ಸಿನಿರಂಗದಲ್ಲಿ ಅನೇಕ ನಟಿಯರು ವಿವಿಧ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿರುತ್ತಾರೆ. ಅದರಲ್ಲೂ ನಟಿಯರಿಗೆ ಅನೇಖ ರೀತಿಯ ಕಾಯಿಲೆಗಳು ಬರುತ್ತಿರುತ್ತವೆ. ಹೆಚ್ಚಾಗಿ ಡಿಪ್ರೆಷನ್ ಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚು ನಟಿಯರು ತುತ್ತಾಗುತ್ತಿರುತ್ತಾರೆ. ಆ ಆರೋಗ್ಯ ಸಮಸ್ಯೆಗಳಿಂದ ಹೊರಬರಲು ತುಂಬಾನೆ ಕಷ್ಟಪಡುತ್ತಿರುತ್ತಾರೆ. ಇದೀಗ ಸೌತ್ ಸಿನಿರಂಗದ ನಟಿ ಪೂನಂ ಕೌರ್ ಸಹ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನಲಾಗುತ್ತಿದೆ.
ಇತ್ತೀಚಿಗಷ್ಟೆ ಸ್ಟಾರ್ ನಟಿ ಸಮಂತಾ ಮಯೋಸೈಟೀಸ್ ಎಂಬ ವ್ಯಾಧಿಗೆ ತುತ್ತಾಗಿದ್ದು, ಆಕೆ ಹಂತ ಹಂತವಾಗಿ ಗುಣಮುಖರಾಗುತ್ತಿದ್ದಾರೆ. ಆಕೆ ಈ ವಿಚಾರವನ್ನು ತನ್ನ ಸೊಷಿಯಲ್ ಮಿಡಿಯಾ ಖಾತೆಯ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಈ ಸುದ್ದಿ ಹೊರಬಂದ ಕೂಡಲೇ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಸಿನೆಮಾ ಸೆಲೆಬ್ರೆಟಿಗಳೂ ಸಹ ಆಕೆ ಶೀಘ್ರ ಗುಣಮುಖರಾಗಲಿ ಎಂದು ಕೋರಿದ್ದರು. ಇದೀಗ ಅವರಂತೆ ನಟಿ ಪೂನಂ ಕೌರ್ ಸಹ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಟಿ ಪೂನಂ ಕೌರ್ ಫೈಬ್ರೋಮಯಾಲ್ಜಿಯಾ ಎಂಬ ರೋಗದಿಂದ ಬಳಲುತ್ತಿದ್ದಾರೆ. ಇದೂ ಸಹ ಆಟೋ ಇಮ್ಯೂನ್ ಡಿಸಾರ್ಡರ್ ಮಾದರಿಯ ಕಾಯಿಲೆ ಎಂದು ಹೇಳಲಾಗುತ್ತಿದ್ದೆ. ಈ ರೋಗದಿಂದ ಗುಣಮುಖರಾಗಲಿ ಪೂನಂ ಕೇರಳದಲ್ಲಿ ಆರ್ಯುವೇದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಇನ್ನೂ ಪೂನಂ ಕೌರ್ ರವರು ತುತ್ತಾದ ಈ ಕಾಯಿಲೆ ತುಂಬಾ ಗಂಭೀರವಾದುದು ಎನ್ನಲಾಗಿದೆ. ಫೈಬ್ರೋಮಯಾಲ್ಜಿಯಾ ಎಂಬ ಸಮಸ್ಯೆ ಮಾನಸಿಕ ಹಾಗೂ ಶಾರೀಕರ ಒತ್ತಡದಿಂದ ಬರುತ್ತದೆ ಎನ್ನಲಾಗಿದೆ. ಅದರಲ್ಲೂ ತುಂಬಾ ಎಮೋಷನಲ್ ಆಗಿ ಫೀಲ್ ಆಗುವ ಕಾರಣದಿಂದ ಹಾಗೂ ಅಪಘಾತಗಳ ಕಾರಣದಿಂದ ಈ ಸೋಂಕಿಗೆ ತುತ್ತಾಗಬೇಕಾಗುತ್ತದೆ ಎನ್ನಲಾಗಿದೆ. ಈ ಕಾಯಿಲೆಯ ಲಕ್ಷಣಗಳು ತುಂಬಾನೆ ಧಾರುಣವಾಗಿರುತ್ತದೆ. ಇಡೀ ದೇಹ ನೋವು, ಜಾಯಿಂಟ್ ಪೈನ್ಸ್, ಮಾಂಸಖಂಡಗಳ ನೋವು ಹೀಗೆ ಅನೇಕ ನೋವುಗಳಿಂದ ಬಳಲಬೇಕಾಗಿದೆಯಂತೆ. ನಿದ್ದೇಯಿಂದ ಎದ್ದ ಕೂಡಲೇ ಶರೀರ ಸಂಪೂರ್ಣ ಬಿಗಿಯಾದಂತೆ ಇರುತ್ತದೆಯಂತೆ. ಈ ವ್ಯಾದಿ ಹೆಚ್ಚಾಗಿ ಮಹಿಳೆಯರಿಗೆ ಬರುತ್ತದೆಯಂತೆ. ಈ ಕಾಯಿಲೆ ಇದೀಗ ಪೂನಂ ಕೌರ್ ರವರಿಗೂ ಸೋಕಿದೆ ಎನ್ನಲಾಗಿದೆ.
ಇನ್ನೂ ಈ ಕಾಯಿಲೆಗೆ ಚಿಕಿತ್ಸೆ ಎಂಬುದು ಇಲ್ಲವಂತೆ. ಆದರೆ ಸೋಂಕು ತಗುಲಿದ ವ್ಯಕ್ತಿಗಿರುವ ಲಕ್ಷಣಗಳನ್ನು ಗಮನಿಸಿ ಚಿಕಿತ್ಸೆ ಸೂಚಿಸುತ್ತಾರಂತೆ. ಅದರಲ್ಲೂ ಈ ಕಾಯಿಲೆಗೆ ತುತ್ತಾದವರು ವ್ಯಾಯಾಮ ಮಾಡುವುದು, ಜೀವನ ವಿಧಾನ ಬದಲಿಸುವುದು ತುಂಬಾನೆ ಮುಖ್ಯ ಎನ್ನಲಾಗಿದೆ. ವೈದ್ಯರು ಸೂಚಿಸುವ ಡಯಟ್ ಪಾಲನೆ ಮಾಡಿದರೇ ಈ ಕಾಯಿಲೆಯಿಂದ ಪಾರಾಗಬಹುದಂತೆ. ಇನ್ನೂ ಪೂನಂ 36 ವರ್ಷ ವಯಸ್ಸಾಗಿದ್ದು, ಸಿಂಗಲ್ ಆಗಿಯೇ ಇದ್ದಾರೆ. ಇನ್ನೂ ಆಕೆ ಶೀಘ್ರ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.
ತೆಲುಗಿನಲ್ಲಿ ಬ್ಲಾಕ್ ಬ್ಲಸ್ಟರ್ ಹಿಟ್ ಹೊಡೆದ ವಕೀಲ್ ಸಾಭ್ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ಅನನ್ಯ ನಾಗಳ್ಳ ಇತ್ತೀಚಿಗೆ ಸಖತ್…
ಬಾಲಿವುಡ್ ನಲ್ಲಿ ಫೈರ್ ಬ್ರಾಂಡ್ ಎಂತಲೇ ಖ್ಯಾತಿ ಪಡೆದುಕೊಂಡ ಸ್ಟಾರ್ ನಟಿ ಕಂಗನಾ ರಾನೌತ್ ಆಗಾಗ ದೊಡ್ಡ ದೊಡ್ಡ ಸೆಲೆಬ್ರೆಟಿಗಳ…
ಸಿನೆಮಾಗಳಲ್ಲಿ ಹೋಮ್ಲಿಯಾಗಿ, ಓವರ್ ಗ್ಲಾಮರ್ ಶೋ ಮಾಡದೇ ಕ್ರೇಜ್ ಸಂಪಾದಿಸಿಕೊಂಡ ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗೆ ಗ್ಲಾಮರ್ ಡೋಸ್ ಏರಿಸುತ್ತಿದ್ದಾರೆ.…
ಬಾಲಿವುಡ್ ನ ಮುನ್ನಾ ಮೈಕಲ್ ಎಂಬ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ನಿಧಿ ಅಗರ್ವಾಲ್ ಕಡಿಮೆ ಸಮಯದಲ್ಲೇ…
ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಅಭಿನಯದ ಮೂಲಕ ಕ್ರೇಜ್ ಪಡೆದುಕೊಂಡಿದ್ದಾರೆ. ಬಾಲಿವುಡ್ ಸ್ಟಾರ್ ನಟ ಶತ್ರುಘ್ನ ಸಿನ್ಹಾ…
ಸಿನೆಮಾ ಸೆಲೆಬ್ರೆಟಿಗಳ ಮದುವೆ ಬಗ್ಗೆ ಸುದ್ದಿಗಳು ಸದಾ ಕೇಳಿಬರುತ್ತಲೇ ಇರುತ್ತದೆ. ಅದರಲ್ಲೂ ನಟಿಯರ ಮದುವೆ ಬಗ್ಗೆ ಅವರ ಅಭಿಮಾನಿಗಳೂ ಸೇರಿದಂತೆ…
Leave a Comment