Home Film News ನಟಿಯಾದ ಮಾತ್ರಕ್ಕೆ ಅದೆಲ್ಲಾ ಬಿಡಬೇಕಾ ಎಂದು ಟ್ರೋಲರ್ ಗಳಿಗೆ ಸ್ಟ್ರಾಂಗ್ ಡೋಸ್ ಕೊಟ್ಟ ಪ್ರಣಿತಾ…!

ನಟಿಯಾದ ಮಾತ್ರಕ್ಕೆ ಅದೆಲ್ಲಾ ಬಿಡಬೇಕಾ ಎಂದು ಟ್ರೋಲರ್ ಗಳಿಗೆ ಸ್ಟ್ರಾಂಗ್ ಡೋಸ್ ಕೊಟ್ಟ ಪ್ರಣಿತಾ…!

ಸೌತ್ ಸಿನಿರಂಗದಲ್ಲಿ ತಮ್ಮದೇ ಆದ ರೀತಿಯಲ್ಲಿ ಫೇಮ್ ಗಳಿಸಿಕೊಂಡ ನಟಿ ಪ್ರಣಿತಾ ಸುಭಾಷ್ ಇತ್ತೀಚಿಗಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ಹಾರೈಕೆಯಲ್ಲಿರುವ ಈಕೆ ಇತ್ತೀಚಿಗಷ್ಟೆ ಬಿಕಿನಿಯಲ್ಲಿ ಪೋಸ್ ಕೊಟ್ಟಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಆಕೆ ತನ್ನ ಪತಿಗೆ ಪಾದ ಪೂಜೆ ಮಾಡಿದ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಇದಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೇ, ಮತ್ತೆ ಕೆಲವರು ವಿಮರ್ಶೆ ಮಾಡಿದ್ದರು. ಇದೀಗ ಪ್ರಣಿತಾ ವಿಮರ್ಶಕರಿಗೆ ಸ್ಟ್ರಾಂಗ್ ಡೋಸ್ ಕೊಟ್ಟಿದ್ದಾರೆ.

ನಟಿ ಪ್ರಣಿತಾ ತನ್ನ ಪತಿಗೆ ಪಾದ ಪೂಜೆ ಮಾಡುವ ಪೊಟೋ ಒಂದನ್ನು ಆಕೆ ಹಂಚಿಕೊಂಡಿದ್ದರು. ಭೀಮನ ಅಮಾವಸ್ಯೆ ನಿಮಿತ್ತ ಪ್ರಣಿತಾ ತನ್ನ ಪತಿ ನಿತಿನ್ ರಾಜ್ ರವರಿಗೆ ಪಾದ ಪೂಜೆ ಮಾಡಿದ್ದರು. ಇನ್ನೂ ಆಕೆ ಹಂಚಿಕೊಂಡ ಈ ಪೊಟೋ ಸಖತ್ ವೈರಲ್ ಆಗಿತ್ತು. ಜೊತೆಗೆ ಅನೇಕರು ಆಕೆಯ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನೂ ಈ ಪೊಟೋ ವೈರಲ್ ಆಗುತ್ತಿದ್ದಂತೆ ಅನೇಕರು ಮೆಚ್ಚುಗೆಯ ಕಾಮೆಂಟ್ ಗಳನ್ನು ಹಂಚಿಕೊಂಡರು ಆದರೆ ಕೆಲವರಂತೂ ಈ ಪೊಟೋಗೆ ತುಂಬಾ ವಿಮರ್ಶೆ ಮಾಡಿದ್ದಾರೆ. ಈ ಕಾಲದಲ್ಲೂ ಸಹ ಪತಿಯ ಪಾದ ಪೂಜೆ ಮಾಡುವುದು ಅಂದರೇ ಏನು, ಇನ್ನೂ ನೀವು ಯಾವ ಕಾಲದಲ್ಲಿ ಇದ್ದೀರಾ, ಪತ್ನಿ ಪಾದ ಪೂಜೆ ಪತಿಗೆ ಏಕೆ ಮಾಡಬೇಕು, ಪತಿ ಪತ್ನಿಗೆ ಮಾಡಬಾರದೇ ಎಂದು ವಿಮರ್ಶೆಗಳನ್ನು ಮಾಡಿದ್ದರು. ಇದಕ್ಕೆ ನಟಿ ಪ್ರಣಿತಾ ಸಹ ಸ್ಟ್ರಾಂಗ್ ಡೋಸ್ ಕೊಟ್ಟಿದ್ದಾರೆ.

ನಟಿ ಪ್ರಣಿತಾ ತನ್ನ ಪತಿಗೆ ಪಾದ ಪೂಜೆ ಮಾಡುವ ಪೊಟೋಗೆ ಅನೇಕರು ಪಾಸಿಟೀವ್ ಆಗಿಯೇ ಸ್ಪಂದಿಸಿದ್ದಾರೆ. ಆದರೆ ಶೇ.10 ರಷ್ಟು ಮಂದಿ ಮಾತ್ರ ನೆಗೆಟೀವ್ ಆಗಿ ಮಾತನಾಡಿದ್ದಾರೆ. ಇದಕ್ಕೆ ಪ್ರಣಿತಾ ಸ್ಮಂದಿಸಿದ್ದು, ಭೀಮನ ಅಮಾವಸ್ಯೆ ದಿನ ಪತಿಯ ಪಾದ ಪೂಜೆ ಮಾಡುವುದು ನಮ್ಮ ಸಂಪ್ರದಾಯವಾಗಿದೆ. ನಮ್ಮ ಕುಟುಂಬಸ್ಥರು, ಹತ್ತಿರದ ಸಂಬಂಧಿಗಳು ಸೇರಿದಂತೆ ಅನೇಕರು ಇದೇ ಕೆಲಸ ಮಾಡಿದ್ದಾರೆ. ನಟಿಯಾದ ಮಾತ್ರಕ್ಕೆ ಇದೆಲ್ಲಾ ಬಿಡಬೇಕಾ, ಸಂಪ್ರದಾಯಗಳನ್ನು ಆಚರಣೆ ಮಾಡಬಾರದಾ ಎಂದಿದ್ದಾರೆ. ಜೊತೆ ಚಿಕ್ಕಂದಿನಿಂದ ಅವೆಲ್ಲಾವನ್ನು ನೋಡಿಯೇ ನಾನು ಬೆಳೆದಿದ್ದೇನೆ. ನಾನೂ ಸಹ ಕಡ್ಡಾಯವಾಗಿ ಅವುಗಳನ್ನು ಪಾಲಿಸುತ್ತೇನೆ. ಯಾರೋ ಕೆಲವರು ಹೇಳಿದ್ದಾರೆಂದು ನಾನು ತಲೆಗೆಡಿಸಿಕೊಳ್ಳಲ್ಲ. ಕಳೆದ ವರ್ಷ ಸಹ ನನ್ನ ಪತಿಗೆ ಪಾದ ಪೂಜೆ ಮಾಡಿದ್ದೇ ಆದರೆ ಅಂದು ಪೊಟೋಗಳನ್ನು ಹಂಚಿಕೊಂಡಿರಲಿಲ್ಲ ಅಷ್ಟೆ ಎಂದು ಸ್ಟ್ರಾಂಗ್ ಡೋಸ್ ಕೊಟ್ಟಿದ್ದಾರೆ. ಸದ್ಯ ಆಕೆ ನೀಡಿದ ಹೇಳಿಕೆಗಳು ವೈರಲ್ ಆಗಿದೆ.

ಇನ್ನೂ ನಟಿ ಸಿನೆಮಾರಂಗದಲ್ಲಿ ಬ್ಯುಸಿಯಾಗಿರುವ ಸಮಯದಲ್ಲಿಯೇ ಆಕೆ ಉದ್ಯಮಿ ನಿತಿನ್ ರಾಜು ಎಂಬಾತನೊಂದಿಗೆ ಸಪ್ತಪದಿ ತುಳಿದರು. ಕಳೆದ 2021 ರಲ್ಲಿ ಅವರ ಮದುವೆಯಾಗಿತ್ತು. ಇನ್ನೂ ಪ್ರಣಿತಾ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿದ್ದು, ಪೊಟೋಗಳು, ವೈಯುಕ್ತಿಕ ಜೀವನದ ಬಗ್ಗೆ ಹಂಚಿಕೊಳ್ಳುವುದರ ಜೊತೆಗೆ ಆಗಾಗ ಹೆಲ್ತ್ ಟಿಪ್ಸ್ ಸಹ ನೀಡುತ್ತಿರುತ್ತಾರೆ. ಮದುವೆಯಾದರೂ ಸಹ ಪ್ರಣಿತಾ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ರಾವಣ ಅವತಾರ ಎಂಬ ಸಿನೆಮಾದಲ್ಲಿ ಪ್ರಣಿತಾ ‌ಬ್ಯುಸಿಯಾಗಿದ್ದಾರೆ.

Exit mobile version