ಸ್ಯಾಂಡಲ್ ವುಡ್ ನಟಿ ಪ್ರಣಿತಾ ಮಗಳ ಹೆಸರು ಅರ್ನಾ…!

ದಕ್ಷಿಣ ಭಾರತದ ಖ್ಯಾತ ನಟಿ ಪ್ರಣಿತಾ ಸುಭಾಷ್ ಕಡಿಮೆ ಸಮಯದಲ್ಲೇ ಹೆಚ್ಚು ಖ್ಯಾತಿ ಹೊಂದಿದ ನಟಿಯಾಗಿದ್ದಾರೆ. ನಟಿ ಪ್ರಣಿತಾ ಇತ್ತೀಚಿಗಷ್ಟೆ ಗರ್ಭಿಣಿಯಾಗಿದ್ದ ವಿಚಾರ ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದರು. ಕೆಲವು ದಿನಗಳ ಹಿಂದೆಯೂ ಸಹ ಬೇಬಿ ಬಂಪ್, ಬೇಬಿ ಶವರ್‍ ಪೊಟೋಶೂಟ್ ಮಾಡಿಸಿ ಪೊಟೋಗಳನ್ನು ಹಂಚಿಕೊಂಡಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ನಟಿ ಪ್ರಣಿತಾರಿಗೆ ಜೂನ್ 10 ವಿಶೇಷವಾದ ದಿನವಾಗಿದೆ. ಜೂನ್ 10 ರಂದು ಪ್ರಣಿತಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಆಕೆ ಸೋಷಿಯಲ್ ಮಿಡಿಯಾ ಮೂಲಕವೇ ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಜೂನ್ 10ರಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮೊದಲ ಮಗುವಿನ ಖುಷಿಯನ್ನು ಸಂಭ್ರಮಿಸಿದ್ದರು. ಇನ್ನೂ ಪ್ರಣಿತಾ ಈ ಸಂತಸವನ್ನು ಸೋಷಿಯಲ್ ಮಿಡಿಯಾ ಮೂಲಕ ಶೇರ್‍ ಮಾಡಿಕೊಂಡಿದ್ದು,  ಜೊತೆಗೆ ಮಗುವಿನ ಜೊತೆಗಿರುವ ಪೊಟೋಗಳನ್ನು ಸಹ ಹಂಚಿಕೊಂಡಿದ್ದರು.  ಮಗುವಿಗೆ ಜನ್ಮ ಕೊಟ್ಟ ವಿಚಾರವನ್ನು ಆಕೆ ತನ್ನ ಅಭಿಮಾನಿಗಳೊಂದಿಗೆ ಸೋಷಿಯಲ್ ಮಿಡಿಯಾ ಮೂಲಕವೇ ಹಂಚಿಕೊಂಡಿದ್ದರು. ಸದ್ಯ ಪ್ರಣಿತಾ ಮಗುವಿನ ಹಾರೈಕೆ ಮಾಡುತ್ತಾ ತಾಯ್ತನದ ಕ್ಷಣ ಕ್ಷಣವನ್ನೂ ಸಹ ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಇತ್ತೀಚಿಗಷ್ಟೆ ಪ್ರಣಿತಾ ತಮ್ಮ ಮುದ್ದಿನ ಮಗಳ ಪೊಟೋಗಳನ್ನು ಸಹ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಮಗುವನ್ನು ನೋಡಿದ ಆಕೆಯ ಅಭಿಮಾನಿಗಳೂ ಸಹ ತುಂಬಾ ಸಂತಸ ವ್ಯಕ್ತಪಡಿಸಿ ಮಗುವಿಗೆ ಶುಭ ಕೋರಿದ್ದರು.

ಇನ್ನೂ ಪ್ರಣಿತಾ ಮಗಳಿಗೆ ಸಂಬಂಧಿಸಿದ ಅಪ್ಡೇಟ್ ಗಳನ್ನು ಆಗಾಗ ನೀಡುತ್ತಲೇ ಇದ್ದರು. ನಟಿ ಪ್ರಣಿತಾ ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವೇ ಉಳಿದಿದ್ದಾರೆ. ಸಾಲು ಸಾಲು ಸಿನೆಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದ ಈಕೆ ಇದೀಗ ಸೋಷಿಯಲ್ ಮಿಡಿಯಾ ಮೂಲಕವೇ ರಂಜಿಸುತ್ತಿದ್ದಾರೆ. ಇನ್ನೂ ಇತ್ತೀಚಿಗೆ ಆಕೆ ಕಡಲ ತೀರದಲ್ಲಿ ಬಿಕಿನಿಯಲ್ಲಿ ದರ್ಶನ ಕೊಟ್ಟಿದ್ದರು. ಆಕೆಯನ್ನು ನೋಡಿದ ಅನೇಕರು ಆಕೆಯನ್ನು ಒಂದು ಮಗುವಿನ ತಾಯಿ ಎಂದು ಕರೆಯಲು ಸಾಧ್ಯವೇ ಇಲ್ಲ ಎಂದಿದ್ದರು. ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಬ್ಯುಸಿಯಾಗಿರುವ ಈಕೆ ಪೋಸ್ಟ್ ಹಂಚಿಕೊಂಡರೇ ಸಾಕು ಕ್ಷಣ ಮಾತ್ರದಲ್ಲೇ ವೈರಲ್ ಆಗಿಬಿಡುತ್ತದೆ. ಇದೀಗ ಪ್ರಣಿತಾ ತನ್ನ ಮುದ್ದಿನ ಮಗಳಿಗೆ ಹೆಸರನ್ನು ಇಟ್ಟಿದ್ದು, ಜೊತೆಗೆ ಪೊಟೋ ಒಂದನ್ನು ಶೇರ್‍ ಮಾಡಿದ್ದಾರೆ. ಇದು ಎಲ್ಲೆಡೆ ವೈರಲ್ ಆಗುತ್ತಿದೆ.

ನಟಿ ಪ್ರಣಿತಾ ಸದಾ ಸೋಷಿಯಲ್ ಮಿಡಿಯಾದಲ್ಲಿ ಪೊಟೋಗಳು, ವಿಡಿಯೋಗಳನ್ನು ಹಂಚಿಕೊಳ್ಳುವುದರ ಜೊತೆಗೆ ಆಗಾಗ ಕೆಲವೊಂದು ಹೆಲ್ತ್ ಟಿಪ್ಸ್ ಗಳನ್ನು ಸಹ ನೀಡುತ್ತಿದ್ದರು. ಗರ್ಭಿಣಿಯಾದ ವಿಚಾರ, ಬೇಬಿ ಬಂಪ್ ಪೊಟೋಶೂಟ್, ಸೀಮಂತ ಕಾರ್ಯಕ್ರಮ ಹೀಗೆ ಪ್ರತಿಯೊಂದು ಸಂತಸದ ಕ್ಷಣವನ್ನೂ ಸಹ ಆಕೆ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ಇದೀಗ ಮಗುವಿಗೆ ಹೆಸರನ್ನು ಇಟ್ಟಿರುವ ವಿಚಾರವನ್ನು ಸಹ ಆಕೆ ಹಂಚಿಕೊಂಡಿದ್ದಾರೆ. ಅಂದಹಾಗೆ ನಟಿ ಪ್ರಣಿತಾಳ ಮಗಳ ಹೆಸರು ಅರ್ನಾ ಎಂದು ಹೆಸರಿಟ್ಟಿದ್ದಾರೆ. ಇದರ ಜೊತೆಗೆ ಮಗಳ ಪೊಟೋ ಸಹ ಶೇರ್‍ ಮಾಡಿದ್ದು, ಆಕೆಯ ಅಭಿಮಾನಿಗಳೂ ಸೇರಿದಂತೆ ನೆಟ್ಟಿಗರೂ ಸಹ ಪೊಟೋಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Previous articleಎಮೋಷನಲ್ ಪೋಸ್ಟ್ ಮಾಡಿದ ಅನುಪಮಾ ಪರಮೇಶ್ವರನ್, ನನ್ನ ಸಮಸ್ಯೆ ಅರ್ಥ ಮಾಡಿಕೊಳ್ಳಿ ಎಂದ ನಟಿ…!
Next articleಪತ್ನಿಯೊಂದಿಗೆ ಹಾಲಿಡೇಸ್ ಎಂಜಾಯ್ ಮಾಡುತ್ತಿದ್ದಾರೆ ಜೂನಿಯರ್ ಎನ್.ಟಿ.ಆರ್, ವೈರಲ್ ಆಯ್ತು ಪೊಟೋ….!