Film News

ಜಾಮೀನು ಮೇಲೆ ಬಂದ ನಟಿ ರಾಗಿಣಿ: ಭರವಸೆ ಮಾತುಗಳೊಂದಿಗೆ ಪೋಸ್ಟ್ ಮಾಡಿದ್ರು..

ಬೆಂಗಳೂರು: ಡ್ರಗ್ಸ್ ಪ್ರಕರಣದ ಆರೋಪದ ಮೇರೆಗೆ ಸುಮಾರು 140 ದಿನಗಳ ಕಾಲ ಜೈಲಿನಲ್ಲಿದ್ದ ನಟಿ ರಾಗಿಣಿ ಇದೀಗ ಜಾಮೀನು ಮೇಲೆ ಹೊರಬಂದಿದ್ದು, ಮೊದಲಿನಂತೆ ತಮ್ಮ ಜೀವನ ಸಾಗಿಸಲು ಮುಂದಾಗಿದ್ದಾರೆ.

ನಟಿ ರಾಗಿಣಿ ಸುಮಾರು 140 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದು, ಕೆಲವು ದಿನಗಳ ಹಿಂದೆಯಷ್ಟೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಹೊರಬಂದಿದ್ದಾರೆ. ಜೈಲಿನಿಂದ ಹೊರಕ್ಕೆ ಬಂದ ರಾಗಿಣಿ ಮಾದ್ಯಮಗಳೊಂದಿಗೆ ಮಾತನಾಡಿದ್ದು, ನ್ಯಾಯಕ್ಕೆ ಸಿಕ್ಕಂತಹ ಜಯ ಇದಾಗಿದೆ. ಇನ್ನೂ ಸಾಕಷ್ಟು ವಿಚಾರಗಳು ಮಾತಾಡುವುದು ಬಾಕಿಯಿದೆ. ಪ್ರೆಸ್ ಮೀಟ್ ಮಾಡಿ ಎಲ್ಲವನ್ನೂ ತಿಳಿಸುತ್ತೇನೆ ಸದ್ಯ ನನಗೆ ಉಸಿರಾಡಲು ಅವಕಾಶ ನೀಡಿ ಎಂದಿದ್ದಾರೆ.

ಇನ್ನೂ ಕುಟುಂಬದೊಂದಿಗೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿರುವ ರಾಗಿಣಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು ಭರವಸೆಯ ಮಾತುಗಳನ್ನು ಸಹ ಬರೆದುಕೊಂಡಿದ್ದಾರೆ. ಜೊತೆಗೆ ಹೊಸ ವರ್ಷದ ಶುಭಾಷಯಗಳನ್ನು ಕೋರಿ, ಹೊಸ ವರ್ಷದಿಂದ ಕಾನೂನಿನ ಮೇಲೆ ಇದ್ದಂತಹ ನಂಬಿಕೆ ಸಹ ಬಲವಾಗಿದೆ ಎಂದು ಬರೆದುಕೊಂಡಿದ್ದಾರೆ.

ಜೊತೆಗೆ ಎಲ್ಲರೂ ನಗುತ್ತಾ ಇರೋಣ, ಆ ನಗುವಿಗೆ ಕಾರಣ ಏನು ಅಂತ ಇಡೀ ಜಗತ್ತೇ ಆಶ್ಚರ್ಯಪಡಲಿ ಎಂಬ ಮಾತುಗಳನ್ನು ಸಹ ಆಡಿದ್ದಾರೆ. ಸಂವಿಧಾನದಡಿಯಲ್ಲಿ ಎಲ್ಲರಿಗೂ ಸಿಗುವಂತೆ ನನ್ನ ಹಕ್ಕುಗಳಿಗೂ ರಕ್ಷಣೆ ಸಿಗುವುದು ಖಚಿತವಾಗಿದೆ. ನಾನು ಮತ್ತು ನನ್ನ ಕುಟುಂಬ ಈ ಪ್ರಕರಣದಿಂದ ತುಂಬಾ ನೊಂದಿದ್ದೇವೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ.

Trending

To Top