ನಟಿ ಪ್ರಣಿತಾ ಹಂಚಿಕೊಂಡ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್… ವಿಡಿಯೋದಲ್ಲಿ ಏನಿದೆ ಗೊತ್ತಾ?

ಮುದ್ದಾದ ನಗುವಿನೊಂದಿಗೆ ಎಲ್ಲರ ಮನಗೆದ್ದ ನಟಿ ಪ್ರಣಿತಾ ಸುಭಾಷ್ ಜೂನ್ 10 ರಂದು ಮುದ್ದಾದ ಮಗುವಿಗೆ ಜನ್ಮ ಕೊಟ್ಟರು. ಹೆಣ್ಣುಮಗುವಿಗೆ ಜನ್ಮ ಕೊಡುವ ಮೂಲಕ ಮೊದಲ ತಾಯ್ತನದ ಖುಷಿಯನ್ನು ಸಂಭ್ರಮಿಸಿದ್ದಾರೆ. ಇನ್ನೂ ಈ ವಿಚಾರವನ್ನು ಸೋಷಿಯಲ್ ಮಿಡಿಯಾ ಮೂಲಕ ಎಲ್ಲರೊಂದಿಗೆ ಹಂಚಿಕೊಂಡಿದ್ದರು ನಟಿ ಪ್ರಣಿತಾ ಸುಭಾಷ್. ಇದೀಗ ಈಕೆ ಮತ್ತೊಂದು ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇತ್ತೀಚಿಗೆ ಬಹುತೇಕ ನಟಿಯರು ಗರ್ಭಿಣಿಯಾದಾಗಿನಿಂದ ಬೇಬಿ ಬಂಪ್, ಬೇಬಿ ಶವರ್‍ ಹೀಗೆ ಪ್ರತಿಯೊಂದು ವಿಚಾರವನ್ನು ಪೊಟೋಗಳ ಮೂಲಕ ಅಭಿಮಾನಿಗಳೊಂದಿಗೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಬೇಬಿ ಬಂಪ್ ಪೊಟೋ ಶೂಟ್ ಮಾಡಿಸಿ ಆ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡು ಹವಾ ಸೃಷ್ಟಿ ಮಾಡುತ್ತಿರುತ್ತಾರೆ. ಆದರೆ ಹುಟ್ಟಿದ ಕ್ಷಣದಲ್ಲಿ ಮಗು ಹೇಗಿದೆ ಎಂಬುದರ ಬಗ್ಗೆ ಮಾತ್ರ ಯಾವುದೇ ನಟಿ ವಿಡಿಯೋ ಮೂಲಕವಾಗಲೀ ಅಥವಾ ಪೊಟೋ ಆಗಲಿ ಶೇರ್‍ ಮಾಡಿಲ್ಲ. ಆದರೆ ನಟಿ ಪ್ರಣಿತಾ ಈ ಸಾಹಸಕ್ಕೆ ಕೈ ಹಾಕಿದ್ದಾರೆ. ತಮ್ಮ ಮಗು ಹುಟ್ಟಿದ ಕ್ಷಣಗಳನ್ನು ವಿಡಿಯೋದಲ್ಲಿ ಚಿತ್ರೀಕರಿಸಿದ್ದು, ಈ ವಿಡಿಯೋವನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಎಲ್ಲರನ್ನೂ ಆಶ್ಚರ್ಯಕ್ಕೆ ಗುರಿ ಮಾಡಿದ್ದಾರೆ.

ನಟಿ ಪ್ರಣಿತಾ ಈ ಹಿಂದೆ ಮಗುವಾದ ಸಮಯದಲ್ಲಿ ತನಗೆ ಹೆರಿಗೆ ಮಾಡಿಸಿದ ವೈದ್ಯರ ಬಗ್ಗೆ ಹಾಗೂ ಹೆರಿಗೆ ಸಮಯದ ಹೇಗಿರುತ್ತದೆ ಎಂಬುದರ ಬಗ್ಗೆ ಬರೆದುಕೊಂಡಿದ್ದಾರೆ. ನಮಗೆ ಹೆಣ್ಣು ಮಗು ಜನಿಸಿದ ಕ್ಷಣದಿಂದಲೂ ಕೆಲವು ದಿನಗಳು ಅತಿವಾಸ್ತವಿಕ ಅಂತ ಅನಿಸುತ್ತದೆ. ನಾನು ಸ್ತ್ರೀ ರೋಗ ತಜ್ಞೆಯಾಗಿರುವ ತಾಯಿಯನ್ನು ಪಡೆದುಕೊಂಡಿರುವುದಕ್ಕೆ ಅದೃಷ್ಟವಂತೆ. ಆದರೆ ತಾಯಿಗೂ ಸಹ ಭಾವನಾತ್ಮಕವಾಗಿ ಇದು ತುಂಬಾ ಕಠಿಣ ಸಮಯವಾಗಿತ್ತು. ಡಾ.ಸುನೀಲ್ ಈಶ್ವರ್‍ ಹಾಗೂ ಅವರ ತಂಡ ನನಗೆ ಕಷ್ಟಕರ ಎನ್ನಿಸಿದಂತೆ ಹೆರಿಗೆ ಮಾಡಿಸಿದ್ದಾರೆ. ಅರವಳಿಕೆ ತಜ್ಞರಾದ ಡಾ.ಸುಬ್ಬು ಹಾಗೂ ಅವರ ತಂಡಕ್ಕೂ ಸಹ ಧನ್ಯವಾದಗಳನ್ನು ತಿಳಿಸಿದ್ದರು. ಈ ಪೋಸ್ಟ್ ಸಹ ವೈರಲ್ ಆಗಿತ್ತು. ಇದೀಗ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ.

https://www.instagram.com/p/CeserkVl3Be/?hl=en

ಆ ವಿಡಿಯೋ ಹಂಚಿಕೊಂಡಿದ್ದು ಯಾಕೆ ಎನ್ನುವ ವಿಚಾರಕ್ಕೆ ಬಂದರೇ ಈ ಹಿಂದೆ ನಟಿ ಪ್ರಣಿತಾ ಹಂಚಿಕೊಂಡ ಪೋಸ್ಟ್ ಗೆ ಎಲ್ಲರೂ ಶುಭಾಷಯ ಕೋರಿದ್ದರು. ಆದರೆ ಒಬ್ಬ ನೆಟ್ಟಿಗ ನಿಮ್ಮದು ನಾರ್ಮಲ್ ಡಿಲೆವರಿನಾ ಎಂದು ಕೇಳಿದ್ದಾನೆ. ಇದಕ್ಕೆ ಪ್ರಣಿತಾ ಸಹ ಸ್ಪಂದಿಸಿದ್ದು. ತಮ್ಮದು ನಾರ್ಮಲ್ ಡಿಲಿವರಿಯಾಗಿದ್ದು, ಸುಮಾರು 12 ಗಂಟೆಗಳ ಕಾಲ ಪ್ರಸವ ವೇದನೆಯನ್ನು ಅನುಭವಿಸಿದ್ದಾಗಿ, ಬಳಿಕ ಡಿಲಿವರಿ ಆಗಿದೆ ಎಂದು ಹೇಳಿದ್ದಾರೆ. ಜೊತೆಗೆ ಯಾರು ಮಾಡದ ರೀತಿಯಲ್ಲಿ ಪ್ರಣಿತಾ ದೊಡ್ಡ ಸಾಹಸ ಮಾಡಿದ್ದಾರೆ. ಇನ್ನೂ ಪ್ರೆಗ್ನೆನ್ಸಿಯಾದಾಗಿನಿಂದ ಪ್ರತಿಯೊಂದು ಸಂದರ್ಭದವನ್ನು ಮಗು ಜನ್ಮಿನಿಸಿದ ವರೆಗೂ ಪ್ರತಿಯೊಂದು ಕ್ಷಣವನ್ನು ವಿಡಿಯೋ ರೂಪದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅದರಲ್ಲೂ ಈ ವಿಡಿಯೋದಲ್ಲಿ ಮಗು ಜನ್ಮಿಸಿದಾಗ ರಕ್ತದಲ್ಲಿದ್ದ ಕೂಸನ್ನು ಸಹ ತೋರಿಸುವ ಮೂಲಕ ಎಲ್ಲರನ್ನೂ ಸರ್ಪೈಸ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಇಂಟರ್‍ ನೆಟ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Previous articleಬಹುನಿರೀಕ್ಷಿತ ಬ್ರಹ್ಮಾಸ್ತ್ರ ಸಿನೆಮಾ ಟ್ರೈಲರ್ ಗೆ ಮೆಗಾಸ್ಟಾರ್ ಚಿರು ವಾಯ್ಸ್…!
Next articleವಿದೇಶದಲ್ಲಿ ಮಹೇಶ್ ಬಾಬು ಹಾಲಿಡೇಸ್ ಎಂಜಾಯ್… ಟ್ರಿಪ್ ನಲ್ಲಿ ಹೈಲೈಟ್ ಆದ ಪ್ರಿನ್ಸ್ ಪುತ್ರಿ….!