ನಟಿ ರಂಭ ಕಾರು ಅಪಘಾತ, ಆಸ್ಪತ್ರೆ ಸೇರಿದ ಕುಟುಂಬಸ್ಥರು, ಗಂಭೀರವಾಗಿ ಗಾಯಗೊಂಡ ಮಗಳು…!

ಸೌತ್ ಸಿನಿರಂಗದ ಸೀನಿಯರ್‍ ನಟಿ ರಂಭ ಇದ್ದ ಕಾರು ಅಪಘಾತಕ್ಕೆ ಗುರಿಯಾಗಿದೆ. ಕಾರಿನಲ್ಲಿ ರಂಭ ಹಾಗೂ ತನ್ನ ಮಕ್ಕಳೊಂದಿಗೆ ಪ್ರಯಾಣ ಮಾಡುತ್ತಿದ್ದರು. ಈ ಸಮಯದಲ್ಲಿ ಅಪಘಾತ ಸಂಭವಿಸಿದೆ. ಇನ್ನೂ ರಂಭರವರ ಚಿಕ್ಕಮಗಳಿಗೆ ಗಂಭೀರವಾದ ಗಾಯಗಳಾಗಿದ್ದು, ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಯುತ್ತಿದ್ದಾರೆ. ರಂಭಾರವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಇನ್ನೂ ರಂಭಾ ಅಪಘಾತಕ್ಕೆ ಗುರಿಯಾದ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಸೀನಿಯರ್‍ ನಟಿ ರಂಭ ಕಾರು ಅಪಘಾತಕ್ಕೀಡಾಗಿದ್ದು, ರಂಭಾ ಹಾಗೂ ಮಕ್ಕಳು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ರಂಭಾಗೆ ಸಣ್ಣಪುಟ್ಟಗಾಯಗಳಾಗಿದ್ದರೇ, ಆಕೆಯ ಚಿಕ್ಕ ಮಗಳಿಗೆ ಮಾತ್ರ ತುಂಬಾ ತೀವ್ರವಾದ ಗಾಯಗಳಾಗಿದೆ. ಇನ್ನೂ ರಂಭಾ ಮಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನೂ ರಂಭಾ ರವರೇ ತಮ್ಮ ಕಾರು ಅಪಘಾತಕ್ಕೀಡಾದ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಈ ಪೊಟೋಗಳು ವೈರಲ್ ಆಗುತ್ತಿದ್ದು, ಆಕೆಯ ಅಭಿಮಾನಿಗಳು ಹಾಗೂ ಅನೇಕರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥನೆ ಸಹ ಮಾಡುತ್ತಿದ್ದಾರೆ.

ಇನ್ನೂ ಘಟನೆಯ ವಿವರಗಳಿಗೆ ಬಂದರೇ, ರಂಭಾ ತಮ್ಮ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆಯಂತೆ. ಕಾರಿನಲ್ಲಿ ರಂಭಾ, ತನ್ನ ಮಕ್ಕಳ ಜೊತೆಗೆ ರಂಭಾ ಮನೆಯ ಕೆಲಸದಾಕೆ ಸಹ ಇದ್ದರಂತೆ. ಅಪಘಾತದ ವಿಚಾರವನ್ನುರಂಭಾರವರೇ ಸೋಷಿಯಲ್ ಮಿಡಿಯಾ ವೇದಿಕೆಯಾಗಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಆಕೆ ಸೇರಿದಂತೆ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತನ್ನ ಚಿಕ್ಕ ಮಗಳಾದ ಸಾಷಾ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಮೋಷನಲ್ ಆಗಿದ್ದಾರೆ.

ಇನ್ನೂ ಅಪಘಾತದ ಕೆಲ ಪೊಟೋಗಳನ್ನೂ ಸಹ ಆಕೆ ಹಂಚಿಕೊಂಡಿದ್ದಾರೆ. ಮಕ್ಕಳನ್ನು ಮನೆಗೆ ವಾಪಸ್ಸು ಕರೆದುಕೊಂಡು ಹೋಗುತ್ತಿದ್ದಾರೆ. ಇಂಟರ್‍ ಸೆಕ್ಷನ್ ಬಳಿ ಕಾರೊಂದು ನಮ್ಮ ಕಾರನ್ನು ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕಾರಿನಲ್ಲಿದ್ದ ಎಲ್ಲರೂ ಗಾಯಗೊಂಡಿದ್ದೇವೆ. ಸದ್ಯ ಎಲ್ಲರೂ ಸೇಫ್ ಆಗಿಯೇ ಇದ್ದಾರೆ. ಆಕೆಯ ಚಿಕ್ಕ ಮಗಳಾದ ಸಾಷಾ ಇನ್ನೂ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಈ ವಿಚಾರ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ರಂಭಾ ಅಭಿಮಾನಿಗಳೂ ಸೇರಿದಂತೆ ಸಿನೆಮಾ ಸೆಲೆಬ್ರೆಟಿಗಳು ಹಾಗೂ ನೆಟ್ಟಿಗರೂ ಸಹ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.

Previous articleಶಾರ್ಟ್ ಡ್ರೆಸ್ ಧರಿಸಿ ಗ್ಲಾಮರ್ ಶೋ ಮಾಡಿದ ಕೀರ್ತಿ ಸುರೇಶ್, ಹಾಟ್ ಟ್ರೀಟ್ ಕೊಟ್ಟ ಬ್ಯೂಟಿ…!
Next articleಪುನೀತ್ ರಾಜ್ ಕುಮಾರ್ ರವರ ಕರ್ನಾಟಕ ರತ್ನ ಪ್ರಶಸ್ತಿ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಮಾತನಾಡಿದ ಸ್ಟಾರ್ ಗಳು…!