Film News

ಕೆಳಗೆ ಬಿದ್ದ ನಟಿ ಪ್ರಿಯಾ ವಾರಿಯರ್, ವಿಡಿಯೋ ವೈರಲ್!

ಹೈದರಾಬಾದ್: ತನ್ನ ಕಣ್ಣಿನ ಸನ್ನೆ ಮೂಲಕವೇ ಇಡೀ ದೇಶದ ಸಿನಿರಸಿಕರನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅನೇಕ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಪ್ರಿಯಾ ವಾರಿಯರ್ ಕೆಳಗೆ ಬಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಅಂದಹಾಗೆ ಪ್ರಿಯಾ ವಾರಿಯರ್ ಬಿದ್ದಿದ್ದು ಈಗಲ್ಲ. ತೆಲುಗು ನಟ ನಿತಿನ್ ಅಭಿನಯದ ಚೆಕ್ ಮೂವಿ ಚಿತ್ರೀಕರಣದ ವೇಳೆ ನಡೆದಂತಹ ವಿಡಿಯೋ ಒಂದನ್ನು ಸ್ವತಃ ಪ್ರಿಯಾ ವಾರಿಯರ್ ರವರೇ ಶೇರ್ ಮಾಡಿದ್ದಾರೆ. ಇದೀಗ ಈ ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚೆಕ್ ಚಿತ್ರದ ಮೂಲಕ ತೆಲುಗು ಸಿನಿರಂಗಕ್ಕೆ ಕಾಲಿಟ್ಟ ಪ್ರಿಯಾ ವಾರಿಯರ್ ಗೆ ಮುಂದಿನ ದಿನಗಳಲ್ಲಿ ಅವಕಾಶಗಳು ಹರಿದು ಬರಲಿದೆ ಎನ್ನಲಾಗುತ್ತಿದೆ.

ಇನ್ನೂ ವೈರಲ್ ಆದ ವಿಡಿಯೋ ವಿಚಾರಕ್ಕೆ ಬಂದರೇ ಚೆಕ್ ಸಿನೆಮಾದ ಶೂಟಿಂಗ್ ನಲ್ಲಿ ದೃಶ್ಯವೊಂದರ ಚಿತ್ರೀಕರಣ ನಡೆಯುತ್ತಿರುತ್ತದೆ. ಈ ದೃಶ್ಯದಲ್ಲಿ ನಟಿ ಪ್ರಿಯಾ ವಾರಿಯರ್ ನಿತಿನ್ ಹೆಗಲ ಮೇಲೆ ಏರಬೇಕಿರುತ್ತದೆ. ಈ ವೇಳೆ ಪ್ರಿಯಾ ಯಾರೂ ಊಹಿಸದ ರೀತಿಯಲ್ಲಿ ಕೆಳಗೆ ಬಿದ್ದುಬಿಡುತ್ತಾರೆ. ಎಲ್ಲರೂ ಗಾಬರಿಯಿಂದ ಹತ್ತಿರ ಹೋಗುವ ವೇಳೆ ಆಕೆಯ ಎದ್ದು ನಿಂತು, ಈ ಲೈಫ್ ನನ್ನನ್ನು ಹಿಂದೆ ತಳ್ಳಲು ಪ್ರಯತ್ನಿಸುತ್ತಿದೆ. ನಾನು ಬಿದ್ದರೂ ಪೂರ್ಣ ವಿಶ್ವಾಸದೊಂದಿಗೆ ಮುನ್ನುಗ್ಗುತ್ತೇನೆ ಎಂಬ ಕೊಟೇಷನ್ ಸಹ ಹಾಕಿದ್ದಾರೆ.

ಇನ್ನೂ ಪ್ರಿಯಾ ಪ್ರಕಾಶ್ ವಾರಿಯರ್ ಒರು ಆಧಾರ್ ಲವ್ ಚಿತ್ರದಲ್ಲಿ ಕಣ್ಣು ಸನ್ನೆ ಮಾಡುವ ಸಣ್ಣ ಕ್ಲಿಪ್ ಮೂಲಕವೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಶ್ರೀದೇವಿ ಬಂಗ್ಲಾ ಎಂಬ ಕಾಂಟ್ರವರ್ಸಿ ಸಿನೆಮಾದಲ್ಲೂ ಸಹ ನಟಿಸಿದ್ದು, ನಿತಿನ್ ಜೊತೆ ಚೆಕ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

Trending

To Top