ಮದುವೆ ಹೆಸರಿನಲ್ಲಿ ನನಗೆ ತುಂಬಾ ಮೋಸ ಆಗಿತ್ತು ಎಂದ ನಟಿ ಪೂರ್ಣ, ಏನಾಗಿತ್ತು ಗೊತ್ತಾ?

ಸೌತ್ ಸಿನಿರಂಗದಲ್ಲಿ ಅತೀ ಕಡಿಮೆ ಸಮಯದಲ್ಲೇ ಸ್ಟಾರ್ ಡಮ್ ಗಿಟ್ಟಿಸಿಕೊಂಡ ನಟಿಯರಲ್ಲಿ ಪೂರ್ಣ. ಮಲಯಾಳಂ ಸಿನಿಮಾಗಳ ಮೂಲಕ ಪರಿಚಯವಾದ ಈಕೆ ಮೊದಲಿಗೆ ಕ್ಲಾಸಿಕಲ್ ಡ್ಯಾನ್ಸರ್‍ ಆಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಅತ್ಯಂತ ಕಡಿಮೆ ಸಮಯದಲ್ಲೇ ಈಕೆ ತನ್ನ ಪ್ರತಿಭೆಯಿಂದ ಸ್ಟಾರ್‍ ಡಮ್ ದಕ್ಕಿಸಿಕೊಂಡರು. ಇನ್ನೂ ಈಕೆ ಇತ್ತೀಚಿಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಸಹ ಹಂಚಿಕೊಂಡಿದ್ದರು. ಇದೀಗ ಆಕೆ ಆನ್ ಲೈನ್ ಮದುವೆ ಬ್ರೋಕರ್‍ ಕುರಿತಂತೆ ಮಾತನಾಡಿದ್ದಾರೆ. ಆಕೆಗೂ ಸಹ ಮದುವೆಯ ಹೆಸರಿನಲ್ಲಿ ಮೋಸ ಆಗಿತ್ತಂತೆ.

ನಟಿ ಪೂರ್ಣ ನಟನೆ ಹಾಗೂ ಡ್ಯಾನ್ಸ್ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡ ಈಕೆ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಈಗಾಗಲೇ ಎಂಗೇಜ್ ಮೆಂಟ್ ಸಹ ಪೂರ್ಣ ಗೊಂಡಿದದೆ. ಆದೆ ತನ್ನ ಮದುವೆ ಬಗ್ಗೆ ಕೆಲವೊಂದು ವಿವಾದಾತ್ಮಕ ಹೇಳಿಕೆಗಳ  ಕುರಿತಂತೆ ಆಕೆ ಸ್ಪಂದನೆ ನೀಡಿದ್ದಾರೆ. ಮದುವೆಗೆ ಸಂಬಂಧಿಸಿದಂತೆ ಬ್ರೋಕರ್‍, ಅಂತರ್ಜಾಲ ತಾಣಗಳ ಹೆಸರಿನಲ್ಲಿ ಆಕೆಯನ್ನು ಮೋಸ ಮಾಡಲು ಪ್ರಯತ್ನಗಳು ಸಹ ಮಾಡಿದ್ದರೆಂದು ಪೂರ್ಣ ಹೇಳಿದ್ದಾರೆ. ಈ ಹಿಂದೆ ಆಕೆಗೆ ತುಂಬಾ ಪ್ರಪೋಸಲ್ ಬಂದಿತ್ತಂತೆ. ಅದರಲ್ಲಿ ಕೆಲವು ನಮ್ಮ ಮನೆಯಲ್ಲೂ ಸಹ ಇಷ್ಟವಾಗಿತ್ತು. ಅವುಗಳ ಬಗ್ಗೆ ಒಂದು ಮ್ಯಾರೇಜ್ ಕನ್ಸಲ್ಟೆನ್ಸಿ ಗ್ರೂಫ್ ನೊಂದಿಗೆ ಮಾತನಾಡಿದಾಗ, ತುಂಬಾ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದರು. ಮದುವೆಗೆ ಸಂಬಂಧಿಸಿದಂತೆ ಒಂದು ಗ್ರೂಪ್ ಸಹ ನಮ್ಮನ್ನು ಮೋಸ ಮಾಡಲು ಪ್ಲಾನ್ ಮಾಡಿತ್ತು. ಇದರಿಂದ ನಾವು ಪೊಲೀಸರಿಗೆ ದೂರು ನೀಡಿದ್ದೆ ಎಂದು ಪೂರ್ಣ ಹೇಳಿದ್ದಾರೆ.

ಇನ್ನೂ ನನ್ನ ಮದುವೆಯ ಅಲಿಯನ್ಸ್ ಗೆ ಸಂಬಂಧಿಸಿದ ವಿವಾದ ಆಗಲೇ ಮುಗಿದಿತ್ತು. ಆದರೆ ಮಿಡಿಯಾದಲ್ಲಿ ಪೂರ್ಣ ಮದುವೆ ವಿಚಾರದಲ್ಲಿ ಹಾಗೆ ನಡೆದಿದೆ. ಹೀಗೆ ನಡೆದಿದೆ ಎಂಬೆಲ್ಲಾ ವಿಚಾರಗಳು ಸೋಷಿಯಲ್ ಮಿಡಿಯಾದಲ್ಲಿ ವಿವಿಧ ರೀತಿಯಲ್ಲಿ ಹರಿದಾಡುತ್ತಿದ್ದು, ಇದರಿಂದ ನನಗೂ ಸಹ ನೋವಾಗಿದೆ. ಇಂತಹ ವಿಚಾರಗಳು ಕೇವಲ ಮಲಯಾಳಂ ಮಿಡಿಯಾಗೆ ಮಾತ್ರ ಪರಿಮಿತವಾಗಿಲ್ಲ. ಅನೇಕ ಭಾಷೆಗಳಲ್ಲೂ ಸಹ ಈ ವಿಚಾರ ಹರಿದಾಡಿತ್ತು. ಇನ್ನೂ ಮ್ಯಾರೇಜ್ ಕನ್ಸಲ್ಟೆನ್ಸಿ ಮೋಸದ ಬಗ್ಗೆ ನಾನು ಫಿರ್ಯಾದು ಮಾಡಿದ ಕಾರಣದಿಂದ ಅನೇಕರಿಗೆ ಒಳ್ಳೆಯದಾಗಿದೆ. ಅನೇಕ ಕುಟುಂಬಗಳು ಮೋಸಕ್ಕೆ ಒಳಗಾಗದೇ ಇದ್ದಾರೆ. ಅನೇಕ ಹುಡುಗಿಯರು ಸಹ ನನಗೆ ಕರೆ ಮಾಡಿ ನೋವು ಹಂಚಿಕೊಂಡರು. ಬಳಿಕ ಅಂತಹ ಮೋಸಗಳೂ ಸಹ ಕಡಿಮೆಯಾದವು ಎಂದು ಹೇಳಿದ್ದು ನನಗೆ ತುಂಬಾ ಖುಷಿಯಾಗಿದೆ ಎಂದಿದ್ದಾರೆ.

ಇನ್ನೂ ಪೂರ್ಣ ತನ್ನ ಪತಿಯ ಬಗ್ಗೆ ಸಹ ಮಾತನಾಡಿದ್ದಾರೆ. ನನ್ನ ಪತಿಯ ಹೆಸರು ಷಾನಿದ್ ಆಸಿಫ್ ಅಲಿ. ಸುಮಾರು ವರ್ಷಗಳಿಂದ ಪರಿಚಯವಿದೆ. ಪರಿಚಯ ಪ್ರೀತಿಯಾಗಿತ್ತು. ಕೆರಿಯರ್‍ ಪರವಾಗಿಯೂ ಬ್ಯುಸಿಯಾಗಿದ್ದ ಕಾರಣ ನಾವಿಬ್ಬರು ಮದುವೆಯ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಕಷ್ಟವಾಗಿತ್ತು. ನನ್ನ ಪತಿ ಷಾನಿದ್ ಆಸಿಫ್ ಅಲಿ ದುಬೈ ನಲ್ಲಿದ್ದಾರೆ. ಜೆಬಿಎಸ್ ಗ್ರೂಪ್ ಕಂಪನಿಯಲ್ಲಿ ಸಿ.ಇ.ಒ ಆಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಕುಟುಂಬದಲ್ಲೂ ಸಹ ಷಾನಿದ್ ಇಷ್ಟವಾದ ಕಾರಣದಿಂದ ನಮ್ಮ ಮದುವೆಗೆ ಮಾರ್ಗ ಸುಲಭವಾಗಿತ್ತು ಎಂದಿದ್ದಾರೆ. ಇನ್ನೂ ಪೂರ್ಣ ಇತ್ತೀಚಿಗೆ ಅಖಂಡ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ನಾನಿ ಹಾಗೂ ಕೀರ್ತಿ ಸುರೇಶ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ದಸರಾ ಸಿನೆಮಾದಲ್ಲು ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜತೆಗೆ ಇನ್ನೂ ಕೆಲವು ಸಿನೆಮಾಗಳಲ್ಲೂ ಸಹ ಆಕೆ ಬ್ಯುಸಿಯಾಗಿದ್ದಾರೆ. ಕೆಲವೊಂದು ಟಿ.ವಿ.ಶೋ ಗಳಲ್ಲಿ ಜಡ್ಜ್ ಆಗಿಯೂ ಸಹ ಕಾಣಿಸಿಕೊಳ್ಳುತ್ತಿದ್ದಾರೆ.

Previous articleಪತಿಯ ಜನ್ಮದಿನಕ್ಕೆ ಭಾವುಕ ಸಾಲುಗಳನ್ನು ಪೋಸ್ಟ್ ಮಾಡಿದ ಮೇಘನಾ ರಾಜ್…. !
Next articleವಿವಿಧ ಭಂಗಿಮಗಳಲ್ಲಿ ಹಾಟ್ ಪೋಸ್ ಕೊಟ್ಟ ಪ್ರಣಿತಾ ಸುಭಾಷ್, ಶರ್ಟ್ ಇಲ್ಲದೇ ಸ್ಟನ್ನಿಂಗ್ ಲುಕ್ಸ್ ಗೆ ಫಿದಾ ಆದ ಪಡ್ಡೆಹುಡುಗರು…!