ನಟಿ ನಿವೇದಿತಾ ಗೌಡ ರವರ ಕ್ಯಾಟ್ ವಾಕ್ ವಿಡಿಯೋ ಸಖತ್ ವೈರಲ್, ಹಾಟ್ ವಿಡಿಯೋ ಹಂಚಿಕೊಂಡ ನಟಿ…

ನಟಿ ನಿವೇದಿತಾ ಗೌಡ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ. ಅವರು ಏನೆ ಪೋಸ್ಟ್ ಹಾಕಿದರೂ ವೈರಲ್ ಆಗುತ್ತೆ. ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚಿನ ಫಾಲೋವರ್ಸ್‌ಗಳನ್ನು ಹೊಂದಿರುವ ಕಾರಣದಿಂದಲೂ ಈಕೆಯ ಪೋಸ್ಟ್ ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ಈಕೆ ಕಿರುತೆರೆಗಳಲ್ಲಿ ಪ್ಯಾಪುಲರ್‍ ಆಗಿದ್ದಕ್ಕಿಂತ, ಸೋಷಿಯಲ್ ಮಿಡಿಯಾ ಮೂಲಕವೇ ತುಂಬಾ ಪಾಪ್ಯುಲರ್‍ ಆದ ನಟಿಯಾಗಿದ್ದಾರೆ.

ನಟಿ ನಿವೇದಿತಾ ಬಿಗ್ ಬಾಸ್ ಮನೆಗೆ ಹೋದ ಬಳಿಕ ಮತಷ್ಟು ಫೇಮಸ್ ಆದರು. ಬಳಿಕ ‌ರ್‍ಯಾಂಪ್ ಸಿಂಗರ್‍ ಚಂದನ್ ಶೆಟ್ಟಿಯವರೊಂದಿಗೆ ಹಸೆಮಣೆ ಏರಿದರು. ಮದುವೆಯಾದ ಬಳಿಕ ಆಕೆ ಅಡುಗೆ ಮಾಡುವ ವಿಡಿಯೋ, ಗಂಡನೊಂದಿಗೆ ವಿಶೇಷ ಪೊಟೋಗಳು ಹೀಗೆ ಪ್ರತಿಯೊಂದು ವಿಚಾರವನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಳ್ಳುವ ಈಕೆ ಇತ್ತೀಚಿಗೆ ಯೂಟ್ಯೂಬ್ ಚಾನೆಲ್ ಸಹ ಪ್ರಾರಂಭಿಸಿದ್ದಾರೆ. ಈ ಚಾನೆಲ್ ಮೂಲಕವೂ ಸಹ ನಿವೇದಿತಾ ಕೆಲವೊಂದು ವೈಯುಕ್ತಿಕ ಬದುಕಿನ ಕೆಲವೊಂದು ವಿಚಾರಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಸದಾ ಸೋಷಿಯಲ್ ಮಿಡಿಯಾಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ ನಟಿ ನಿವೇದಿತಾ.

ಇನ್ನೂ ನಿವೇದಿತಾ ಮಾತ್ರವಲ್ಲದೆ ಆಕೆಯ ಪತಿ ಚಂದನ್ ಶೆಟ್ಟಿ ಸಹ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುತ್ತಾರೆ. ಈ ಜೋಡಿ ಆಗಾಗ ರೀಲ್ಸ್ ಮಾಡುತ್ತಾ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿರುತ್ತಾರೆ. ಆಕೆ ಹಂಚಿಕೊಂಡ ಪ್ರತಿಯೊಂದು ವಿಡಿಯೊ ಸಹ ವೈರಲ್ ಆಗುತ್ತಿರುತ್ತದೆ. ಇನ್ನೂ ಇತ್ತೀಚಿಗೆ ನಟಿ ನಿವೇದಿತಾ ಹಂಚಿಕೊಂಡ ಒಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ನಿವೇದಿತಾ ತಾನು ಮಿಸ್ಟ್ರಸ್ ಇಂಡಿಯಾ ಆಗಬೇಕೆಂದು ತೆಗೆದ ಒಂದು ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಟಿ ನಿವೇದಿತಾ ಸಖತ್ ಹಾಟ್ ಆಗಿ ಹಾಗೂ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ನಿವೇದಿತಾಳ ಈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇನ್ನೂ ನಟಿ ನಿವೇದಿತಾ ಸದ್ಯ ಸಿನೆಮಾಗಳಲ್ಲಿ ನಟಿಸುತ್ತಿಲ್ಲ, ಬದಲಿಗೆ ಕಿರುತೆರೆಯಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಇದೀಗ ನಿವೇದಿತಾ ಮಿಸ್ಟ್ರೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗಿಯಾಗುವ ಇಚ್ಚೆಯನ್ನು ಹೊಂದಿದ್ದು, ಇದಕ್ಕಾಗಿ ನಿವೇದಿತಾ ತುಂಬಾ ಸಿದ್ದತೆ ಮಾಡಿಕೊಳ್ಳುತ್ತಿದ್ದಾರಂತೆ. ಈ ಸ್ಪರ್ಧೆಯಲ್ಲಿ ಜಯಗಳಿಸುವ ನಿಟ್ಟಿನಲ್ಲಿ ಕ್ಯಾಟ್ ವಾಕ್ ಮಾಡುವುದು, ಸ್ಟೈಲಿಷ್ ಮ್ಯಾನರಿಸಂ ಸೇರಿದಂತೆ ಸ್ಪರ್ಧೆಗೆ ಬೇಕಾಗುವಂತಹ ಎಲ್ಲದಕ್ಕೂ ಟ್ರೈನಿಂಗ್ ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಇದಕ್ಕಾಗಿ ಪೋಟೊ ಶೂಟ್ ಸಹ ಮಾಡಿಸಿದ್ದಾರೆ. ಇನ್ನೂ ಈ ಸಂಬಂಧ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳು ಫಿದಾ ಆಗಿದ್ದು, ಎಲ್ಲರೂ ಶುಭಾಷಯಗಳನ್ನು ತಿಳಿಸುತ್ತಿದ್ದಾರೆ.

Previous articleಕಾನ್ ಫೆಸ್ಟಿವಲ್ ನಿಂದ ಏನು ಪ್ರಯೋಜನವಿಲ್ಲ ಎಂದ ನಟಿ……
Next articleನಯನತಾರಾ-ವಿಘ್ನೇಶ್ ಮದುವೆ ತಿರುಮಲದಲ್ಲಿ ಅಲ್ಲ, ಚೆನೈನಲ್ಲಂತೆ…. ಮತ್ತೊಂದು ರೂಮರ್….