ಮಾರ್ಷಲ್ ಆರ್ಟ್ಸ್ ಟ್ರೈನಿಂಗ್ ತೆಗೆದುಕೊಳ್ಳಲಿದ್ದಾರಂತೆ ನಟಿ ಪೂಜಾ ಹೆಗ್ಡೆ……!

ಹ್ಯಾಟ್ರಿಕ್ ಸೋಲು ಕಂಡರೂ ತಮ್ಮ ಬೇಡಿಕೆ ಕಡಿಮೆಯಾಗದ ನಟಿ ಎಂದರೇ ಅದು ಪೂಜಾ ಹೆಗ್ಡೆ ಮಾತ್ರ ಎಂದು ಹೇಳಬಹುದಾಗಿದೆ. ಈಕೆ ಅಭಿನಯದ ರಾಧೆಶ್ಯಾಮ್, ಬೀಸ್ಟ್ ಹಾಗೂ ಆಚಾರ್ಯ ಸಿನೆಮಾಗಳು ಫ್ಲಾಪ್ ಆದರೂ ಸಹ ಪೂಜಾ ಹೆಗ್ಡೆಗೆ ಮಾತ್ರ ಕ್ರೇಜ್ ಕಡಿಮೆಯಾಗಿಲ್ಲ. ಸದ್ಯ ನಟಿ ಪೂಜಾ ಹೆಗ್ಡೆ ಪೂರಿ ಜಗನ್ನಾಥ್ ರವರ ಸಿನೆಮಾ ಒಂದರಲ್ಲಿ ನಟಿಸಲಿದ್ದು, ಈ ಸಿನೆಮಾ ಗಾಗಿ ಮಾರ್ಷಲ್ ಆರ್ಟ್ಸ್ ತರಬೇತಿ ಪಡೆದುಕೊಳ್ಳುತ್ತಿದ್ದಾರಂತೆ.

ಟಾಲಿವುಡ್ ನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಹಾಗೂ ರೌಡಿ ಹಿರೋ ವಿಜಯ್ ದೇವರಕೊಂಡ ಕಾಂಬಿನೇಷನಲ್ಲಿ ಬರಲಿರುವ ಜನಗಣಮನ ಎಂಬ ಸಿನೆಮಾದಲ್ಲಿ ಪೂಜಾ ಹೆಗ್ಡೆ ಬಣ್ಣಹಚ್ಚಲಿದ್ದಾರೆ. ಇತ್ತೀಚಿಗಷ್ಟೆ ಈ ಸಿನೆಮಾ ಕೆಲಸಗಳೂ ಸಹ ಮುಂಬೈನಲ್ಲಿ ಪ್ರಾರಂಭಿಸಿದ್ದಾರೆ. ಇನ್ನೂ ಪೂರಿ ಜಗನ್ನಾಥ್ ರವರು ಈ ಸಿನೆಮಾವನ್ನು ಡ್ರೀಮ್ ಪ್ರಾಜೆಕ್ಟ್ ಎಂದು ತೆಗೆದುಕೊಳ್ಳುತ್ತಿದ್ದಾರೆ. ಸೇನೆಗೆ ಸಂಬಂಧಿಸಿದ ಸಿನೆಮಾ ಇದಾಗಲಿದ್ದು, ಸಿನೆಮಾದಲ್ಲಿ ವಿಜಯ್ ದೇವರಕೊಂಡ ಸೈನಿಕನಾಗಿ ಕಾಣಿಸುತ್ತಾರಾ ಅಥವಾ ಮೇಜರ್‍ ಪಾತ್ರದಲ್ಲಿ ಕಾಣಿಸುತ್ತಾರಾ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಇನ್ನೂ ಈ ಸಿನೆಮಾದ ಶೂಟಿಂಗ್ ಕಾಶ್ಮೀರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯಲಿದೆಯಂತೆ. ಈ ಸಿನೆಮಾ ದೊಡ್ಡ ಆಕ್ಷನ್ ಸಿನೆಮಾ ಆಗಿರಲಿದೆ ಎಂದು ಹೇಳಲಾಗುತ್ತಿದೆ. ಪೂರಿ ಜಗನ್ನಾಥ್ ರವರು ಈ ಸಿನೆಮಾದಲ್ಲಿ ಯುದ್ದ ದೃಶ್ಯಗಳಿಗಾಗಿ ಪ್ರತ್ಯೇಕವಾದ ಪ್ಲಾನ್ಸ್ ಸಹ ಮಾಡಿಕೊಂಡಿದ್ದಾರಂತೆ. ಜೊತೆಗೆ ನಟಿಯ ಪಾತ್ರವೂ ಸಹ ಪವರ್‍ ಪುಲ್ ಆಗಿರಲಿದೆ ಎಂದು ಸುದ್ದಿ ಹರಿದಾಡುತ್ತಿದೆ.

ಇದಕ್ಕಾಗಿಯೇ ನಟಿ ಪೂಜಾಹೆಗ್ಡೆ ರವರಿಗೆ ಮಾರ್ಷಲ್ ಆರ್ಟ್ಸ್ ತರಬೇತಿ ನೀಡುವ ಸಲುವಾಗಿ ಥಾಯ್ ಲ್ಯಾಂಡ್ ನಿಂದ ಮಾರ್ಷಲ್ ಆರ್ಟ್ಸ್ ತಜ್ಞರನ್ನು ಕರೆತರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದೆಲ್ಲಾ ಸುದ್ದಿಗಳಿಂದ ಜನಗಣಮನ ಸಿನೆಮಾದಲ್ಲಿ ಪೂಜಾ ಸಹ ಪವರ್‍ ಪುಲ್ ರೋಲ್ ನಲ್ಲಿ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗುತ್ತಿದೆ. ಸಿನೆಮಾದಲ್ಲಿ ಹಿರೋಗೆ ಸಮನಾದ ಪಾತ್ರವೇ ಇರುವ ಕಾರಣದಿಂದಲೇ ಮಾರ್ಷಲ್ ಆರ್ಟ್ಸ್ ಟ್ರೈನರ್‍ ಅನ್ನು ಕರೆತರುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.  ಇನ್ನೂ ಮುಂದಿನ ಬುಧವಾರದಿಂದ ಪೂಜಾ ಹೆಗ್ಡೆ ಮಾರ್ಷಲ್ ಆರ್ಟ್ಸ್ ತರಬೇತಿಯನ್ನು ಪ್ರಾರಂಭಿಸಲಿದ್ದಾರಂತೆ. ಮೂರು ದಿನಗಳ ಕಾಲ ಈ ತರಬೇತಿ ಬಳಿಕ ಗ್ಯಾಪ್ ಪುನಃ ತರಬೇತಿ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ.

ಮೊದಲ ಬಾರಿಗೆ ಆಕ್ಷನ್ ಸಿನೆಮಾಗಳಲ್ಲಿ ನಟಿಸಲಿರುವ ಪೂಜಾ ಹೆಗ್ಡೆ ಇಲ್ಲಿಯವರೆಗೆ ಗ್ಲಾಮರಸ್ ರೋಲ್ ಗಳಲ್ಲಿಯೇ ಕಾಣಿಸಿಕೊಂಡಿದ್ದು, ಇದೀಗ ಆಕ್ಷನ್ ರೋಲ್ ಯಾವ ರೀತಿ ನಿಭಾಯಿಸಲಿದ್ದಾರೆ ಎಂಬ ಚರ್ಚೆಗಳೂ ಸಹ ಶುರುವಾಗಿದೆ. ಆದರೆ ಪೂಜಾ ಹೆಗ್ಡೆ ಮಾತ್ರ ಭಾರಿ ಕಾನ್ಫಿಡೆಂಟ್ ನೊಂದಿಗೆ ಸಿನೆಮಾದಲ್ಲಿ ನಟಿಸಲು ಮುನ್ನುಗ್ಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಸಿನೆಮಾದ ಮೊದಲ ಭಾಗದ ಶೂಟಿಂಗ್ ಮುಂಬೈನಲ್ಲಿ ನಡೆಯಲಿದ್ದು, ಬಳಿಕ ಕಾಶ್ಮೀರಕ್ಕೆ ಶೂಟಿಂಗ್ ಶೆಡ್ಯೂಲ್ಡ್ ಶಿಫ್ಟ್ ಆಗಲಿದೆಯಂತೆ. ಜೂನ್ 4 ರಿಂದ ಶೂಟಿಂಗ್ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.

Previous articleಬೇಡಿಕೆ ಹೆಚ್ಚಿಸಿಕೊಂಡ ಕೆಜಿಎಫ್ ಬ್ಯೂಟಿ.. ಬರೊಬ್ಬರಿ ಎರಡು ಕೋಟಿಗೆ ಡಿಮ್ಯಾಂಡ್ ಅಂತೆ…!
Next articleಹಾಟ್ ಪೋಸ್ ನಲ್ಲಿ ದರ್ಶನ ಕೊಟ್ಟ ಮಲ್ಲಿಕಾ ಶೆರಾವತ್.. ವಯಸ್ಸಾದರೂ ಮಲ್ಲಿಕಾರ ಹಾಟ್ ಲುಕ್ ಗೆ ಫಿದಾ…