ಪೋನ್ ಮಾಡಿ ಪ್ರಿಯಕರನಿಗೆ ಕ್ಲಾಸ್ ತೆಗೆದುಕೊಂಡ ನಟಿ ರಾಖಿ ಸಾವಂತ್…..

ಬಾಲಿವುಡ್ ಬೋಲ್ಡ್ ನಟಿ ಎಂದೇ ಕರೆಯುವ ರಾಖಿ ಸಾವಂತ್ ತಮ್ಮ ಮೊದಲನೇ ಪತಿಯೊಂದಿಗೆ ವಿಚ್ಚೇದನ ಪಡೆದ ಬಳಿಕ ಕರ್ನಾಟಕದ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದು, ಇತ್ತೀಚಿಗಷ್ಟೆ ಈ ಜೋಡಿ ಮದುವೆಯಾಗುವ ಬಗ್ಗೆ ಸುದ್ದಿ ಸಹ ತಿಳಿಸಿದ್ದರು. ಆದರೆ ಇದೀಗ ರಾಖಿ ಸಾವಂತ್ ಪ್ರಿಯಕರನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂಬ ವಿಚಾರ ಹರಿದಾಡುತ್ತಿದೆ.

ಕರ್ನಾಟಕದ ಮೈಸೂರು ಮೂಲದ ಯುವಕನೊಂದಿಗೆ ರಾಖಿ ಪ್ರೀತಿಗೆ ಬಿದ್ದಿದ್ದಾರೆ. ರಾಖಿ ಪತಿ ರಿತೇಶ್ ದೂರವಾದ ಬಳಿಕ ಮೈಸೂರಿನ ಆದಿಲ್ ಖಾನ್ ಪರಿಚಯವಾಗಿ, ಪರಿಚಯವಾದ ಒಂದೇ ತಿಂಗಳಲ್ಲಿ ರಿತೇಶ್ ತಾನು ಪ್ರೀತಿ ಮಾಡುತ್ತಿರುವುದಾಗಿ ರಾಖಿಗೆ ತಿಳಿಸಿದ್ದರಂತೆ. ಇನ್ನೂ ಆದಿಲ್ ಖಾನ್ ಪ್ರಪೋಸ್ ಮಾಡಿದ ಸ್ಟೈಲ್ ಗೆ ರಾಖಿ ಒಪ್ಪಿಗೆ ಕೊಟ್ಟರಂತೆ. ಇದೀಗ ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ರಾಖಿ ತನ್ನನ್ನು ಪ್ರೀತಿಸುತ್ತಿರುವ ಯುವಕನ ಬಗ್ಗೆ ಕೆಲವೊಂದು ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದರು. ಇದೀಗ ಆದಿಲ್ ರವರಿಗೆ ರಾಖಿ ಸಾವಂತ್ ಕ್ಲಾಸ್ ತೆಗೆದುಕೊಂಡಿದ್ದಾರಂತೆ. ಕಾರಣ ಏನು ಎಂಬುದನ್ನು ಈ ಮುಂದೆ ತಿಳಿಯಿರಿ.

ನಟಿ ರಾಖಿ ಸಾವಂತ್ ತನ್ನ ಮಾಜಿ ಪತಿ ರಿತೇಷ್ ಗೆ ಮೊದಲೇ ಮದುವೆಯಾಗಿತ್ತು. ರಿತೇಶ್ ಮೊದಲನೇ ಹೆಂಡತಿಯಿಂದ ವಿಚ್ಚೇಧನ ಪಡೆಯದೆ ರಾಖಿ ಜೊತೆ ಪ್ರೇಮ ಪಯಣ ಸಾಗಿಸಿದ್ದರಂತೆ. ಆದ್ದರಿಂದ ಅಂದಿನ ಸಮಯದಲ್ಲಿ ರಾಖಿ ಸಾವಂತ್ ಹಾಗೂ ರಿತೇಶ್ ಮದುವೆ ಕ್ರಮಬದ್ದವಾಗಿರಲಿಲ್ಲವಂತೆ. ಇದರಿಂದಾಗಿ ರಾಖಿ ಆತನೊಂದಿಗೆ ಬೇರೆಯಾಗಬೇಕಿತ್ತು. ಇದೀಗ ಆದಿಲ್ ವಿಚಾರದಲ್ಲೂ ಸಹ ರಾಖಿ ಅದೇ ಹಳೆಯ ಸಮಸ್ಯೆಯನ್ನು ಎದುರಿಸುವ ಸ್ಥಿತಿ ಬಂದಿದೆಯಂತೆ. ರಾದಿಲ್ ಗೆ ಈಗಾಗಲೇ ಮತ್ತೊಂದು ಯುವತಿಯೊಂದಿಗೆ ಸಂಬಂಧ ಇತ್ತು ಎಂಬ ವಿಚಾರ ಇದೀಗ ತಿಳಿದಿದ್ದು, ರಾಖಿಗೆ ಮತ್ತೊಂದು ಸಮಸ್ಯೆ ಎದುರಾದಂತಾಗಿದೆ.

ರಾಖಿ ಸಾವಂತ್ ಪ್ರಿಯಕರ ಆದಿಲ್ ದುರಾನಿ ರೋಷಿನಾ ದೆಲವರಿ ಎಂಬ ಯುವತಿಯೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ರಿಲೇಷನ್ ಶಿಪ್ ನಲ್ಲಿದ್ದಾರಂತೆ. ಇದೀಗ ರಾಖಿ ಸಾವಂತ್ ಪ್ರೀತಿಯ ವಿಚಾರ ತಿಳಿದು ರಾಖಿಗೆ ಪೋನ್ ಮಾಡಿದ ರೋಷಿನಾ ಆದಿಲ್ ನನಗೆ ಮಾತ್ರ ಸ್ವತಂ, ಆತನಿಂದ ನೀನು ದೂರ ಹೋಗಬೇಕು ಇಲ್ಲವಾದಲ್ಲಿ ನಾನು ಸುಮ್ಮನಿರುವುದಿಲ್ಲ ಎಂದು ಬೆದರಿಕೆ ಹಾಕಿದ್ದಾಗಿ ರಾಖಿ ಸಾವಂತ್ ಇತ್ತೀಚಿಗೆ ತಿಳಿಸಿದ್ದರು ಎನ್ನಲಾಗಿದೆ. ಇನ್ನೂ ಈ ಕುರಿತು ಆದಿಲ್ ಗೆ ಪೋನ್ ನಲ್ಲೇ ಕ್ಲಾಸ್ ತೆಗೆದುಕೊಂಡ ರಾಖಿ, ರೋಷಿನಾ ಬಗ್ಗೆ ವಿಚಾರಿಸಿದ್ದಾಳೆ. ಇದಕ್ಕೆ ಆದಿಲ್ ಆಕೆ ನನ್ನ ಎಕ್ಸ್ ಗರ್ಲ್‌ಫ್ರೆಂಡ್ ಸದ್ಯ ಆಕೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾನೆ ಆದಿಲ್. ಈ ವಿಚಾರ ತಿಳಿದ ರಾಖಿ ರಿಲ್ಯಾಕ್ಸ್ ಆಗಿದ್ದು, ಶೀಘ್ರದಲ್ಲೇ ಹಸಮಣೆ ಏರಲಿದ್ದಾರೆ ರಾಖಿ ಮತ್ತು ಆದಿಲ್.

Previous articleಹುಟ್ಟುಹಬ್ಬದ ಸಂಭ್ರಮದಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ.. ಹುಟ್ಟುಹಬ್ಬದಂದು ವಿಶೇಷ ಗಿಫ್ಟ್ ಪಡೆದುಕೊಂಡ ನಟಿ..
Next articleಮದುವೆ ಬಗ್ಗೆ ಶಾಕಿಂಗ್ ಸ್ಟೇಟ್ ಮೆಂಟ್ ಕೊಟ್ಟ ನಟಿ ಕಿಯಾರಾ….