ಪ್ರಿಯಾಂಕ ಚೋಪ್ರಾಗೆ ದುಬಾರಿ ಗಿಫ್ಟ್ ನೀಡಿದ ಪತಿ ನಿಕ್…..

ನಮ್ಮ ದೇಶದ ನಟಿ ಪ್ರಿಯಾಂಕ ಚೋಪ್ರಾ ಇದೀಗ ಗ್ಲೋಬಲ್ ಐಕಾನ್ ಆಗಿದ್ದಾರೆ. ಕೆಲವೊಂದು ಹಾಲಿವುಡ್ ಸಿನೆಮಾಗಳಲ್ಲೂ ಸಹ ನಟಿ ಪ್ರಿಯಾಂಕ ತೆರೆ ಹಂಚಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಸೆರಗೋಸಿ ಪದ್ದತಿಯ ಮೂಲಕ ಮಗುವಿಗೆ ಜನ್ಮ ಕೊಟ್ಟಿದ್ದರು. ನೂರು ದಿನಗಳ ಐಸಿಯು ನಲ್ಲಿದ್ದ ಮಗು ಮನೆಗೆ ಸುರಕ್ಷಿತವಾಗಿ ಬಂದ ಕುರಿತು ವಿಶ್ವ ಅಮ್ಮಂದಿರ ದಿನಾಚರಣೆ ದಿನದಂದು ಪ್ರಿಯಾಂಕ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಪುಲ್ ಖುಷಿಯಲ್ಲಿರುವ ಪ್ರಿಯಾಂಕಳಿಗೆ ಪತಿ ನಿಕ್ ದುಬಾರಿ ಗಿಫ್ಟ್ ಒಂದನ್ನು ನೀಡಿದ್ದಾರೆ.

ಪ್ರಿಯಾಂಕಳಿಗೆ ತಿಳಿಯದೇ ಸರ್ಪೈಸ್ ಆಗಿ ದುಬಾರಿ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ ನಿಕ್. ನಿಕ್ ಗೆ ಪ್ರಿಯಾಂಕ ಮೇಲೆ ಅಪಾರವಾದ ಪ್ರೀತಿ. ಪ್ರಿಯಾಂಕಗೂ ಸಹ ಪತಿಯೆಂದರೆ ಪಂಚ ಪ್ರಾಣ. ಇನ್ನೂ ಪ್ರೀತಿಯ ಪತಿ ನೀಡಿದ ಗಿಫ್ಟ್ ಗೆ ಫಿದಾ ಆಗಿದ್ದಾರೆ ಪ್ರಿಯಾಂಕ. ಇನ್ನೂ ಈ ಸಂತೋಷದ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. My Good Husband ಎಂಬ ಹ್ಯಾಷ್ ಟ್ಯಾಗ್ ಹಾಕಿ ಪೊಟೊ ಶೇರ್‍ ಮಾಡಿದ್ದಾರೆ. ಈ ರೈಡ್ ತುಂಬಾ ಚೆನ್ನಾಗಿದೆ. ಥ್ಯಾಂಕ್ಸ್ ನಿಕ್ ಜಾನ್ಸ್ ಎಂದು ಬರೆದುಕೊಂಡು, ಕೂಲ್ ಆಗಿರುವ ಪತಿ ನನಗೆ ಸದಾ ಸಹಾಯವಾಗಿ ಇರುತ್ತಾರೆ ಎಂದು ಪೋಸ್ಟ್ ಮಾಡಿದ್ದಾರೆ. ಇನ್ನೂ ಈ ಪೊಸ್ಟ್ ಗೆ ಸಿಕ್ಕಾಪಟ್ಟೆ ಲೈಕ್ಸ್ ಕಾಮೆಂಟ್ಸ್ ಬರುತ್ತಿದೆ.

ಅಂದಹಾಗೆ ನಿಕ್ ಪ್ರಿಯಾಂಕಗೆ ಖರಿದಿಸಿ ಕೊಟ್ಟ ವಾಹನದ ಬೆಲೆ ಕೇಳಿದರೇ ಶಾಕ್ ಆಗುತ್ತೀರಾ. ಪರ್ವತಗಳು ಹಾಗೂ ಹುಲ್ಲುಗಾವಲುಗಳಲ್ಲಿ ಸಂಚರಿಸಲು ಈ ವಾಹನವನ್ನು ಬಳಸಲಾಗುತ್ತದೆ ಪೊಲಾರಿಸ್ ಜನರಲ್ 1000 ಮಾದರಿಗೆ ಸೇರಿದ ಈ ಕಾರಿನ ಬೆಲೆ ಇಂಡಿಯನ್ ಕರೆನ್ಸಿಯಲ್ಲಿ 14.16 ಲಕ್ಷ ರೂಪಾಯಿಗಳಂತೆ. ಬೆಲೆ ಜಾಸ್ತಿಯಾಗದೇ ಇದ್ದರೂ ಸಹ ಪತಿ ನೀಡಿದ ಗಿಫ್ಟ್ ಗೆ ಪ್ರಿಯಾಂಕ ಪುಲ್ ಖುಷ್ ಆಗಿದ್ದಾರೆ. ಈ ಕುರಿತು ಪೊಟೋಗಳನ್ನು ಹಂಚಿಕೊಂಡು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕ ನಿಕ್ ದಂಪತಿ ಮನೆಗೆ ಮಗಳು ಬಂದ ಖುಷಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಿಯಾಂಕಳಿಗೆ ದುಬಾರಿ ಗಿಫ್ಟ್ ನೀಡಿದ್ದಾರೆ ನಿಕ್. ಗಿಫ್ಟ್ ಪಡೆದುಕೊಂಡ ಪ್ರಿಯಾಂಕ ಈ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಾರಿನ ಮೇಲೆ ಮಿಸೆಸ್ ಜಾನ್ಸ್ ಎಂದು ಬರೆದಿರುವುದ ಗಮನಾರ್ಹವಾದ ವಿಚಾರವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಬಹಳ ದಿನಗಳ ಬಳಿಕ ನಟಿ ಪ್ರಿಯಾಂಗ ಸಿಟಾಡೆಲ್ ಎಂಬ ಸಿನೆಮಾದ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ಗೇಮ್ ಆಫ್ ಥ್ರೋನ್ಸ್ ಸಿನೆಮಾ ಖ್ಯಾತಿ ರಿಚರ್ಡ್ ಮ್ಯಾಡೆನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಇತ್ತೀಚಿಗೆ ಆಕೆ ಈ ಸಿನೆಮಾದ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದರು. ಅವು ವೈರಲ್ ಆಗಿತ್ತು.

Previous articleಲಂಡನ್ ಪಂಚತಾರಾ ಹೋಟೆಲ್ ನಲ್ಲಿ ಎರಡನೇ ಮದುವೆಯಾದ ಗಾಯಕಿ ಕನಿಕಾ ಕಪೂರ್..
Next articleಮತ್ತೊಮ್ಮೆ ಹಾಟ್ ವಿಡಿಯೋ ಹರಿಬಿಟ್ಟ ಕಿರುತೆರೆ ನಟಿ ವಿಷ್ಣು ಪ್ರಿಯಾ….!