ಅಕ್ಟೊಬರ್ 5 ರಂದು ಮೋಹಕತಾರೆ ರಮ್ಯಾ ನೀಡಲಿದ್ದಾರೆ ಗುಡ್ ನ್ಯೂಸ್…!

ಸ್ಯಾಂಡಲ್ ವುಡ್ ನ ಖ್ಯಾತ ನಟಿ ರಮ್ಯಾ ಸಿನೆಮಾಗಳಿಂದಲೂ ದೂರವಿದ್ದರೂ ಸಹ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಆಕೆಯನ್ನು ದೊಡ್ಡ ಪರದೆಯ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಆಕೆ ನಿರ್ಮಾಪಕಿಯಾಗಿ ಸಿನಿರಂಗಕ್ಕೆ ಕಮ್ ಬ್ಯಾಕ್ ಆದರು. ನಟಿಯಾಗಿ ಸಿನೆಮಾಗಳಲ್ಲಿ ಎಂಟ್ರಿಕೊಡಲಿದ್ದಾರೆ ಎಂದುಕೊಂಡಿದ್ದ ಅಭಿಮಾನಿಗಳಿಗೆ ಆಕೆ ನಿರ್ಮಾಣ ಸಂಸ್ಥೆ ಪ್ರಾರಂಭ ಮಾಡುವುದಾಗಿ ತಿಳಿಸಿದರು. ಇದೀಗ ಮತ್ತೊಂದು ಶುಭಸುದ್ದಿಯನ್ನು ಆಕೆ ತನ್ನ ಅಭಿಮಾನಿಗಳಿಗೆ ನೀಡಲಿದ್ದಾರಂತೆ.

ನಟಿ ರಮ್ಯಾ ಸುಮಾರು ವರ್ಷಗಳ ಕಾಲ ಸಿನಿರಂಗದಿಂದ ದೂರವೇ ಉಳಿದಿದ್ದು, ನಿರ್ಮಾಪಕಿಯಾಗಿ ನಿರ್ಮಾಣ ಸಂಸ್ಥೆಯೊಂದನ್ನು ಪ್ರಾರಂಭಿಸುವ ಮೂಲಕ ಬಣ್ಣದ ಲೋಕಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಆಪಲ್ ಬಾಕ್ಸ್ ಎಂಬ ಸಿನೆಮಾ ಸಂಸ್ಥೆಯನ್ನು ಶುರು ಮಾಡಿದ್ದಾರೆ. ಈ ಸಂಸ್ಥೆಯ ಮೂಲಕ ಆಕೆ ಸಿನೆಮಾಗಳನ್ನು ಹಾಗೂ ವೆಬ್ ಸಿರೀಸ್ ಗಳನ್ನು ಮಾಡುವುದಾಗಿ ಘೋಷಣೆ ಮಾಡಿದರು. ಶೀಘ್ರದಲ್ಲೆ ತಮ್ಮ ಸಂಸ್ಥೆಯ ಮೂಲಕ ಪ್ರಾರಂಭಿಸಲಿರುವ ಹೊಸ ಸಿನೆಮಾದ ಅಪ್ಡೇಟ್ ನೀಡುವುದಾಗಿಯೂ ಸಹ ಹೇಳಿದ್ದರು. ಇದೀಗ ಆಕೆ ಮತ್ತೊಂದು ಗುಡ್ ನ್ಯೂಸ್ ಅನ್ನು ಅಕ್ಟೋಬರ್‍ 5 ರಂದು ನೀಡಲಿದ್ದಾರಂತೆ.

ಇನ್ನೂ ರಿಷಭ್ ಶೆಟ್ಟಿ ಅಭಿನಯದ ಕಾಂತಾರ ಸಿನೆಮಾ ನೋಡಿದ ಬಳಿಕ ಆಕೆ ಮಾದ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ಮಾತನಾಡುತ್ತಾ ಆಕೆ ದಸರಾ ಹಬ್ಬಕ್ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡುವುದಾಗಿ ತಿಳಿಸಿದ್ದರು. ಅಕ್ಟೊಬರ್‍ 5 ರಂದು ಆ ಗುಡ್ ನ್ಯೂಸ್ ಏನು ಎಂಬುದರ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನೂ ರಮ್ಯಾ ಈ ಸುದ್ದಿ ಹೇಳುತ್ತಿದ್ದಂತೆಯೇ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಚರ್ಚೆ ಶುರುವಾಗಿದೆ. ರಮ್ಯಾ ತಮ್ಮ ಸಂಸ್ಥೆಯಿಂದ ನಿರ್ಮಾಣವಾಗಲಿರುವ ಸಿನೆಮಾದ ಬಗ್ಗೆ ಘೋಷಣೆ ಮಾಡುತಾರಾ, ಅಥವಾ ತಾವೇ ಸಿನೆಮಾದಲ್ಲಿ ನಟಿಸುವ ಬಗ್ಗೆ ಮಾಹಿತಿ ನೀಡುತ್ತಾರಾ ಎಂಬುದರ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಸುಮಾರು ದಿನಗಳಿಂದ ರಮ್ಯಾ ನಿರ್ಮಾಣ ಸಂಸ್ಥೆಯ ಮೂಲಕ ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ಸಿನೆಮಾ ಒಂದು ಬರಲಿದೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ಅಷ್ಟೇಅಲ್ಲದೇ ರಾಜ್ ಬಿ ಶೆಟ್ಟಿ ಹಾಗೂ ರಮ್ಯಾ ಇಬ್ಬರೂ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರಂತೆ. ಇದೀಗ ರಮ್ಯಾ ಅ.5 ರಂದು ಇದೇ ವಿಚಾರವನ್ನು ಘೋಷಣೆ ಮಾಡಲಿದ್ದಾರೆ ಎಂಬ ಸುದ್ದಿ ಸಹ ಹರಿದಾಡುತ್ತಿದೆ. ರಮ್ಯಾ ರವರು ಏನು ಗುಡ್ ನ್ಯೂಸ್ ನೀಡಲಿದ್ದಾರೆ ಎಂಬುದನ್ನು ತಿಳಿಯಲು ಅ.5 ರವರೆಗೂ ಕಾಯಬೇಕಿದೆ.

Previous articleರಣವೀರ್-ದೀಪಿಕಾ ವಿಚ್ಚೇದನದ ರೂಮರ್, ರಣವೀರ್ ಹೇಳಿದ್ದು ಏನು ಗೊತ್ತಾ?
Next articleಹಾಟ್ ಪೋಸ್ ಗಳ ಮೂಲಕ ಪಡ್ಡೆ ಹುಡುಗರ ಪ್ರಾಣ ಹಿಂಡುತ್ತಿರುವ ಪಂಜಾಬಿ ಬ್ಯೂಟಿ ಪಾಯಲ್…!