ ಅಭಿಮಾನಿಗಳು ಲೈಕುಗಳ ಸುರಿಮಳೆಯ ಜೊತೆಗೆ ವಿವಿಧ ರೀತಿಯ ಕಾಮೆಂಟ್‌ಗಳನ್ನು ಸಹ ಮಾಡುತ್ತಿದ್ದಾರೆ. ಇದೀಗ ಗೋವಾದಲ್ಲಿನ ಕೆಲವೊಂದು ಬಿಕಿನಿಯಲ್ಲಿನ ಪೊಟೋಗಳು ಸಖತ್ ವೈರಲ್ ಆಗುತ್ತಿದ್ದು, ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದೆ.

ಇದೀಗ ನಟಿ ರಾಶಿ ಖನ್ನಾ ತಮ್ಮ ಗೆಳತಿ ಜಿನ್ ಕೊಟ್ವಾಲ್ ಜೊತೆ ಗೋವಾದಲ್ಲಿ ಸಖತ್ ಎಂಜಾಯ್ ಮಾಡುತ್ತಿದದಾರೆ. ಇಲ್ಲಿ ಬಿಕಿನಿಯಲ್ಲಿ ವಿವಿಧ ಭಂಗಿಗಳಲ್ಲಿ ತೆಗೆದ ಪೊಟೋಗಳು ವೈರಲ್ ಆಗುತ್ತಿದೆ. ಇನ್ನೂ ಅವರ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಪೊಟೋಗಳನ್ನು ಶೇರ್ ಮಾಡುವುದರ ಜೊತೆ ಲೈಫ್ ಈಸ್ ಗುಡ್ ಗೋವಾ ಎಂಬ ಹ್ಯಾಷ್ ಟ್ಯಾಗ್ ಅನ್ನು ಸಹ ಮಾಡಿದ್ದಾರೆ. ಇನ್ನೂ ಈಜುಕೊಳದ ಬಳಿ ತಲೆಯ ಕೂದಲನ್ನು ಆರಿಸುತ್ತಾ ತನ್ನ ಸೌಂದರ್ಯವನ್ನು ಪ್ರದರ್ಶನ ಮಾಡುತ್ತಿರುವ ಪೊಟೋ ಅಂತೂ ದೊಡ್ಡದಾಗಿ ವೈರಲ್ ಆಗಿದೆ ಅಷ್ಟೇ ಅಲ್ಲದೇ ನಟಿಯ ಹಿಂಬಾಲಕರು ಆಸಮ್, ಬ್ಯೂಟಿಪುಲ್ ಎಂಬೆಲ್ಲಾ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಇನ್ನೂ ನಟಿ ರಾಶಿ ಖನ್ನಾ ಮಲಯಾಳಂ ಸಿನೆಮಾ ಒಂದರಲ್ಲಿ ಬ್ಯುಸಿಯಾಗಿದ್ದು, ಗೋಪಿಚಂದ್ ಅಭಿನಯದ ಪಕ್ಕಾ ಕಮರ್‍ಷಿಯಲ್ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Trending

To Top