Film News

ಇನ್ಸ್ಟಾಗ್ರಾಂ ಲೈವ್ ನಲ್ಲಿ ಕಣ್ಣೀರಿಟ್ಟ ನಟಿ ರಾಗಿಣಿ!

ಬೆಂಗಳೂರು: ಡ್ರಗ್ ಕೇಸಿನಲ್ಲಿ ಆರೋಪಿಯಾಗಿರುವ ನಟಿ ರಾಗಿಣಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳ ಸಂಪರ್ಕದಲ್ಲಿದ್ದರು. ಇತ್ತೀಚಿಗಷ್ಟೆ ಇನ್ಸ್ಟಾಗ್ರಾಂ ಮೂಲಕ ಲೈವ್‌ಗೆ ಬಂದಿದ್ದು, ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದು, ಲೈವ್‌ನಲ್ಲಿ ಕೆಲವರು ಕೆಟ್ಟ ಕಾಮೆಂಟ್‌ಗಳನ್ನು ಮಾಡಿದ್ದು ಕಣ್ಣೀರಿಟ್ಟಿದ್ದಾರೆ.

ಇನ್ಸ್ಟಾ ಲೈವ್ ನಲ್ಲಿ ನಟಿ ರಾಗಿಣಿ ಮಾತನಾಡುತ್ತಾ ಡ್ರಗ್ಸ್ ಪಾರ್ಟಿ ವಿಚಾರವನ್ನು ಇಟ್ಟುಕೊಂಡು ಕೆಲವರು ನನ್ನ ಮೇಲೆ ತುಂಬಾ ನೆಗಟೀವ್ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅಸಭ್ಯವಾದ ಹೆಸರುಗಳನ್ನು ನನಗೆ ಇಟ್ಟಿದ್ದಾರೆ. ಒಬ್ಬ ಹೆಣ್ಣು ಮಗಳಿಗೆ ಇಂತಹ ಹೆಸರುಗಳನ್ನಿಟ್ಟು ಅವರ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದರೇ ನಿಮಗೆ ಏನು ಖುಷಿ ಸಿಗುತ್ತೋ ನನಗೆ ತಿಳಿಯುತ್ತಿಲ್ಲ. ನಿಮಗೆ ಅದರಿಂದಲೇ ಖುಷಿ ಸಿಕ್ಕುವುದಾದರೇ ನನಗೂ ಸಂತೋಷ. ಈ ರೀತಿಯಲ್ಲಾದರೂ ನಿಮಗೆ ಖುಷಿ ಸಿಕ್ಕಿದೆ ಅಲ್ವಾ ಎಂದುಕೊಳ್ಳುತ್ತೇನೆ ಎಂದಿದ್ದಾರೆ.

ನಾನು ಕರ್ನಾಟಕಕ್ಕೆ ಬಂದು ಸುಮಾರು 12 ವರ್ಷಗಳಾಗಿದೆ. ನನ್ನ ಜೀವನದಲ್ಲಿ ಸೋಲು ಗೆಲುವ ನಿರಂತರವಾಗಿ ಸಿಗುತ್ತಿತ್ತು. ಆದರೆ ಇದರಿಂದ ನಾನು ದೃತಿಗೆಡುತ್ತಿರಲಿಲ್ಲ. ಸಮಯ ಎಲ್ಲವನ್ನೂ ಸರಿ ಮಾಡುತ್ತದೆ ಎಂದು ಪಾಸಿಟೀವ್ ಆಗಿರುತ್ತಿದ್ದೆ. ಆದರೆ ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಆದರೆ ನನಗೆ ನನ್ನ ಕುಟುಂಬ ಶಕ್ತಿ ನೀಡಿದೆ ಎಂದು ಭಾವುಕರಾಗಿದ್ದಾರೆ.

Trending

To Top