ಮಳೆ ಹುಡುಗಿ ಪೂಜಾಗಾಂಧಿ ಸಂಹಾರಿಣಿ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್

ಬೆಂಗಳೂರು: ಸ್ಯಾಂಡಲ್‌ವುಡ್‌ನ ಸಂಚಲನ ಹುಟ್ಟಿಸಿದ ಚಿತ್ರವೆಂದರೇ ಅದು ಮುಂಗಾರು ಮಳೆ. ನಟ ಗಣೇಶ್ ಹಾಗೂ ಪೂಜಾಗಾಂಧಿ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದ ಈ ಚಿತ್ರ ಸೂಪರ್ ಡೂಪರ್ ಹಿಟ್ ಹೊಡೆದಿತ್ತು. ಅಂದಿನಿಂದ ಪೂಜಾಗಾಂಧಿಯವರನ್ನು ಮಳೆ ಹುಡುಗಿ ಎಂದು ಕರೆಯಲು ಆರಂಭಿಸಿದರು ಅಭಿಮಾನಿಗಳು.

ತಮ್ಮ ಮೊದಲ ಚಿತ್ರದ ಮೂಲಕವೇ ಅನೇಕ ಅಭಿಮಾನಿಗಳನ್ನು ತಮ್ಮ ನಟನೆಯಿಂದ ಮೋಡಿ ಮಾಡಿದ ಪೂಜಾಗಾಂಧಿ ಅನೇಕ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದರು. ನಂತರ ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದರು. ಇದೀಗ ಬಹಳ ದಿನಗಳ ನಂತರ ಪುನಃ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು, ವಿಭಿನ್ನ ಪಾತ್ರವನ್ನು ಹೊಂದಿರುವ ಚಿತ್ರವೊಂದರಲ್ಲಿ ನಟಿಸಲಿದ್ದಾರೆ. ಇನ್ನೂ ಈ ಚಿತ್ರದ ಮೊಷನ್ ಪೋಸ್ಟರ್ ಸಹ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಅಂದಹಾಗೆ ನಟಿ ಪೂಜಾಗಾಂಧಿಯವರ ನೂತನ ಚಿತ್ರ ಸಂಹಾರಿಣಿ. 2ಎಂ ಸಿನೆಮಾಸ್ ಸಂಸ್ಥೆಯ ಮುಖಾಂತರ ಕೆ.ವಿ.ಶಬರೀಶ್ ನಿರ್ಮಾಣದಲ್ಲಿ, ಜವಾಹರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಂಹಾರಿಣಿ ಚಿತ್ರದಲ್ಲಿ ನಟಿ ಪೂಜಾ ಗಾಂಧಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ದಂಡುಪಾಳ್ಯಂ ಸರಣಿ ಚಿತ್ರಗಳ ಬಳಿಕ ಪೂಜಾಗಾಂಧಿ ಸಂಹಾರಿಣಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕೆಟ್ಟ ಸಮಾಜದ ವಿರುದ್ದ ರಿವೇಂಜ್ ತೀರಿಸಿಕೊಳ್ಳುವ ಪಾತ್ರ ಇದಾಗಿದ್ದು, ಪಕ್ಕಾ ಆಕ್ಷನ್ ಪಾತ್ರದಲ್ಲಿ ಪೂಜಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಜೊತೆಗೆ ಈಗಾಗಲೇ ಸಂಹಾರಿಣಿ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ತೆರೆ ಮೇಲೆ ಅಬ್ಬರಿಸಲು ಸಿದ್ದವಾಗಿದೆ. ಈ ಚಿತ್ರದ ಮೂಲಕ ನಟಿ ಪೂಜಾಗಾಂಧಿ ಚಿತ್ರರಂಗದಲ್ಲಿ ರೀ ಎಂಟ್ರಿ ಸಕ್ಸಸ್ ಆಗಲಿದೆ ಎನ್ನಲಾಗುತ್ತಿದ್ದು, ಸಂಹಾರಿಣಿ ಏಪ್ರಿಲ್ ಮಾಹೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Previous articleನಟ ಅಲ್ಲುಅರ್ಜುನ್ ಭೇಟಿಗಾಗಿ ಕಾಯುತ್ತಿದ್ದಾಳೆ 3 ವರ್ಷದ ಪುಟಾಣಿ…..
Next articleಮೆಗಾಸ್ಟಾರ್ ಚಿತ್ರದಲ್ಲಿ ಮತ್ತೊಮ್ಮೆ ನಾಯಕಿ ತ್ರಿಷಾ ನಟನೆ?