ಪ್ರಿಯಾಂಕಾಳ ಹೊಸ ಅವತಾರ ಕಂಡು ದಂಗಾದ ಅಭಿಮಾನಿಗಳು…. ರಕ್ತಸಿಕ್ತ ಮುಖದೊಂದಿಗೆ ಪ್ರತ್ಯಕ್ಷರಾದ ಪಿಂಕಿ…

ಖ್ಯಾತ ಬಹುಭಾಷ ನಟಿ ಪ್ರಿಯಾಂಕಾ ಚೋಪ್ರಾ ಸಿನೆಮಾಗಳ ಜೊತೆ ಸಾಮಾಜಿಕ ಜಾಲತಾಣಗಳಲ್ಲೂ ಸಹ ಬ್ಯುಸಿಯಾಗಿರುತ್ತಾರೆ. ಆಗಾಗ ಕೆಲವೊಂದು ಇಂಟ್ರಸ್ಟಿಂಗ್ ಪೊಟೋಗಳ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಳ್ಳುವ ಮೂಲಕ ಹತ್ತಿರವಾಗುತ್ತಾರೆ. ಜೊತೆಗೆ ಅವರು ಹಂಚಿಕೊಳ್ಳುವ ಪೊಟೋಗಳು ಸಹ ಸಖತ್ ವೈರಲ್ ಆಗುತ್ತಿರುತ್ತವೆ. ಇದೀಗ ನಟಿ ಹಂಚಿಕೊಂಡ ಕೆಲ ಪೊಟೋಗಳನ್ನು ಕಂಡು ಪ್ರಿಯಾಂಕಾ ಅಭಿಮಾನಿಗಳು ದಂಗಾಗಿದ್ದಾರೆ.

ಹೌದು ನಟಿ ಪ್ರಿಯಾಂಕಾ ಹಂಚಿಕೊಂಡ ಪೊಟೋ ಒಂದು ಅಭಿಮಾನಿಗಳನ್ನು ಶಾಕ್ ಗೆ ಗುರಿ ಮಾಡಿದೆ. ಪೊಟೋದಲ್ಲಿ ಪ್ರಿಯಾಂಕಾ ರಕ್ತಸಿಕ್ತವಾದ ಫೇಸ್ ನೊಂದಿಗೆ ಕಾಣಿಸಿಕೊಂಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಶಾಕ್ ಆಗಿ ಪ್ರಿಯಾಂಕಾ ರವರಿಗೆ ಏನಾಗಿದೆ ಎಂಬ ಗೊಂದಲಕ್ಕೆ ಗುರಿಯಾಗಿದ್ದಾರೆ. ಅಷ್ಟೇ ಅಲ್ಲದೇ ಈ ಪೊಟೋಗೆ ನಿಮಗೂ ಸಹ ಇಂದು ಕಠಿಣ ದಿನವಾಗಿದೆಯೇ ಎಂದು ಬರೆದುಕೊಂಡು ಕಲಾವಿದರ ಜೀವನ ಹಾಗೂ ಸಿಟಾಡೆಲ್ ಎಂಬ ಹ್ಯಾಷ್ ಟ್ಯಾಗ್ ಹಾಕಿದ್ದಾರೆ ಇದರಿಂದ ಪ್ರಿಯಾಂಕಾ ಅಭಿಮಾನಿಗಳು ಮತಷ್ಟು ಗೊಂದಲಕ್ಕೆ ಗುರಿಯಾಗಿದ್ದಾರೆ. ಇನ್ನೂ ಈ ಪೊಟೋ ಸದ್ಯ ವೈರಲ್ ಆಗುತ್ತಿದ್ದು, ಅಭಿಮಾನಿ ಹಾಗೂ ನೆಟ್ಟಿಗರಿಂದ ವಿವಿಧ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ.

ಇನ್ನೂ ಪ್ರಿಯಾಂಕಾಳ ಪೊಟೋ ಕಂಡು ಕೆಲವರು ನಿಜವಾಗಿಯೂ ಪ್ರಿಯಾಂಕಾ ರವರಿಗೆ ಗಾಯಗಳಾಗಿವೆಯೇ, ಈಗ ಆರೋಗ್ಯ ಹೇಗಿದೆ, ಆರಾಮಾಗಿದ್ದೀರಾ ಎಂದು ಕೇಳಿದರೇ ಮತ್ತೆ ಕೆಲವರು ಪ್ರಿಯಾಂಕಾ ಹಂಚಿಕೊಂಡ ಪೊಟೋ ಮೇಕಪ್ ಅಷ್ಟೆ ಎಂದು ಅಂದಾಜಿಸಿದ್ದಾರೆ. ಮತ್ತೆ ಕೆಲವರು ಪೊಟೋ ನೋಡಿ ಶಾಕ್ ಆಗಿದ್ದೇವೆ ಎಂದು ಕಾಮೆಂಟ್‌ ಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಪ್ರಿಯಾಂಕಾಳ ಈ ಪೊಟೋಗಳು ಸಖತ್ ವೈರಲ್ ಆಗುತ್ತಿವೆ. ಇನ್ನೂ ಪ್ರಿಯಾಂಕಾ ಹಂಚಿಕೊಂಡ ಈ ಪೊಟೋ ಸಿಟಾಡೆಲ್ ಎಂಬ ಸೈನ್ಸ್ ಫಿಕ್ಷನ್ ಸರಿರೀಸ್ ಆಗಿದೆ. ಈ ಸೀರಿಸ್ ಅನ್ನು ಖ್ಯಾತ ರೆಸ್ಟೋ ಬ್ರದರ್ಸ್ ಸಾರಥ್ಯದಲ್ಲಿ ಬರಲಿದ್ದು, ಅಮೇಜಾನ್ ಪ್ರೈಂ ನಲ್ಲಿ ಇದು ಬಿಡುಗಡೆಯಾಗಲಿದೆ. ಇನ್ನೂ ಈ ಸಿರೀಸ್ ನಲ್ಲಿ ಖ್ಯಾತ ನಟ ರಿಚರ್ಡ್ ಮ್ಯಾಡೆನ್ ಸಹ ಕಾಣಿಸಿಕೊಳ್ಳಲಿದ್ದಾರೆ.

ಇನ್ನೂ ಈ ಸಿಟಾಡೆಲ್ ಸಿರೀಸ್ ಚಿತ್ರೀಕರಣದ ಒಂದು ಹಂತವನ್ನು ಕಳೆದ ಡಿಸೆಂಬರ್‍ ನಲ್ಲೇ ಪೂರ್ಣಗೊಳಿಸಿದ್ದಾರೆ ಪ್ರಿಯಾಂಕಾ. ಇನ್ನೂ ಬಾಲಿವುಡ್ ಗೂ ರೀ ಎಂಟ್ರಿ ಕೊಡುತ್ತಿರುವ ಈಕೆ ಜೀ ಲೇ ಜರಾ ಎಂಬ ಅಂಡ್ವೆಂಚರ್‍ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಹಾಲಿವುಡ್ ನ ಇಟ್ಸ್ ಆಲ್ ಕಮಿಂಗ್ ಬ್ಯಾಕ್ ಟು ಮಿ ಸಿನೆಮಾದ ಜೊತೆ ಎಂಡಿಂಗ್ ಥಿಂಗ್ಸ್ ಎಂಬ ಸಿನೆಮಾದಲ್ಲೂ ಕಾಣಿಸಿಕೊಳ್ಳಿದ್ದಾರೆ. ಇನ್ನೂ ಸರೋಗೆಸಿ ವಿಧಾನದ ಮೂಲಕ ನಿಕ್ ಹಾಗೂ ಪ್ರಿಯಾಂಕಾ ಮೊದಲ ಮಗುವನ್ನು ಪಡೆದಿದ್ದು, ಅವಧಿಗೂ ಮುನ್ನವೇ ಮಗು ಜನ್ಮಿಸಿದ ಕಾರಣ ನೂರು ದಿನಗಳ ಕಾಲ ಮಗು ಐಸಿಯು ನಲ್ಲಿತ್ತು ಎಂಬ ವಿಚಾರವನ್ನು ಪ್ರಿಯಾಂಕಾ ವಿಶ್ವ ಅಮ್ಮಂದಿರ ದಿನದಂದು ಪೋಸ್ಟ್ ಮಾಡಿದ್ದರು.

Previous articleಅವಕಾಶ ಸಿಗದಿದ್ದರೇ, ಉದ್ಯೋಗ ಮಾಡಿಕೊಳ್ಳುತ್ತೇನೆ ನನಗೆ ಆ ತಾಕತ್ತು ಇದೆ ಎಂದ ನಟಿ…
Next articleಸಿನಿರಂಗದಲ್ಲಿನ ಲಿಂಗ ತಾರತಮ್ಯದ ಬಗ್ಗೆ ನಟಿ ರಮ್ಯಾಳ ಶಾಕಿಂಗ್ ಸ್ಟೇಟ್ ಮೆಂಟ್ಸ್….