Saturday, May 21, 2022
HomeFilm Newsಬಿಕಿನಿ ಪೋಸ್ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುವ ಪೂನಂ ಬಜ್ವಾ…..

ಬಿಕಿನಿ ಪೋಸ್ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುವ ಪೂನಂ ಬಜ್ವಾ…..

ಮೂಲತಃ ಮಾಡೆಲ್ ಆಗಿ ವೃತ್ತಿ ಜೀವನ ಪ್ರಾರಂಭಿಸಿರುವ ಬಹುಭಾಷಾ ನಟಿ ಪೂನಂ ಬಜ್ವಾ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕೆಲವೊಂದು ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ನಟಿ ಪೂನಂ ಹರಿಬಿಟ್ಟು ಕೆಲವೊಂದು ಬೋಲ್ಡ್ ಪೊಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದೆ ಎನ್ನಲಾಗಿದೆ.

ಕಾಲಿವುಡ್ ನ ಮಸಾಲಾ ಚಿತ್ರ ಸೇವಲ್ ಮೂಲಕ ಪಾದಾರ್ಪಣೆ ಮಾಡಿದ ನಟಿ ಪೂನಂ ಕೆಲವೇ ಚಿತ್ರಗಳಲ್ಲಿ ನಟಿಸಿದ್ದರು. ಸೋಷಿಯಲ್ ಮಿಡಿಯಾ ಮೂಲಕ ಆಗಾಗ ಸದ್ದು ಮಾಡುತ್ತಿರುತ್ತಾರೆ. ತೆನವಟ್ಟು, ಕಚೇರಿ ಆರಂಭ, ದ್ರೋಹಿ, ತಂಬಿಕೊಟೈ, ಅರಣ್ಮನೈ 2 ಸೇರಿದಂತೆ ಅನೇಕ ಸಿನೆಮಾಗಳ ಮೂಲಕ ತಮ್ಮದೇ ಆದ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಮೂಲತಃ ಮಾಡೆಲ್ ಆಗಿರುವ ಇವರು ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಸಿನೆಮಾದಲ್ಲಿ ನಟಿಸಿದ್ದಾರೆ.

ಇನ್ನೂ ಚಾಲೆಂಜಿಂಗ್ ಸ್ಟಾರ್‍ ದರ್ಶನ್ ಅಭಿನಯದ ತಂಗಿಗಾಗಿ ಸಿನೆಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಪೂನಂ ಬಜ್ವಾ ಶಿಕಾರಿ, ಮಸ್ತ್ ಮೊಹಬ್ಬತ್ ಸಿನೆಮಾಗಳ ಮೂಲಕ ಸಿನಿರಸಿಕರನ್ನು ರಂಜಿಸಿದ್ದರು. ಬಹುತೇಕ ಎಲ್ಲಾ ಸಿನೆಮಾಗಳಲ್ಲೂ ನಟಿ ಪೂನಂ ಬೋಲ್ಡ್ ಕ್ಯಾರೆಕ್ಟರ್‍ ಗಳಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚಿಗೆ ಪೂನಂರವರಿಗೆ ಬೇಡಿಕೆ ಕಡಿಮೆಯಾಗಿದೆ. ಆದರೆ ಸೋಷಿಯಲ್ ಮಿಡಿಯಾಗಳಲ್ಲಿ ಸದಾ ಸಕ್ರೀಯರಾಗಿರುತ್ತಾರೆ ಪೂನಂ.

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವ ಪೂನಂ ಆಗಾಗ ಕೆಲವೊಂದು ಬೋಲ್ಡ್ ಅಂಡ್ ಹಾಟ್ ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಸೇರಿದಂತೆ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಾರೆ. ಈ ಹಾದಿಯಲ್ಲಿ ಇತ್ತೀಚಿಗೆ ಬಿಕಿನಿ ಧರಿಸಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜು ಹೊಡೆಯುತ್ತಾ ಕ್ಯಾಮೆರಾಗಳಿಗೆ ಪೋಸ್ ನೀಡಿರುವ ಪೂನಂ ಪೊಟೋಗಳು ಸಖತ್ ವೈರಲ್ ಆಗುತ್ತಿವೆ. ಇನ್ನೂ ಪೂನಂ ಮೈಮಾಟಕ್ಕೆ ಮಾರುಹೋದ ಅಭಿಮಾನಿಗಳು ಕಾಮೆಂಟ್ ಹಾಗೂ ಲೈಕ್ ಗಳ ಸುರಿಮಳೆಗೈದಿದ್ದಾರೆ.

- Advertisement -

You May Like

More