ವಿತೌಟ್ ಮೇಕಪ್ ನಲ್ಲಿ ಮುದ್ದಾಗಿ ಕಾಣಸಿಕೊಂಡ ನಟಿ ನಿವೇತಾ ಪೇತುರಾಜ್, ವೈರಲ್ ಆದ ಪೊಟೋಸ್…!

ಮಾಡೆಲ್ ಆಗಿ ಬಳಿಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಯಂಗ್ ಬ್ಯೂಟಿ ನಿವೇತಾ ಪೇತುರಾಜು ಅನೇಕ ಸಿನೆಮಾಗಳಲ್ಲಿ ನಟಿಸುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡಿದ್ದಾರೆ. ಆಕೆಯ ಅದ್ಬುತವಾದ ನಟನೆಯಿಂದಲೇ ಅನೇಕ ಯುವಕರ ಕ್ರಷ್ ಆಗಿದ್ದಾರೆ.  ಕಾಲಿವುಡ್ ನ ಒರು ನಾ ಕೂತ್ತು ಎಂಬ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ, ಮೆಂಟಲ್ ಮದಿಲೋ ಎಂಬ ಸಿನೆಮಾದ ಮೂಲಕ ಟಾಲಿವುಡ್ ರಂಗಕ್ಕೆ ಎಂಟ್ರಿಕೊಟ್ಟರು. ಬಳಿಕ ಅನೇಕ ಸಿನೆಮಾಗಳಲ್ಲಿ ಕಾಣಿಸಿಕೊಂಡರು ಆಕೆ ಸಕ್ಸಸ್ ಆಗಲಿಲ್ಲ. ಸ್ಟಾರ್‍ ಡಮ್ ಸ್ವಂತ ಮಾಡಿಕೊಳ್ಳಲಿಲ್ಲ. ಈ ಹಿಂದೆ ಸಂದರ್ಶನವೊಂದರಲ್ಲಿ ಸಿನೆಮಾಗಳಲ್ಲಿ ಅವಕಾಶ ಸಿಕ್ಕದೇ ಹೋದರು ಬೇರೆ ಕೆಲಸ ಮಾಡುತ್ತೇನೆ ನನಗೆ ಆ ತಾಕತ್ತು ಇದೆ ಎಂದು ಹೇಳಿದ್ದರು.

ನಟಿ ನಿವೇತಾ ಪೇತುರಾಜ್ ಕಳೆದ 2016 ರಲ್ಲಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು, ಮಾಡೆಲ್ ಆಗಿದ್ದ ಈಕೆ ಸಿನೆಮಾಗಳಲ್ಲಿನ ಆಸಕ್ತಿಯಿಂದಾ ತಮಿಳು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ತೆಲುಗಿನ ಮೆಂಟಲ್ ಮದಿಲೋ ಎಂಬ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರ ಮುಂದೆ ಬಂದಿದ್ದರು. ಬಳಿಕ ಚಿತ್ರಲಹರಿ, ಅಲಾ ವೈಕುಂಠಪುರಂಲೋ ಹಾಗೂ ಬ್ರೋಚೆವಾರೆವ್ವರು ಎಂಬ ಸಿನೆಮಾಗಳಲ್ಲೂ ಸಹ ನಟಿಸಿ ಫೇಮ್ ದಕ್ಕಿಸಿಕೊಂಡಿದ್ದರು. ಬಳಿಕ ರಾಮ್ ಅಭಿನಯದ ರೆಡ್ ಸಿನೆಮಾದಲ್ಲಿ ಸಹ ಈಕೆ ಕಾಣಿಸಿಕೊಂಡಿದ್ದರು. ಆದರೆ ಆ ಸಿನೆಮಾ ನಿರೀಕ್ಷೆ ಹುಸಿ ಮಾಡಿತ್ತು. ಇನ್ನೂ ಇತ್ತೀಚಿಗಷ್ಟೆ ನಿವೇತಾ ವಿಶ್ವಕ್ ಎಂಬ ನಟನ ಜೊತೆಗೆ ಪಾಗಲ್ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದಾರೆ.  ಈ ಸಿನೆಮಾ ಸಹ ಆಕೆಗೆ ದೊಡ್ಡ ನಿರಾಸೆಯನ್ನು ಉಳಿಸಿದೆ.

ನಟಿ ನಿವೇತಾ ಪೇತುರಾಜ್ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಹೆಚ್ಚು ಹೆಚ್ಚು ಅವಕಾಶಗಳು ಹರಿಸಿ ಬರುತ್ತಿವೆ. ಸದಾ ಗ್ಲಾಮರಸ್ ಲುಕ್ಸ್ ನೊಂದಿಗೆ ಆಕರ್ಷಣೆ ಮಾಡುತ್ತಿರುವ ನಿವೇತಾ ಸೌಂದರ್ಯದ ಜೊತೆಗೆ ನಟನೆಯ ಮೂಲಕವೂ ಸಹ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಇನ್ನೂ ನಟಿ ನಿವೇತಾ ಮತಷ್ಟು ಕ್ರೇಜ್ ದಕ್ಕಿಸಿಕೊಳ್ಳಲು ಒಂದು ದೊಡ್ಡ ಬ್ರೇಕ್ ನೀಡುವಂತಹ ಸಿನೆಮಾ ಸಿಗಬೇಕಿದೆ. ಇನ್ನೂ ಇತ್ತೀಚಿಗೆ ನಟಿ ನಿವೇತಾ ಪೇತುರಾಜ್ ಕ್ಯಾಜುಯಲ್ ಲುಕ್ಸ್ ನೊಂದಿಗೆ ದರ್ಶನ ಕೊಟ್ಟಿದ್ದಾರೆ. ನಟಿ ನಿವೇತಾ ಜಿಮ್ ಅಂಡ್ ಟ್ರಾವೆಲ್ ವೇರ್‍ ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಮೇಕಪ್ ಇಲ್ಲದೇ ತುಂಬಾ ಮುದ್ದಾಗಿ ಕಾಣಿಸಿದ್ದಾರೆ. ವಿತೌಟ್ ಮೇಕಪ್ ನಲ್ಲಿ ಹಾಟ್ ಲುಕ್ಸ್ ನೊಂದಿಗೆ ಹಾಟ್ ಲುಕ್ಸ್ ಕೊಟ್ಟಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಎಲ್ಲೆಡೆ ವೈರಲ್ ಆಗುತ್ತಿವೆ. ಅದರಲ್ಲೂ ಆಕೆ ಕ್ಯೂಟ್ ಸ್ಮೈಲ್ ನೊಂದಿಗೆ ನೀಡಿದ ಪೋಸ್ ಗಳಂತೂ ಯುವಕರ ಹೃದಯ ಕದಿಯುವಂತಿವೆ ಎನ್ನಲಾಗುತ್ತಿದೆ. ಇನ್ನೂ ಆಕೆ ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ಮೆಚ್ಚುಗೆಯ ಕಾಮೆಂಟ್ ಗಳನ್ನು ಹರಿಬಿಟ್ಟಿದ್ದಾರೆ.

ಇನ್ನೂ ನಿವೇತಾ ಮಲ್ಟಿ ಟ್ಯಾಲೆಂಟೆಂಡ್ ನಟಿಯಾಗಿದ್ದಾರೆ. ನಟನೆಯ ಜೊತೆಗೆ ರೇಸಿಂಗ್ ನಲ್ಲೂ ಸಹ ಆಕೆ ಆಸಕ್ತಿ ಹೊಂದಿದ್ದಾರೆ. ಇನ್ನೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ಆಕೆ ಆಗಾಗ ರೇಸ್ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್ನೂ ರೇಸಿಂಗ್ ನಲ್ಲಿ ಆಕೆ ಲೇಡಿ ಬಾಸ್ ತರಹ ಲುಕ್ಸ್ ಕೊಟ್ಟಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಹಾಟ್ ಪೊಟೋಸ್ ಸೇರಿದಂತೆ ಅನೇಕ ವೈಯುಕ್ತಿಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

Previous articleವೆಬ್ ಸಿರೀಸ್ ಗಾಗಿ ಕಾಜಲ್ ಅಗರ್ವಾಲ್ ಗೆ ಭಾರಿ ಆಫರ್….!
Next articleಸಿನೆಮಾಗಳಲ್ಲಿ ಚಾನ್ಸ್ ಪಡೆದುಕೊಳ್ಳಲು ನಾನು ಆ ರೀತಿಯ ಕೆಲಸ ಎಂದಿಗೂ ಮಾಡಲ್ಲ ಎಂದ ಸ್ಟಾರ್ ಕಿಡ್….!