Film News

ರಾಕುಲ್ ಮದುವೆಯಾಗಲು ಹುಡುಗನಿಗೆ ಈ ಲಕ್ಷಣಗಳಿರಬೇಕಂತೆ!

ಬೆಂಗಳೂರು: ಬಹುಭಾಷ ನಟಿ ರಾಕುಲ್ ಪ್ರೀತ್ ಸಿಂಗ್ ತಾವು ಮದುವೆಯಾಗುವ ಹುಡುಗನ ಕುರಿತು ಆತ ಹೊಂದಿರಬೇಕಾದ ಲಕ್ಷಣಗಳ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರಂತೆ.

ದಕ್ಷಿಣ ಭಾರತದ ಖ್ಯಾತ ನಟಿ ರಾಕುಲ್ ಪ್ರೀತ್ ಸಿಂಗ್ ಕನ್ನಡ ಭಾಷೆಯ ಗಿಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಈಗ ಬಹುಬೇಡಿಕೆಯ ನಟಿಯಾಗಿದ್ದಾರೆ. ಇನ್ನೂ ತಾವು ಮದುವೆಯಾಗುವ ಹುಡುಗನಿಗೆ ಇರಬೇಕಾದಂತಹ ಗುಣಗಳ ಬಗ್ಗೆ ತಿಳಿಸಿದ್ದು, ಹುಡುಗನಿಗೆ ಜೀವನದಲ್ಲಿ ಉತ್ಸಾಹ ಮತ್ತು ಉದ್ದೇಶ ಇರಬೇಕು. ಸೈನ್ಯದ ಕುಟುಂಬದ ಹಿನ್ನೆಲೆಯಲ್ಲಿ ನಾನು ಬೆಳೆದಿದ್ದು, ಆರೋಗ್ಯಕರ ಜೀವನಶೈಲಿಯನ್ನು ಆನಂದಿಸುವ ವ್ಯಕ್ತಿಯಾಗಿರಬೇಕು. ಜೊತೆಗೆ ತಮ್ಮ ಮದುವೆ ಸಹ ಎಲ್ಲಿ ನಡೆಯಬೇಕು ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆಯಿಟ್ಟುಕೊಂಡಿರುವ ರಾಕುಲ್ ಸಮುದ್ರ ತೀರದಲ್ಲಿ ನನ್ನ ಆಪ್ತರು ಹಾಗೂ ಕುಟುಂಬದವರು ಎಲ್ಲಾ ಸೇರಿ ೧೦೦ ಕ್ಕಿಂತ ಹೆಚ್ಚು ಜನರು ಇರದಂತೆ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಳ್ಳಲು ಇಷ್ಟಪಡುತ್ತೇನೆ ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನೂ ನಟಿ ರಾಕುಲ್ ಕನ್ನಡ ಸಿನೆಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರೂ, ಹೆಸರು ಕೀರ್ತಿ ಗಳಿಸಿದ್ದು, ತೆಲುಗು ಸಿನಿರಂಗದಲ್ಲಿ ನಂತರ ಹಿಂದಿ, ತಮಿಳು ಭಾಷೆಗಳಲ್ಲೂ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ೩೦ ವರ್ಷದ ರಾಕುಲ್ ಕೈಯಲ್ಲಿ ಅನೇಕ ಸಿನೆಮಾಗಳಿದ್ದು, ಸರ್ದಾರ್ & ಗ್ರ್ಯಾಂಡ್ಸನ್, ಇಂಡಿಯನ್-2, ಅಟ್ಯಾಕ್, ಚೆಕ್ ಮೊದಲಾದ ಸಿನೆಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

Trending

To Top