ಪ್ರಗ್ನೆನ್ಸಿ ಸಮಯದಲ್ಲೂ ಫಿಟ್‌ನೆಸ್ ಇಂರ್ಪಾಟೆಂಟ್ ಎಂದ ನಟಿ ಪ್ರಣಿತಾ

ಗರ್ಭಿಣಿಯಾದಾಗ ತುಂಬಾ ಬಲಿಷ್ಟವಾಗಿರಬೇಕು, ಫಿಟ್ ಆಗಿರಬೇಕು ಎಂದ ನಟಿ ಪ್ರಣಿತಾ, ಜಿಮ್ ನಲ್ಲಿ ಡ್ಯಾನ್ಸ್ ಮಾಡುವ ವಿಡಿಯೋ ಶೇರ್‍ ಮಾಡುವ ಮೂಲಕ ತಿಳಿಸಿದ್ದಾರೆ. ಡ್ಯಾನ್ಸ್ ಟು ಟ್ರೈವಿಂಗ್ ದಿ ಪ್ರೆಗ್ನೆನ್ಸಿ ಬ್ಲೂಸ್, ಮೇಜರ್‍ ಥ್ರೋಬ್ಯಾಕ್ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ನಟಿ ಪ್ರಣಿತಾ ತಮ್ಮ ದಿನನಿತ್ಯದ ಅಪ್ಡೇಟ್ ಗಳನ್ನು ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಇದೇ ರೀತಿ ಅನೇಕ ತಾರೆಯರು ತಮ್ಮ ದೈನಿಕ ಅಪ್ಡೇಟ್‌ಗಳನ್ನು ತಿಳಿಸುತ್ತಾರೆ. ನಟಿ ಪ್ರಣಿತಾ ಸುಭಾಷ್ ಅನೇಕ ಚಟುವಟಿಕೆಗಳ ಕುರಿತು, ದಿನದ ಚಟುವಟಿಕೆಗಳ ಕುರಿತು ವಿಡಿಯೋಗಳನ್ನು ಪೊಟೋಗಳನ್ನು ಶೇರ್‍ ಮಾಡಿಕೊಳ್ಳುತ್ತಿರುತ್ತಾರೆ. ಇದೀವ ಪ್ರಣಿತಾ ತಮ್ಮ ಇನ್ಸ್ಟಾ ದಲ್ಲಿ ತಮ್ಮ ಥ್ರೋಬ್ಯಾಕ್ ವಿಡಿಯೋವನ್ನು ಶೇರ್‍ ಮಾಡಿದ್ದಾರೆ.

ಇನ್ನೂ ಇತ್ತೀಚಿಗಷ್ಟೆ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ತನ್ನ ಪತಿ ನಿತಿನ್ ರಾಜು ಜೊತೆಗಿನ ಪೋಟೋ ಹಂಚಿಕೊಳ್ಳುವ ಮೂಲಕ ತಾನು ಗರ್ಣಿಣಿಯಾಗಿದ್ದಾನೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದರು. ಇದೀಗ ನಟಿ ತನ್ನ ಬೇಬಿ ಬಂಪ್ ಪೊಟೋ ಶೇರ್‍ ಮಾಡಿ ಜಿಮ್ ನಲ್ಲಿ ವರ್ಕೌಟ್ ಮಾಡುವ ವಿಡಿಯೋ ಒಂದನ್ನು ಸಹ ಶೇರ್‍ ಮಾಡಿದ್ದಾರೆ. ಇನ್ನೂ ಡ್ಯಾನ್ಸ್ ಟು ಟ್ರೈವಿಂಗ್ ದಿ ಪ್ರೆಗ್ನೆನ್ಸಿ ಬ್ಲೂಸ್, ಮೇಜರ್‍ ಥ್ರೋಬ್ಯಾಕ್ ಎಂದು ಬರೆದುಕೊಂಡು ಪೊಟೋ ಶೇರ್‍ ಮಾಡಿದ್ದಾರೆ.

ಈ ಪೋಸ್ಟ್ ಮೂಲಕ ಗರ್ಭಿಣಿಯ ಸಮಯದಲ್ಲಿ ಫಿಟ್ ಆಗಿರಬೇಕೆಂಬುದನ್ನು ತಿಳಿಸಿಕೊಟ್ಟಿದ್ದಾರೆ. ತಮ್ಮ ದಿನ ಫಿಟ್‌ನೆಸ್ ಆಗಿ ಇರಬೇಕು ಎಂಬ ದೃಷ್ಟಿಯಿಂದ ಗರ್ಭಿಣಿಯರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ವಿಡಿಯೋಗಳನ್ನು ಶೇರ್‍ ಮಾಡಿದ್ದರು.

Previous articleದಕ್ಷಿಣ ಭಾರತದ ಹಿರೋಗಳೆಂದರೇ ಬಾಲಿವುಡ್ ಹಿರೋಗಳಿಗೆ ಜೆಲಸಿ ಎಂದ ವರ್ಮಾ…
Next articleಪುಷ್ಪಾ ಸಿನೆಮಾ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ವಿರಾಟ್ ಕೊಹ್ಲಿ..