ಭಾಯ್ ಪ್ರೆಂಡ್ ನಿಂದ ಮತ್ತೊಂದು ದುಬಾರಿ ಗಿಫ್ಟ್ ಪಡೆದುಕೊಂಡ ನಟಿ ರಾಖಿ ಸಾವಂತ್….

ನಟಿ ರಾಖಿ ಸಾವಂತ್ ಸದಾ ಒಂದಲ್ಲ ಒಂದು ಸುದ್ದಿಯಿಂದ ವಿವಾದಗಳಿಗೆ ಗುರಿಯಾಗುತ್ತಿರುತ್ತಾರೆ. ಇತ್ತೀಚಿಗಷ್ಟೆ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರೊಂದಿಗೆ ಪ್ರೀತಿಯಲ್ಲಿದ್ದು ಶೀಘ್ರದಲ್ಲೇ ಮದುವೆಯಾಗುವುದಾಗಿ ಸುದ್ದಿ ಹರಿದಾಡುತ್ತಿದೆ. ಈ ಹಿಂದೆ ಸಹ ರಾಖಿ ಸಾವಂತ್ ಗೆ ತನ್ನ ಹೊಸ ಭಾಯ್ ಪ್ರೆಂಡ್ ದುಬಾರಿ ಕಾರನ್ನು ಗಿಫ್ಟ್ ನೀಡಿದ್ದ, ಇದೀಗ ಪುನಃ ದುಬಾರಿ ಮನೆಯೊಂದನ್ನು ನೀಡಿದ್ದಾರೆ. ಇದಕ್ಕೆ ರಾಖಿ ಪ್ರತಿಕ್ರಿಯೆ ನೀಡಿದ್ದು ಸಹ ವಿಶೇಷವಾಗಿದೆ.

ಸದಾ ವಿವಾದಗಳಿಲ್ಲಿಯೇ ಸುದ್ದಿಯಾಗುವ ರಾಖಿ ಸಾವಂತ್ ಇದೀಗ ಹೊಸ ಲವ್ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಕರ್ನಾಟಕ ಮೂಲದ ಮೈಸೂರಿನ ಆದಿಲ್ ಎಂಬ ವ್ಯಕ್ತಿಯೊಂದಿಗೆ ರಾಖಿ ಪ್ರೇಮ ಪಯಣ ಸಾಗಿಸುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆಯಷ್ಟೆ ಮಾಜಿ ಪತಿ ರಿತೇಶ್ ರಿಂದ ವಿಚ್ಚೇಧನ ಪಡೆದಿದ್ದರು. ಬಳಿಕ ಮೈಸೂರಿನ ಆದಿಲ್ ಎಂಬ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬಿದಿದ್ದು, ಶೀಘ್ರದಲ್ಲೇ ಈ ಜೋಡಿ ಮದುವೆ ಯಾಗುವುದಾಗಿ ಸುದ್ದಿಗಳು ಹರಿದಾಡುತ್ತಿವೆ. ಈ ಹಿಂದೆ ಆದಿಲ್ ರಾಖಿ ಸಾವಂತ್ ಗೆ ದುಬಾರಿ BMW ಕಾರನ್ನು ನೀಡುವ ಮೂಲಕ ರಾಖಿಗೆ ಆದಿಲ್ ಪ್ರಪೋಸ್ ಮಾಡಿದ್ದರು. ಇದೀಗ ಮತ್ತೊಂದು ದುಬಾರಿ ಗಿಫ್ಟ್ ನೀಡುವ ಮೂಲಕ ರಾಖಿಯನ್ನು ಮೆಚ್ಚಿಸಿದ್ದಾರೆ. ಈ ಕುರಿತು ರಾಖಿ ಸಹ ವಿಶೇಷ ರೀತಿಯಲ್ಲಿ ಪ್ರತಿಕ್ರಿಯೆ ಸಹ ನೀಡಿದ್ದಾರೆ.

ಇನ್ನೂ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ರಾಖಿ ಆದಿಲ್ ಹಾಗೂ ಆತ ನೀಡಿದ ಗಿಫ್ಟ್ ಕುರಿತು ಮಾತನಾಡಿದ್ದಾರೆ. ನನ್ನ ಹೆಸರಿನಲ್ಲಿ ಆದಿಲ್ ಹೊಸ ಮನೆ ಗಿಫ್ಟ್ ಆಗಿ ನೀಡಿದ್ದಾರೆ. ಈ ಹಿಂದೆ BMW ಕಾರನ್ನು ಸಹ ನೀಡಿದ್ದ. ಆದರೆ ಆದಿಲ್ ಪ್ರೀತಿಯೆ ನನಗೆ ಮುಖ್ಯ, ಅದೇ ನನ್ನ ಆಸ್ತಿ. ಆದಿಲ್ ನನ್ನನ್ನು ತುಂಬಾ ಪ್ರೀತಿಮಾಡುತ್ತಿದ್ದಾನೆ. ಸತ್ಯವಾದ ಪ್ರೀತಿಯನ್ನು ತೋರಿಸುತ್ತಿದ್ದಾನೆ. ಆದಿಲ್ ಒಬ್ಬ ಪ್ರಾಮಾಣಿಕ ವ್ಯಕ್ತಿಯಾಗಿದ್ದು, ಆತ ನನಗೆ ತುಂಬಾ ಇಷ್ಟವಾಗಿದ್ದಾನೆ. ಇನ್ನೂ ಈಗಾಗಲೇ ಅವರ ಕುಟುಂಬದೊಂದಿಗೆ ನನ್ನನ್ನು ಮದುವೆಯಾಗುವ ಪ್ರಸ್ತಾಪ ಸಹ ಇಟ್ಟಿದ್ದಾನೆ ಎಂದು ಆದಿಲ್ ನಲ್ಲಿರುವ ಒಳ್ಳೆಯ ಗುಣಗಳ ಬಗ್ಗೆ ಮಾತನಾಡಿದ್ದಾರೆ.

ಅಷ್ಟೇಅಲ್ಲದೇ ರಾಖಿ ಸಾವಂತ್ ಬಗ್ಗೆ ಆದಿಲ್ ಸಹ ಮಾತನಾಡಿದ್ದಾರೆ. ರಾಖಿ ತಮ್ಮ ಕೆಲಸದ ಮೇಲೆ ಎಲ್ಲಾ ವಿಚಾರವನ್ನು ತಿಳಿಸಿದ್ದಾರೆ. ಜೊತೆಗೆ ರಿತೇಶ್ ಜೊತೆಗಿನ ಮೊದಲ ಮದುವೆ ಬಗ್ಗೆ ಸಹ ಎಲ್ಲಾ ತಿಳಿಸಿದ್ದಾರೆ. ಈ ವಿಚಾರ ನನಗೆ ಮೊದಲು ತಿಳಿದಿರಲಿಲ್ಲ. ರಾಖಿ ಬಗ್ಗೆ ನಾನು ಏನು ಹೆಚ್ಚಾಗಿ ಮಾತನಾಡುವುದಿಲ್ಲ. ಆದರೆ ಮೈತುಂಬ ಬಟ್ಟೆಯನ್ನು ಧರಿಸಿಬೇಕು ಎಂದಷ್ಟೆ ಹೇಳಿದ್ದೇನೆ ಎಂದಿದ್ದಾರೆ. ಇನ್ನೂ ರಾಖಿಗಿಂತ ಆದಿಲ್ ಆರು ವರ್ಷ ಚಿಕ್ಕವನು. ಈಗಾಗಲೇ ಆದಿಲ್ ತಮ್ಮ ಮನೆಯಲ್ಲಿ ರಾಖಿ ಜೊತೆಗಿನ ಪ್ರೀತಿಯ ವಿಚಾರವನ್ನು ತಿಳಿಸಿದ್ದು. ಶೀಘ್ರದಲ್ಲೇ ಈ ಜೋಡಿ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

Previous articleಅಣ್ಣಮ್ಮ ದೇವಾಲಯದಲ್ಲಿ ನಟಿ ಅಮೂಲ್ಯ ಕುಟುಂಬ.. ಮಕ್ಕಳೊಂದಿಗೆ ದೇವರ ಹರಕೆ ತೀರಿಸಿಕೊಂಡರು…
Next articleNBK107 ಸಿನೆಮಾದ ಹೊಸ ಪೋಸ್ಟರ್ ರಿಲೀಸ್…. ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್…