ಭರ್ಜರಿಯಾಗಿ ಸ್ಟೆಪ್ಸ್ ಹಾಕುತ್ತಾ, ಜಾರಿ ಬಿದ್ದ ರಾಧಿಕಾ ಕುಮಾರಸ್ವಾಮಿ, ವೈರಲ್ ಆಯ್ತು ವಿಡಿಯೋ…!

ಕನ್ನಡ ಸಿನಿರಂಗದಲ್ಲಿ ಒಂದು ಕಾಲದಲ್ಲಿ ಬಹುಬೇಡಿಕೆ ನಟಿಯಾಗಿ ಅನೇಕ ಹಿಟ್ ಸಿನೆಮಾಗಳನ್ನು ಮಾಡಿದ ಕೀರ್ತಿ ದಕ್ಕಿಸಿಕೊಂಡ ನಟಿಯರಲ್ಲಿ ರಾಧಿಕಾ ಕುಮಾರಸ್ವಾಮಿ ಸಹ ಒಬ್ಬರಾಗಿದ್ದಾರೆ. ಆಕೆ ಕೊನೆಯದಾಗಿ ದಮಯಂತಿ ಎಂಬ ಸಿನೆಮಾದಲ್ಲಿ ಕಾಣಸಿಕೊಂಡಿದ್ದರು. ಈ ಸಿನೆಮಾ ಬಳಿಕ ಆಕೆ ಬಣ್ಣದ ಜಗತ್ತಿಗೆ ದೂರವೇ ಇದ್ದಾರೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಪುಲ್ ಆಕ್ಟೀವ್ ಆಗಿಯೇ ಇದ್ದಾರೆ. ಸೋಷಿಯಲ್ ಮಿಡಿಯಾ ವೇದಿಕೆಯನ್ನಾಗಿ ಮಾಡಿಕೊಂಡು ಆಕೆ ತನ್ನ ಪೊಟೋಸ್, ವಿಡಿಯೋಸ್ ಶೇರ್‍ ಮಾಡುತ್ತಾ ತನ್ನ ಅಭಿಮಾನಿಗಳಿಗೆ ಹತ್ತಿರವಾಗಿರುತ್ತಾರೆ. ಇತ್ತಿಚಿಗೆ ಆಕೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ರಾಧಿಕಾ ಬಣ್ಣದ ಲೋಕಕ್ಕೆ ಕಾಲಿಟ್ಟು ಸುಮಾರು 20 ವರ್ಷಗಳು ಕಳೆಯುತ್ತಾ ಬಂದಿದೆ. ಅನೇಕ ಸಿನೆಮಾಗಳಲ್ಲಿ ಆಕೆ ಕಾಣಿಸಿಕೊಂಡು ಅಭಿನಯದ ಜೊತೆಗೆ ಗ್ಲಾಮರ್‍ ಮೂಲಕವೂ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡಿದ್ದರು. ನಿನಗಾಗಿ ಎಂಬ ಕನ್ನಡ ಸಿನೆಮಾದ ಮೂಲಕ ಸಿನಿ ಜಗತ್ತಿಗೆ ಕಾಲಿಟ್ಟ ಈಕೆ ಮೊದಲನೇ ಸಿನೆಮಾದಲ್ಲೇ ಅವಾರ್ಡ್ ಪಡೆದುಕೊಂಡರು. ಬಳಿಕ ಅನೇಕ ಹಿಟ್ ಸಿನೆಮಾಗಳಲ್ಲಿ ಕಾಣಿಸಿಕೊಂಡು ಎಲ್ಲರ ಮನಗೆದ್ದರು. ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ರಾಧಿಕಾ 2008 ರಲ್ಲಿ ಮದುವೆಯಾದರು. ಮದುವೆ ಬಳಿಕ ಮಗು ಎಂದು ಸಿನಿಮಾ ರಂಗದಿಂದ ದೂರವುಳಿದರು. ಸುಮಾರು ವರ್ಷಗಳ ಬಳಿಕ 2012 ರಲ್ಲಿ ಲಕ್ಕಿ ಎಂಬ ಸಿನೆಮಾದ ಮೂಲಕ ರೀ ಎಂಟ್ರಿ ಕೊಟ್ಟರು. ಬಳಿ ಸ್ವೀಟಿ, ಅವತಾರಂ, ರುದ್ರತಾಂಡವ, ದಮಯಂತಿ ಹೀಗೆ ಸಾಲು ಸಾಲು ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಆಕೆ ಸಿನೆಮಾಗಳಿಂದ ದೂರವುಳಿದಿದ್ದಾರೆ.

ಇನ್ನೂ ಸಿನೆಮಾಗಳಿಂದ ದೂರವುಳಿದ ಈಕೆ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿದ್ದಾರೆ. ಕೆಲವೊಂದು ರಿಯಾಲಿಟಿ ಶೋ ಗಳಲ್ಲೂ ಸಹ ಕಾಣಿಸಿಕೊಂಡು ಕಾರ್ಯಕ್ರಮಗಳಲ್ಲಿ ನೃತ್ಯ ಮಾಡುತ್ತಾ ವೀಕ್ಷಕರನ್ನು ಮನಸೊರೆಗೊಳ್ಳುವಂತೆ ಮಾಡಿದ್ದರು. ಇನ್ನೂ ಈಕೆ ಎರಡು ಇನ್ಸ್ಟಾ ಖಾತೆಗಳನ್ನು ಹೊಂದಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಹ ಗಳಿಸಿಕೊಂಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ಹೆಸರಿನಲ್ಲಿರುವ ಒಂದು ಇನ್ಸ್ಟಾ ಖಾತೆಯಲ್ಲಿ ರಾಧಿಕಾ ಭರ್ಜರಿಯಾಗಿ ಡ್ಯಾನ್ಸ್ ಮಾಡುವಂತಹ ವಿಡಿಯೋ ಒಂದನ್ನು ಶೇರ್‍ ಮಾಡಲಾಗಿದೆ. ಈ ವಿಡಿಯೋದಲ್ಲಿ ರಾಧಿಕಾ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಇನ್ನೂ ಡ್ಯಾನ್ಸ್ ಮಾಡುವಾಗ ಆಕೆ ಆಯತಪ್ಪಿ ಬಿದ್ದಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ರಾಧಿಕಾ ಕುಮಾರಸ್ವಾಮಿ ಒಳ್ಳೆಯ ನೃತ್ಯಗಾರ್ತಿ. ಒಂದು ಮಗವಿನ ತಾಯಿಯಾದರೂ ಸಹ ಆಕೆ ಯಂಗ್ ನಟಿಯರನ್ನೂ ನಾಚಿಸುವಂತಹ ಹಾಗೂ ಪೈಪೋಟಿ ನೀಡುವಂತಹ ಸೌಂದರ್ಯವನ್ನು ಹೊಂದಿದ್ದಾರೆ. ಇನ್ನೂ ರಾಧಿಕಾ ಡ್ಯಾನ್ಸ್ ಮಾಸ್ಟರ್‍ ಒಬ್ಬರ ಜೊತೆ ಡ್ಯಾನ್ಸ್  ಮಾಡುತ್ತಾ ಆಯತಪ್ಪಿ ಬಿದಿದ್ದಾರೆ. ಸದ್ಯ ರಾಧಿಕಾ ಭೈರಾದೇವಿ ಹಾಗೂ ರಾಜೇಂದ್ರ ಪೊನ್ನಪ್ಪ ಎಂಬ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ ಆಕೆ ತನ್ನ ಮಗಳ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನೂ ಸಹ ಪ್ರಾರಂಭಿಸಿದ್ದಾರೆ. ಶಮಿಕಾ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭ ಮಾಡಿದ್ದು, ಲಕ್ಕಿ ಹಾಗೂ ಸ್ವೀಟಿ ಎಂಬ ಸಿನೆಮಾಗಳನ್ನು ಸಹ ಇದೇ ಬ್ಯಾನರ್‍ ನಲ್ಲಿ ನಿರ್ಮಾಣ ಮಾಡಿದ್ದರು.

Previous articleಕಾರ್ತಿಕೇಯ-2 ಸಿನೆಮಾ ತಂಡದಿಂದ ಭರ್ಜರಿ ಆಫರ್, ಆ ಕೆಲಸ ನೀವು ಮಾಡಿ 6 ಲಕ್ಷ ಗೆಲ್ಲಿ….!
Next articleಆ ನಟಿಗೆ ವಿಜಯದೇವರಕೊಂಡ ರನ್ನು ಪೂರ್ಣ ಬೆತ್ತಲೆಯಾಗಿ ನೋಡಬೇಕೆಂಬ ಆಸೆಯಂತೆ…!