ಮದುವೆ ಡೇಟ್ ಫಿಕ್ಸ್ ಮಾಡಿಕೊಂಡ ನಟಿ ಪೂರ್ಣ, ಸಿನೆಮಾಗಳಿಗೆ ಗುಡ್ ಬೈ ಹೇಳುತ್ತಾರಾ?

ದಕ್ಷಿಣ ಭಾರತದ ಸಿನಿರಂಗದಲ್ಲಿ ಅತೀ ಕಡಿಮೆ ಸಮಯದಲ್ಲೇ ಸ್ಟಾರ್‍ ಡಮ್ ಗಿಟ್ಟಿಸಿಕೊಂಡ ನಟಿಯರಲ್ಲಿ ಪೂರ್ಣ ಸಹ ಒಬ್ಬರಾಗಿದ್ದಾರೆ. ಈಕೆಯ ಮೂಲ ಹೆಸರು ಸಾಮ್ನಾ ಕಾಸಿಂ ಆದರೆ ಈಕೆ ಪೂರ್ಣ ಎಂದೇ ಖ್ಯಾತಿಯಾಗಿದ್ದಾರೆ. ಮಲಯಾಳಂ ಸಿನಿಮಾಗಳ ಮೂಲಕ ಪರಿಚಯವಾದ ಈಕೆ ಮೊದಲಿಗೆ ಕ್ಲಾಸಿಕಲ್ ಡ್ಯಾನ್ಸರ್‍ ಆಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಅತ್ಯಂತ ಕಡಿಮೆ ಸಮಯದಲ್ಲೇ ಈಕೆ ತನ್ನ ಪ್ರತಿಭೆಯಿಂದ ಸ್ಟಾರ್‍ ಡಮ್ ದಕ್ಕಿಸಿಕೊಂಡರು. ಇನ್ನೂ ಢಿ-13 ರಿಯಾಲಿಟಿ ಶೋಗೆ ಜಡ್ಜ್ ಆಗಿ ಕಾರ್ಯನಿರ್ವಹಿಸಿದ್ದು, ಟಿವಿ ಪ್ರೇಕ್ಷಕರಿಗೂ ಹತ್ತಿರವಾದರು.  ಇದೀಗ ಆಕೆ ಮದುವೆಯಾಗಲಿದ್ದು ದಿನಾಂಕ ಸಹ ಘೋಷಣೆಯಾಗಿದೆ.

ಇನ್ನೂ ನಟಿ ಪೂರ್ಣ ಕಿರುತೆರೆಯಲ್ಲಿ ಕೆಲವೊಂದು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಸಿಕೊಂಡು ಆಕರ್ಷಣೆಯಾಗಿದ್ದಾರೆ. ಜೊತೆಗೆ ಆಕೆ ಸರಿಯಾಗಿ ತೆಲುಗು ಬಾರದ ಕಾರಣಕ್ಕೆ ಆಕೆ ಮಾತನಾಡುವ ಮಾತುಗಳು ಪ್ರೇಕ್ಷಕರಿಗೆ ತುಂಬಾನೆ ಸೆಳೆಯುತ್ತದೆ. ಜೊತೆಗೆ ಆಕೆ ಟ್ರೆಂಡಿ ವೇರ್‍ ನಲ್ಲಿ ಕಾಣಿಸಿಕೊಂಡು ಸಿನೆಮಾಗಳ ಜೊತೆಗೆ ಕಿರುತೆರೆಯಲ್ಲೂ ಸಹ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡಿದ್ದಾರೆ. ಇನ್ನೂ ನಟಿ ಪೂರ್ಣ ಸಿನೆಮಾಗಳಲ್ಲೂ ಸೈ ಎನ್ನಿಸಿಕೊಂಡಿದ್ದಾರೆ. ಅಖಂಡ, ದೃಶ್ಯಂ 2 ಹಾಗೂ ತಲೈವಿ ಸಿನೆಮಾಗಳಲ್ಲಿ ಸಹನಟಿಯಾಗಿ ಕಾಣಿಸಿಕೊಂಡು ಒಳ್ಳೆಯ ಕ್ರೇಜ್ ದಕ್ಕಿಸಿಕೊಂಡರು. ಅದರಲ್ಲೂ ಅಖಂಡಾದಲ್ಲಿ ಆಕೆಯ ನಟನೆಗೆ ಉತ್ತಮವಾದ ರೆಸ್ಪಾನ್ಸ್ ದೊರೆತಿದೆ. ಇನ್ನೂ ಇತ್ತೀಚಿಗೆ ಕೆಲವೊಂದು ಬೋಲ್ಡ್ ಸೀನ್ ಗಳಲ್ಲೂ ನಟಿಸುವ ಮೂಲಕ ಮತಷ್ಟು ಖ್ಯಾತಿ ಗಳಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಈಕೆ ಇತ್ತೀಚಿಗಷ್ಟೆ ಸೀಕ್ರೇಟ್ ಆಗಿ ಎಂಗೇಜ್‌ ಮೆಂಟ್ ಮಾಡಿಕೊಂಡಿದ್ದರು. ವಿದೇಶಿದಲ್ಲಿ ವಿಸಾ ನೀಡುವಂತಹ ಕಂಪನಿಯೊಂದರ ಮಾಲಿಕ ಷಾನೀದ್ ಆಸೀಫ್ ಎಂಬಾತನೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು, ಇದೀಗ ಮದುವೆ ದಿನಾಂಕವನ್ನು ಸಹ ಘೋಷಣೆ ಮಾಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಆಕೆಯ ಅಭಿಮಾನಿಗಳಿಗೆ ಹಾರ್ಟ್ ಸ್ಟ್ರೋಕ್ ಹೊಡೆದಂತಾಗಿದೆ.

ಇನ್ನೂ ನಟಿ ಪೂರ್ಣ ಸೀಕ್ರೇಟ್ ಆಗಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಮದುವೆ ಮಾತ್ರ ವಿಜೃಂಭಣೆಯಿಂದ ಮಾಡಿಕೊಳ್ಳಲು ಸಿದ್ದತೆ ನಡೆಸಿದ್ದಾರಂತೆ. ಇನ್ನೂ ಇದೇ ವರ್ಷದಲ್ಲಿ ಮದುವೆ ಸಹ ಆಗಲಿದ್ದಾರಂತೆ. ನವೆಂಬರ್‍ 6 ರಂದು ಪೂರ್ಣ ಹಾಗೂ ಷಾನೀದ್ ಮದುವೆ ಅದ್ದೂರಿಯಾಗಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ತೆಲುಗು ವಾಹಿನಿ ಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಈ ಹಿಂದೆ ಈ ಜೋಡಿ ಪ್ರೇಮ ಪಯಣ ಸಾಗಿಸಿ ಇದೀಗ ಮದುವೆಯಾಗುತ್ತಿದ್ದಾರೆ ಎಂಬ ರೂಮರ್‍ ಗಳು ಕೇಳಿಬಂದಿದ್ದವು ಅದಕ್ಕೂ ಸಹ ಪ್ರತಿಕ್ರಿಯೆ ನೀಡಿದ ಪೂರ್ಣ ನಮ್ಮದ್ದು ಮನೆಯಲ್ಲಿ ಪೋಷಕರು ಫಿಕ್ಸ್ ಮಾಡಿದ ಮದುವೆಯಾಗಿದೆ. ಮದುವೆ ಬಳಿಕ ನಾನು ದುಬೈ ಗೆ ಹೋಗಿಬಿಡುತ್ತೇನೆ ಎಂದು ಹೇಳಿದ್ದಾರೆ.

ಇನ್ನೂ ಮದುವೆಯ ಬಳಿಕ ಈಕೆ ಸಿನೆಮಾಗಳಿಗೆ ಗುಡ್ ಬೈ ಹೇಳಲಿದ್ದಾರೆ ಎಂದು ಆಕೆಯ ಮಾತುಗಳಿಂದ ತಿಳಿಯಬಹುದಾಗಿದ್ದು, ಈ ವಿಚಾರ ಆಕೆಯ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ ಎನ್ನಲಾಗುತ್ತಿದೆ. ಇನ್ನೂ ಪೂರ್ಣ ಅನೇಕ ಬೋಲ್ಡ್ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಹೆಸರು ದಕ್ಕಿಸಿಕೊಂಡರು. ಅವುನು, ಅವುನು 2, ಸುಂದರಿ, ಲಡ್ಡುಬಾಬು ಸೇರಿದಂತೆ ಅನೇಕ ಹಿಟ್ ಸಿನೆಮಾಗಳ ಮೂಲಕ ಪ್ಯಾಪುಲರ್‍ ಆಗಿದ್ದರು. ತೆಲಗು ಜೊತೆಗೆ ಕನ್ನಡ, ಮಲಯಾಳಂ ನಲ್ಲೂ ಸಹ ಅನೇಕ ಸಿನೆಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಸದ್ಯ ಆಕೆ ತೀಸ್ ಮಾರ್‍ ಖಾನ್ ಎಂಬ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Previous articleಪ್ಯಾಂಟ್ ಲೆಸ್ ಆಗಿ ಬೋಲ್ಡ್ ಲುಕ್ಸ್ ಕೊಟ್ಟ ನಟಿ ಮೀರಾ ಜಾಸ್ಮೀನ್.. ಮೈಂಡ್ ಬ್ಲಾಕ್ ಆದ ಅಭಿಮಾನಿಗಳು…!
Next articleಗರ್ಭಿಣಿಯಾದ ಬಳಿಕ ಮೊದಲ ಬಾರಿಗೆ ಹಾಟ್ ಪೊಟೋಶೂಟ್ ನಲ್ಲಿ ಕಾಣಿಸಿಕೊಂಡ ಆಲಿಯಾ ಭಟ್…!