ನಿವೇದಿತಾರವರ ನೋ ಪ್ರಾಬ್ಲಂ ಹಾಡಿಗೆ ಭರ್ಜರಿ ಡ್ಯಾನ್ಸ್: ವಿಡಿಯೋ ವೈರಲ್

ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಕಿರುತೆರೆ ನಟಿ ನಿವೇದಿತಾ ಗೌಡ ಏನು ಮಾಡಿದರೂ ವೈರಲ್ ಆಗುತ್ತೆ. ಸೋಷಿಯಲ್ ಮಿಡೀಯಾದಲ್ಲಿ ಪ್ಯಾಪುಲರ್‍ ಆದ ನಟಿಯರಲ್ಲಿ ನಿವೇದಿತಾ ಮುಂಚೂಣಿಯಲ್ಲಿದ್ದಾರೆ. ಇದೀಗ ನಿವೇದಿತಾ ನೋ ಪ್ರಾಬ್ಲಂ ಎಂಬ ಹಾಡಿಗೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದು ಸೊಷಿಯಲ್ ಮಿಡೀಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಈ ಕಿರುತೆರೆ ನಟಿ ಹಂಚಿಕೊಳ್ಳುವಂತಹ ಪ್ರತಿಯೊಂದು ವಿಚಾರ ವೈರಲ್ ಆಗುತ್ತದೆ. ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡ ಈ ನಟಿ ಕನ್ನಡದ ಪಾಪ್ ಸಿಂಗರ್‍ ಎಂತಲೇ ಕರೆಯುವ ಚಂದನ್ ಶೆಟ್ಟಿಯವರನ್ನು ಮದುವೆಯಾದರು. ಇನ್ನೂ ಯುಟ್ಯೂಬ್ ಚಾನೆಲ್ ಒಂದನ್ನು ಸಹ ಶುರು ಮಾಡಿದ್ದು, ಈ ಚಾನೆಲ್ ಮೂಲಕ ನಿವೇದಿತಾ ಅನೇಕ ವಿವಿಧ ರೀತಿಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲದೇ ತಮ್ಮ ವೈಯುಕ್ತಿಕ ಜೀವನದ ಕೆಲವೊಂದು ವಿಚಾರಗಳನ್ನು ಸಹ ಈ ಯುಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಳ್ಳುತ್ತಾರೆ.

ಇನ್ನೂ ಸೆಂಚುರಿ ಸ್ಟಾರ್‍ ಶಿವರಾಜ್ ಕುಮಾರ್‍ ರವರ ನೋ ಪ್ರಾಬ್ಲಂ ಹಾಡಿಗೆ ಭರ್ಜರಿಯಾಗಿ ಕುಣಿದು ವಿಡಿಯೋ ಮಾಡಿ ಸೋಷಿಯಲ್ ಮಿಡೀಯಾದಲ್ಲಿ ಶೇರ್‍ ಮಾಡಿದ್ದಾರೆ. ಇನ್ನೂ ಈ ಹೊಸ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿರುವುದರ ಜೊತೆಗೆ ನಿವೇದಿತಾ ಅಭಿಮಾನಿಗಳು ಸಹ ಫಿಧಾ ಆಗುವ ಜೊತೆಗೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ನಿವೇದಿತಾ ರವರ ಕ್ಯೂಟ್ ಲುಕ್ ಎಲ್ಲರನ್ನು ಸೆಳೆಯುವಂತೆ ಮಾಡಿದೆ.

ಅಷ್ಟೇ ಅಲ್ಲದೇ ನಿವೇದಿತ ತಮ್ಮ ದಿನಿತ್ಯದ ಚಟುವಟಿಕೆಗಳ ಕುರಿತು ಸಹ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಾರೆ. ಈ ವಿಡಿಯೋಗಳು ಸಹ ವೈರಲ್ ಆಗುತ್ತವೆ. ದೊಸೆ ಮಾಡುವುದು, ಶಾಪಿಂಗ್, ಪಾನಿಪೂರಿ ಚಾಲೆಂಜ್, ಬ್ಯೂಟಿ ಟಿಪ್ಸ್ ಸೇರಿದಂತೆ ಅನೇಕ ವಿಚಾರಗಳಿಗೆ ಸಂಬಂಧಿಸಿದಂತೆ ವಿಡಿಯೋ ಮಾಡಿ ಹರಿಬಿಡುವುದು ಅವರ ಸ್ವಭಾವವಾಗಿದೆ. ಅತಿ ಮುಖ್ಯವಾಗಿ ನಿವೇದಿತಾ ತಮ್ಮ ಪತಿ ಚಂದನ್ ರೊಂದಿಗೆ ಫ್ರಾಂಕ್ ಮಾಡುವ ವಿಡಿಯೋಗಳಂತೂ ಸಖತ್ ಆಗಿ ವೈರಲ್ ಆಗುತ್ತವೆ.

Previous articleಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯ ಕಲಾವಿದ ಮೋಹನ್ ಜುನೇಜ ನಿಧನ
Next articleನಯನತಾರಾ ವಿಘ್ನೇಶ್ ಮದುವೆ ಡೇಟ್ ಫಿಕ್ಸ್, ಪುಣ್ಯಕ್ಷೇತ್ರದಲ್ಲಿ ನಡೆಯಲಿದೆ ಇವರಿಬ್ಬರ ಮದುವೆ..