Film News

ಕರ್ವ-3 ಚಿತ್ರದಲ್ಲಿ ನಟಿಸಲಿದ್ದಾರೆ ರಾಗಿಣಿ!

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲಿನಲ್ಲಿದ್ದು, ನಂತರ ಜಾಮೀನು ಮೇಲೆ ಹೊರಬಂದ ರಾಗಿಣಿ ಇದೀಗ ಪುನಃ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಕರ್ವ-3 ಚಿತ್ರದಲ್ಲಿ ಪ್ರಧಾನ ನಟಿಯಾಗಿ ರಾಗಿಣಿ ಬಣ್ಣ ಹಚ್ಚಲಿದ್ದಾರೆ.

ನಟಿ ರಾಗಿಣಿ ಜೈಲಿನಿಂದ ಹೊರಬಂದ ಬಳಿಕ ಕರ್ವ-3 ಚಿತ್ರಕ್ಕೆ ಸಹಿ ಹಾಕಿದ್ದಾರೆ. ಇತ್ತೀಚಿಗಷ್ಟೆ ನಿರ್ಮಾಪಕ ಕೆ.ಮಂಜು ರಾಗಿಣಿಯವರನ್ನು ಭೇಟಿ ಮಾಡಿದ್ದರು. ನಂತರ ಕರ್ವ-3 ಸಿನೆಮಾಗೆ ಸಹಿ ಮಾಡಿದ್ದಾರೆ. ಈ ಚಿತ್ರವನ್ನು ಕೃಷ್ಣ ಚೈತನ್ಯ ನಿರ್ಮಾಣ ಮಾಡುತ್ತಿದ್ದಾರೆ. ಅಂದಹಾಗೇ ಜೈಲಿನಿಂದ ಹೊರಬಂದ ಬಳಿಕ ರಾಗಿಣಿ ನಟಿಸಲಿರುವ ಮೊದಲ ಚಿತ್ರ ಇದಾಗಿದೆ.

ಇನ್ನೂ ಈ ಚಿತ್ರವನ್ನು ವಿಶಾಲ್ ಶೇಖರ್ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ತಿಲಕ್ ಮತ್ತು ಮೇಘನಾ ಗಾಂವ್ಕರ್ ಬಣ್ಣ ಹಚ್ಚಲಿದ್ದಾರೆ. ಇವರಿಬ್ಬರ ಜೊತೆ ರಾಗಿಣಿ ಸಹ ನಟಿಸಲಿದ್ದಾರೆ. ಕಳೆದ 2017 ರಲ್ಲಿ ಕರ್ವ ಚಿತ್ರ ಬಿಡುಗಡೆಯಾಗಿದ್ದು, ಹಿಟ್ ಹೊಡೆದಿತ್ತು. ನಂತರ ಕರ್ವ-2 ಸಿನೆಮಾ ಘೋಷಣೆ ಮಾಡಿತ್ತು ಚಿತ್ರತಂಡ. ಆದರೆ ಇದೀಗ ಕರ್ವ-3 ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ.

ನಟಿ ರಾಗಿಣಿ ಜಾಮೀನು ಮೇಲೆ ಜೈಲಿನಿಂದ ಹೊರಬಂದ ನಂತರ ಮಾತಾನಾಡುವುದು ಬಹಳಷ್ಟಿದೆ, ಸ್ವಲ್ಪ ಸಮಯ ಕೊಡಿ, ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳಿದ್ದರು. ಎಲ್ಲರ ನಿರೀಕ್ಷೆ ಡ್ರಗ್ಸ್ ಜಾಲದ ಕುರಿತು ಮಾಹಿತಿ ನೀಡುತ್ತಾರೆ ಎಂಬುದಾಗಿತ್ತಿ. ಆದರೆ ನಟಿ ರಾಗಿಣಿ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದು, ಇದೀಗ ಕರ್ವ-3 ಚಿತ್ರದಲ್ಲಿ ಬ್ಯುಸಿಯಾಗಲಿದ್ದಾರೆ.

Trending

To Top