Film News

ನಟಿ ರಾಕುಲ್ ರವರಿಗೆ ಕೊರೋನಾ ಪಾಸಿಟೀವ್: ಎಚ್ಚರಿಕೆ ಸಂದೇಶ ನೀಡಿದ ರಾಕುಲ್

ಮುಂಬೈ: ದಕ್ಷಿಣ ಭಾರತದ ಖ್ಯಾತ ನಟ ರಾಕುಲ್ ಪ್ರೀತ್ ಸಿಂಗ್ ರವರಿಗೆ ಕೊರೋನಾ ಸೋಂಕು ಧೃಡಪಟ್ಟಿದ್ದು, ಕ್ವಾರೆಂಟೈನ್ ಗೆ ಒಳಪಟ್ಟಿದ್ದಾರೆ. ಇನ್ನೂ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸ್ವತಃ ರಾಕುಲ್ ರವರೇ ಮಾಹಿತಿ ಹಂಚಿಕೊಂಡಿದ್ದಾರೆ.

ರಾಕುಲ್ ಪ್ರೀತ್ ಸಿಂಗ್ ರವರಿಗೆ ಕೊರೋನಾ ಸೋಂಕು ದೃಡಪಟ್ಟಿದ್ದು, ಈ ಕುರಿತು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದು, ನಾನು ಪ್ರಸ್ತುತ ಆರೋಗ್ಯವಾಗಿದ್ದೇನೆ, ವಿಶ್ರಾಂತಿ ಪಡೆಯುತ್ತಿದ್ದೇನೆ, ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕದಲ್ಲಿರುವವರು ದಯವಿಟ್ಟು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ, ಎಚ್ಚರಿಕೆಯಿಂದ ಇರಿ ಎಂದು ಮನವಿ ಮಾಡಿದ್ದಾರೆ.

ಕನ್ನಡದ ಗಿಲ್ಲಿ ಚಿತ್ರದ ಮೂಲಕ ಸಿನೆಮಾ ರಂಗ್ಕಕೆ ಕಾಲಿಟ್ಟ ರಾಕುಲ್ ಇದೀಗ ದಕ್ಷಿಣ ಭಾರತದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ. ಪ್ರಸ್ತುತ ಅಜಯ್ ದೇವಗಾನ್ ಹಾಗೂ ಅಮಿತಾಭ್ ಬಚ್ಚನ್ ನಟನೆಯ ಮೇಡೇ ಚಿತ್ರದಲ್ಲಿ ರಾಕುಲ್ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. ಇನ್ನೂ ರಾಕುಲ್ ಕೈಯಲ್ಲಿ ಸರ್ದಾರ್ & ಗ್ರ್ಯಾಂಡ್ ಸನ್, ಇಂಡಿಯನ್-೨, ಅಟ್ಯಾಕ್, ಅಯಲಾನ್, ಚೆಕ್ ಮೊದಲಾದ ಸಿನೆಮಾಗಳಿವೆ.

Trending

To Top