ಮದುವೆ ಕ್ಯಾನ್ಸಲ್ ಬಗ್ಗೆ ರೂಮರ್ ಗಳಿಗೆ ಬ್ರೇಕ್ ಹಾಕಿದ ನಟಿ ಪೂರ್ಣ…!

ಸೌತ್ ಸಿನಿ ರಂಗದಲ್ಲಿ ಕಡಿಮೆ ಸಮಯದಲ್ಲೇ ಸ್ಟಾರ್‍ ಡಮ್ ಗಿಟ್ಟಿಸಿಕೊಂಡ ನಟಿಯರಲ್ಲಿ ಪೂರ್ಣ ರವರ ಎಂಗೇಜ್ ಮೆಂಟ್ ಇತ್ತೀಚಿಗಷ್ಟೆ ನಡೆದಿದ್ದು, ಕೆಲವು ದಿನಗಳ ಹಿಂದೆಯಿಂದ ಪೂರ್ಣ ಮದುವೆ ರದ್ದು ಮಾಡಿಕೊಂಡಿದ್ದಾರೆ ಎಂಬ ಸುದ್ದಿಗಳು ಜೋರಾಗಿಯೇ ಹರಿದಾಡಿತ್ತು. ಇದೀಗ ಈ ರೂಮರ್‍ ಗಳಿಗೆ ನಟಿ ಪೂರ್ಣ ಬ್ರೇಕ್ ಹಾಕಿದ್ದಾರೆ. ತನ್ನ ಭಾವಿ ಪತಿಯನ್ನು ತಬ್ಬಿಕೊಂಡಿರುವ ಪೊಟೋ ಹಂಚಿಕೊಳ್ಳುವ ಮೂಲಕ ರೂಮರ್‍ ಗಳಿಗೆ ಬ್ರೇಕ್ ಹಾಕಿದ್ದಾರೆ.

ಮಲಯಾಳಂ ಸಿನೆಮಾಗಳ ಮೂಲಕ ಪರಿಚಯವಾದ ಪೂರ್ಣ ಕ್ಲಾಸಿಕಲ್ ಡ್ಯಾನ್ಸರ್‍ ಆಗಿದ್ದರು. ಬಳಿಕ ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟರು. ಇತ್ತೀಚಿಗಷ್ಟೆ ಪೂರ್ಣ ತಾನು ಮದುವೆಯಾಗುತ್ತಿರುವ ವಿಚಾರವನ್ನು ಸೋಷಿಯಲ್ ಮಿಡಿಯಾ ಮೂಲಕ ಪ್ರಕಟಿಸಿದರು. ಪ್ರಮುಖ ಉದ್ಯಮಿ ಆಸಿಫ್ ಅಲಿ ಎಂಬಾತನೊಂದಿಗೆ ಮದುವೆಯಾಗುತ್ತಿರುವುದಾಗಿ ಹಾಗೂ ಎಂಗೇಜ್ ಮೆಂಟ್ ಆಗಿರುವ ಪೊಟೋಗಳನ್ನು ಸಹ ಹಂಚಿಕೊಂಡಿದ್ದರು. ಇನ್ನೂ ಪೂರ್ಣ ಪೊಟೋಗಳನ್ನು ಹಂಚಿಕೊಂಡ ಕೂಡಲೇ ಆಕೆಯ ಅಭಿಮಾನಿಗಳೂ ಸೇರಿದಂತೆ ಸಿನಿರಂಗದ ಪ್ರಮುಖರು ಶುಭಾಷಯಗಳನ್ನು ಕೋರಿದರು. ಆದರೆ ಕೆಲವು ದಿನಗಳ ಹಿಂದೆಯಷ್ಟೆ ಪೂರ್ಣ ಮದುವೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಮದುವೆ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ ಎಂಬೆಲ್ಲಾ ಸುದ್ದಿಗಳು ಹರಿದಾಡಿದವು. ಇದರಿಂದ ಪೂರ್ಣ ಯಾಕೆ ಈ ನಿರ್ಧಾರ ತೆಗೆದುಕೊಂಡರು ಎಂಬೆಲ್ಲಾ ಪ್ರಶ್ನೆಗಳೂ ಸಹ ಉದ್ಬವವಾಗಿತ್ತು. ಇದೀಗ ಎಲ್ಲಾ ವದಂತಿಗಳಿಗೆ ಪೂರ್ಣ ಬ್ರೇಕ್ ಹಾಕಿದ್ದಾರೆ.

ಇನ್ನೂ ನಟಿ ಪೂರ್ಣ ಕಳೆದ ಜೂನ್ 1 ರಂದು ತಾನು ಮದುವೆಯಾಗಲಿರುವ ವ್ಯಕ್ತಿಯನ್ನು ಪರಿಚಯ ಮಾಡಿದ್ದರು. ಷಾನಿದ್ ಆಸಿಫ್ ಅಲಿ ಎಂಬ ದೊಡ್ಡ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದೇನೆ ಎಂದು ಸೋಷಿಯಲ್ ಮಿಡಿಯಾ ಮೂಲಕವೇ ಮಾಹಿತಿ ನೀಡಿದ್ದರು. ಈ ವರ್ಷದ ಅಂತ್ಯದೊಳಗೆ ಮದುವೆ ಸಹ ನಡೆಯುವುದಾಗಿ ಸುಳಿವು ನೀಡಿದ್ದರು. ಆದರೆ ಮದುವೆ ಕ್ಯಾನ್ಸಲ್ ಎಂಬ ಸುದ್ದಿ ಹರಿದಾಡಿತ್ತು. ತನ್ನ ಕರಿಯರ್‍ ಗಾಗಿ ಪೂರ್ಣ ಮದುವೆ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ ಎಂಬೆಲ್ಲಾ ಗಾಳಿ ಸುದ್ದಿಗಳು ಹರಿದಾಡಿದ್ದವು. ಇದೀಗ ಪೂರ್ಣ ಪೊಟೋ ಒಂದನ್ನು ಹಂಚಿಕೊಳ್ಳುವ ಮೂಲಕ ಈ ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಪೂರ್ಣ ತನ್ನ ಇನ್ಸ್ಟಾ ಖಾತೆಯಲ್ಲಿ ಪೊಟೋ ಒಂದನ್ನು ಶೇರ್‍ ಮಾಡುವ ಮೂಲಕ ಮದುವೆ ಕ್ಯಾನ್ಸಲ್ ಸುದ್ದಿಗೆ ಚೆಕ್ ಇಟ್ಟಿದ್ದಾರೆ.

ಪೂರ್ಣ ತನ್ನ ಇನ್ಸ್ಟಾ ಖಾತೆಯಲ್ಲಿ ಭಾವಿ ಪತಿ ಷಾನಿದ್ ರನ್ನು ಗಟ್ಟಿಯಾಗಿ ತಬ್ಬಿಕೊಂಡು ಪೋಸ್ ಕೊಟ್ಟಿದ್ದಾರೆ. ಈ ಪೊಟೋಗೆ ನಿನ್ನ ಜೊತೆ ಜೀವನ ಪೂರ್ಣ ಎಂದು ಒಂದು ರೊಮ್ಯಾಂಟಿಕ್ ಕಾಮೆಂಟ್ ಸಹ ಮಾಡಿದ್ದಾರೆ. ಇದರಿಂದ ಮದುವೆ ಕ್ಯಾನ್ಸಲ್ ಆದ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ. ಇನ್ನೂ ಪೂರ್ಣ ಅಭಿಮಾನಿಗಳೂ ಸಹ ಈ ಪೋಸ್ಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಶುಭಾಷಯಗಳನ್ನು ಕೋರುತ್ತಿದ್ದಾರೆ. ಸದ್ಯ ಪೂರ್ಣ ಡಿ ಡ್ಯಾನ್ಸ್ ಎಂಬ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿ ಕೆಲಸ ಮಾಡುತ್ತಿದ್ದರು.

Previous articleಸಮಂತಾ ಮುಂದೆ ಬಂದ್ರೆ ತಬ್ಬಿಕೊಳ್ತೀನಿ ಎಂದ ನಾಗಚೈತನ್ಯ, ಮಾಜಿ ಪತ್ನಿ ಕುರಿತು ಚೈತು ಹೇಳಿದ್ದೇನು?
Next articleಸ್ಕಿನ್ ಷೋ ಮಾಡಿದ್ರೆ ಬೋಲ್ಡ್ ನೆಸ್ ಅಲ್ಲ, ಸಮಂತಾ ರನ್ನು ಆಂಟಿ ಎಂದು ಟ್ರೋಲ್ ಮಾಡಿದ ಟ್ರೋಲರ್ಸ್…!