Saturday, May 21, 2022
HomeFilm Newsಸ್ಪೂರ್ತಿದಾಯಕ ಮಾತುಗಳನ್ನಾಡಿದ ನಟಿ ರಾಧಿಕಾ ಪಂಡಿತ್…

ಸ್ಪೂರ್ತಿದಾಯಕ ಮಾತುಗಳನ್ನಾಡಿದ ನಟಿ ರಾಧಿಕಾ ಪಂಡಿತ್…

ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆ ನಟಿಯಾಗಿದ್ದಂತ ರಾಕಿಂಗ್ ಸ್ಟಾರ್‍ ಯಶ್ ಪತ್ನಿ ರಾಧಿಕಾ ಪಂಡಿತ್ ಮದುವೆಯಾದ ಬಳಿಕ ಸಿನೆಮಾಗಳಿಂದ ದೂರ ಉಳಿದಿದ್ದಾರೆ. ಆದರೂ ಸಹ ತಮ್ಮ ಅಭಿಮಾನಿಗಳಿಗಾಗಿ ಸದಾ ಸೋಷಿಯಲ್ ಮಿಡಿಯಾದಲ್ಲಿ ಅಪ್ಡೇಟ್ ಕೊಡುತ್ತಿರುತ್ತಾರೆ. ಅವರು ಹಾಕುವ ಪೋಸ್ಟ್‌ಗಳಿಗೆ ಅನೇಕರು ಹಿಂಬಾಲಕರಾಗಿದ್ದಾರೆ. ದೊಡ್ಡ ಮಟ್ಟದಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ಸಿನೆಮಾಗಳಿಂದ ದೂರವುಳಿದಿದ್ದರೂ ಸಹ ರಾಧಿಕಾಗೆ ಅನೇಕ ಡೈಹಾರ್ಡ್ ಫ್ಯಾನ್ಸ್ ಗಳು ಇದ್ದಾರೆ. ಜೊತೆಗೆ ಯಶ್ ಪತ್ನಿಯಾಗಿದ್ದ ಹಿನ್ನೆಲೆಯಲ್ಲಿ ಮತಷ್ಟು ಫೇಮಸ್ ಆಗಿದ್ದಾರೆ. ಇನ್ನೂ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಈ ನಟಿ ಹೊಸ ಹೊಸ ಪೊಟೋಗಳನ್ನು ಶೇರ್‍ ಮಾಡುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ. ಜೊತೆಗೆ ಆಗಾಗ ಸ್ಪೂರ್ತಿದಾಯಕವಾದಂತಹ ಮಾತುಗಳನ್ನು ಸಹ ಶೇರ್‍ ಮಾಡುತ್ತಾರೆ. ಸದ್ಯ ನಟಿ ರಾಧಿಕಾ ಶೇರ್‍ ಮಾಡಿರುವ ಪೋಸ್ಟ್ ಒಂದು ವೈರಲ್ ಆಗುತ್ತಿದೆ.

ನಟಿ ರಾಧಿಕಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಅನೇಕ ಪೊಟೋಗಳನ್ನು ಹಂಚಿಕೊಂಡು ಜೊತೆಗೆ ಕೆಲವೊಂದು ಸ್ಪೂರ್ತಿದಾಯಕ ಸಂದೇಶಗಳನ್ನು ಸಹ ಹರಡುತ್ತಾರೆ. ಆಗಾಗ ರಾಧಿಕಾ ಮಾಡುವಂತಹ ತುಂಟಾಟದ ವಿಡಿಯೋಗಳನ್ನು ತಮ್ಮ ಪತಿಯೊಂದಿಗೆ ಇರುವ ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿರುತ್ತಾರೆ. ಅಷ್ಟೇ ಅ‌ಲ್ಲದೇ ಜೀವನದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂಬೆಲ್ಲಾ ವಿಚಾರಗಳನ್ನು ಸಹ ರಾಧಿಕಾ ಪಂಡಿತ್ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಇದೀಗ ಅಂತಹದೇ ಪೊಟೋ ಒಂದು ವೈರಲ್ ಆಗುತ್ತಿದೆ.

ಸೋಷಿಯಲ್ ಮಿಡಿಯಾದಲ್ಲಿ ಎರಡು ಹೊಸ ಪೊಟೋಗಳನ್ನು ಹಂಚಿಕೊಂಡಿದ್ದಾರೆ ರಾಧಿಕಾ ಪಂಡಿತ್. ಇನ್ನೂ ಪೊಟೋ ಜೊತೆಗೆ ಕೆಲವೊಂದು ಸ್ಪೂರ್ತಿದಾಯಕ ಮಾತುಗಳನ್ನು ಸಹ ಹೇಳಿದ್ದಾರೆ. ಅವರು ಶೇರ್‍ ಮಾಡಿದಂತೆ ನಿಮ್ಮನ್ನು ನೀವು ಎಷ್ಟರ ಮಟ್ಟಿಗೆ ಪ್ರೀತಿ ಮಾಡುತ್ತೀರೋ, ಅಷ್ಟೊಂದು ಸುಂದರವಾಗಿ ಕಾಣುತ್ತೀರಿ. ಹ್ಯಾಪಿ ವಿಕೆಂಡ್ ಎಂದು ಹೇಳಿದ್ದಾರೆ. ಇನ್ನೂ ಈ ಪೋಸ್ಟ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ. ಅಷ್ಟೇ ಅಲ್ಲದೇ ಈ ಪೋಟೋಗಳಲ್ಲಿ ರಾಧಿಕ ಮುದ್ದಾಗಿ ಕಾಣಿಸಿದ್ದು, ಅಭಿಮಾನಿಗಳಿಂದ ಕಾಮೆಂಟ್ ಗಳ ಸುರಿಮಳೆ ಹರಿದು ಬರುತ್ತಿದೆ.

ಇನ್ನೂ ರಾಧಿಕಾ ಹಾಗೂ ನಟ ಯಶ್ ಕಳೆದ 2016 ರಲ್ಲಿ ಅದ್ದೂರಿಯಾಗಿ ಮದುವೆಯಾದರು. ಮದುವೆಯಾದ ಬಳಿಕ ಸಿನೆಮಾ ರಂಗದಿಂದ ದೂರವುಳಿದಿದ್ದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಜೊತೆಗೆ ಪತಿಯ ಸಿನೆಮಾ ಕೆಲಸಗಳಿಗೆ ಬೆಂಬಲ ಸಹ ನೀಡುತ್ತಾರೆ.  ಇನ್ನೂ ನಟಿಯ ಇನ್ಸ್ಟಾಗ್ರಾಂ ನಲ್ಲಿ 95 ಲಕ್ಷ ಜನ ಹಿಂಬಾಲಕರನ್ನು ಸಹ ಹೊಂದಿದ್ದಾರೆ.

- Advertisement -

You May Like

More