ಪ್ರಾಣಿಗಳ ಕುರಿತು ನಟಿ ರಮ್ಯಾ ಇನ್ಸ್ಟಾಗ್ರಾಂನಲ್ಲಿ ಹೇಳಿದ್ದಾದರೂ ಏನು?

ಬೆಂಗಳೂರು: ಸುಮಾರು ತಿಂಗಳುಗಳಿಂದ ಸಿನಿರಂಗಕ್ಕೆ ಹಾಗೂ ರಾಜಕೀಯಕ್ಕೂ ದೂರವಿರುವ ನಟಿ ರಮ್ಯಾ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಪ್ರಾಣಿಗಳ ಕುರಿತಂತೆ ತಮ್ಮ ಇನ್ಸ್ಟಾಗ್ರಾಂ ನಲ್ಲಿ ನಟಿ ಸಂದೇಶವನ್ನು ನೀಡಿದ್ದಾರೆ.

ಅದು ಏನೆಂದರೇ, ನಿಮಗೆ ನಿಜವಾಗಿ ಪ್ರಾಣಿಗಳ ಮೇಲೆ ಪ್ರೀತಿಯಿದ್ದರೇ, ಜೂ, ಸಫಾರಿ ವನ್ಯಜೀವಿ ಪೊಟೊಗ್ರಫಿಗಳಿಗೆ ಹೋಗಬೇಡಿ. ಪ್ರಾಣಿಗಳ ಮೇಲೆ ಪ್ರೀತಿಯಿದ್ದರೇ, ಅವುಗಳ ಪಾಡಿಗೆ ಇರಲು ಬಿಟ್ಟುಬಿಡಿ. ನಿಮ್ಮ ಸ್ವ ಹಿತಾಸಕ್ತಿಗಾಗಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಗಳನ್ನು ಹಾಕಿಕೊಳ್ಳಲು ಅರಣ್ಯಗಳಿಗೆ ಹೋಗಿ ವನ್ಯ ಜೀವಿಗಳ ಚಿತ್ರಗಳನ್ನು ಚಿತ್ರೀಕರಿಸಲು ಹೋಗಬೇಡಿ ಎಂದು ಮನವಿ ಮಾಡಿದ್ದಾರೆ. ಇನ್ನೂ ಇತ್ತೀಚಿಗೆ ತಮಿಳುನಾಡಿನಲ್ಲಿ ದುಷ್ಕರ್ಮಿಗಳು ಆನೆಯೊಂದಕ್ಕೆ ಬೆಂಕಿ ಹಚ್ಚಿರುವ ಘಟನೆಯ ನೆನೆದು ಭಾವುಕರಾಗಿದ್ದಾರೆ.

ವಿಶ್ವದಲ್ಲಿ ಮನುಷ್ಯನಂತೆ ಇತರೆ ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಎಂಬುದನ್ನು ನಾವು ಮರೆಯಬಾರದು. ಮನುಷ್ಯರಿಗೆ ಪ್ರಾಣಿಗಳನ್ನು ನೋಡುವ ಆಸೆಯಿದೆಯೆ ಹೊರತು ಪ್ರಾಣಿಗಳಿಗೆ ನಮ್ಮನ್ನು ನೋಡುವ ಆಸೆಯಿಲ್ಲ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ನಾವು ಅವುಗಳಿಗೆ ತೊಂದರೆ ನೀಡದೇ ಇದ್ದರೇ, ಅವುಗಳು ಸಂತೋಷವಾಗಿ ಬದುಕುತ್ತವೆ. ಅವನ್ನು ಸ್ವಂತಂತ್ರವಾಗಿ ಬದುಕಲು ಬಿಡಿ, ಎಂದು ಸಾಲು ಸಾಲು ಸಂದೇಶಗಳನ್ನು ಹಂಚಿಕೊಂಡಿದ್ದಾರೆ.

ಜೊತೆಗೆ ಹಣದ ಕುರಿತಂತೆಯೂ ಸಂದೇಶ ಹಂಚಿಕೊಂಡಿರುವ ರಮ್ಯಾ, ಕೊನೆಯದಾಗಿ ಉಳಿದ ಮರವನ್ನು ಕಡಿದ ಬಳಿಕ, ಕೊನೆಯದಾಗಿ ಮೀನನ್ನು ಹಿಡಿದ ಬಳಿಕ ಮನುಷ್ಯನಿಗೆ ಅರ್ಥವಾಗುತ್ತೆ ಹಣ ತಿನ್ನಲು ಸಾಧ್ಯವಿಲ್ಲ ಎಂದು. ಕಾರ್ಪೋರೇಟ್ ಕಂಪನಿಗಳಿಗಾಗಿ ಸರ್ಕಾರ ಕಾನೂನು ಸಹ ಬದಲಾಯಿಸುತ್ತಿದೆ ಎಂದು ಆರೋಪಿಸಿದ್ದಾರೆ.

Previous articleಮಾಲ್ಡೀವ್ಸ್ ನಲ್ಲಿ ಮಂಚು ಫ್ಯಾಮಿಲಿ ಎಂಜಾಯ್: ಪೊಟೋಸ್ ವೈರಲ್
Next articleಅಭಿಮಾನಿಗಳ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ ಶ್ರುತಿ ಹಾಸನ್!