Film News

ಕಮ್ ಬ್ಯಾಕ್ ಎಂದೂ ಹಾಟ್ ಅಂಡ್ ಬೋಲ್ಡ್ ಪೊಟೋ ಶೇರ್ ಮಾಡಿದ ಕಾಜಲ್ ತಂಗಿ ನಿಷಾ…!

ದಕ್ಷಿಣ ಭಾರತದ ಬಹುಬೇಡಿಕೆ ನಟಿಯಾಗಿದ್ದ ಕಾಜಲ್ ಅಗರ್ವಾಲ್ ರವರ ತಂಗಿ ನಿಷಾ ಅಗರ್ವಾಲ್ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಟಾಲಿವುಡ್ ನಲ್ಲಿ ಹಿಟ್ ಸಿನೆಮಾಗಳನ್ನು ನೀಡುತ್ತಿದ್ದ ಸಮಯದಲ್ಲೇ ಆಕೆಯ ತಂಗಿ ನಿಷಾ ಅಗರ್ವಾಲ್ ಸಹ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಬ್ಯೂಟಿಯಲ್ಲಿ ಹಾಗೂ ನಟನೆಯಲ್ಲಿ ನಿಷಾ ಅಗರ್ವಾಲ್ ಸಹ ಕಾಜಲ್ ರಂತೆ ತುಂಬಾ ಸುಂದರವಾಗಿದ್ದಾರೆ. ಸಿನಿರಂಗಕ್ಕೆ ಎಂಟ್ರಿ ಕೊಟ್ಟ ನಿಷಾ ಸಕ್ಸಸ್ ಪುಲ್ ನಟಿಯಾಗಿ ಕ್ರೇಜ್ ದಕ್ಕಿಸಿಕೊಳ್ಳದೇ ಇದ್ದರೂ ಸಹ ಒಂದೆರಡು ಹಿಟ್ ಸಿನೆಮಾಗಳು ಆಕೆಯ ಖಾತೆಯಲ್ಲಿ ಸೇರಿಕೊಂಡಿವೆ. ಕಡಿಮೆ ಸಿನೆಮಾಗಳಲ್ಲಿ ನಟಿಸಿದರೂ ಕೂಡ ಆಕೆ ತನ್ನದೇ ಆದ ಅಭಿಮಾನಿ ಬಳಗವನ್ನು ಸಹ ದಕ್ಕಿಸಿಕೊಂಡಿದ್ದಾರೆ.

ಕಳೆದ 2010ರಲ್ಲಿ ನಟಿ ನಿಷಾ ಅಗರ್ವಾಲ್ ಸಂಪತ್ ನಂದಿ ನಿರ್ದೇಶನದಲ್ಲಿ ಮೂಡಿ ಬಂದ ಏಮೈಂದಿ ಈ ವೇಳೆ ಎಂಬ ರೊಮ್ಯಾಂಟಿಕ್ ಸಿನೆಮಾದಲ್ಲಿ ಕಾಣಿಸಿಕೊಂಡರು. ಈ ಸಿನೆಮಾದಲ್ಲಿ ವರುಣ್ ಸಂದೇಶ್ ಜೊತೆಗೆ ನಿಷಾ ತುಂಬಾನೆ ಮುದ್ದಾಗಿ ಕಾಣಿಸಿಕೊಂಡರು. ಈ ಸಿನೆಮಾ ಆಕೆಗೆ ದೊಡ್ಡ ಸಕ್ಸಸ್ ತಂದುಕೊಟ್ಟಿದೆ. ಸಿನೆಮಾ ಚಿಕ್ಕದಾದರೂ ಸಹ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು.  ಬಳಿಕ ಸೋಲೊ ಎಂಬ ಸಿನೆಮಾದಲ್ಲಿ ನಾರಾ ರೋಹಿತ್ ಜೊತೆ ಕಾಣಿಸಿಕೊಂಡರು. ಎಮೋಷನಲ್ ಲವ್ ಎಂಟರ್‍ ಟ್ರೈನರ್‍ ಸಿನೆಮಾ ಆದ ಸೊಲೋ ಸಿನೆಮಾದಲ್ಲಿ ಆಕೆಯ ಅಭಿನಯಕ್ಕೆ ಎಲ್ಲರೂ ಮೆಚ್ಚಿಕೊಂಡಿದ್ದರು. ಈ ಸಿನೆಮಾ ಸಹ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಸಕ್ಸಸ್ ಕಂಡಿತ್ತು. ಈ ಸಿನೆಮಾದ ಬಳಿಕ ನಿಷಾ ಕೆಲವೊಂದು ಸಿನೆಮಾಗಳಲ್ಲಿ ಕಾಣಿಸಿಕೊಂಡರೂ ಸಹ ಆಕೆಗೆ ಸಕ್ಸಸ್ ತಂದುಕೊಡಲಿಲ್ಲ. ಸುಕುಮಾರುಡು, ಸರದಾಗಾ ಅಮ್ಮಾಯಿತೋ ಸಿನೆಮಾಗಳು ಫ್ಲಾಪ್ ಆದವು. ಜೊತೆಗೆ ತಮಿಳು ಹಾಗೂ ಮಲಯಾಳಂ ನಲ್ಲಿ ತೆರೆಕಂಡ ಸಿನೆಮಾಗಳೂ ಸಹ ಆಕೆಗೆ ನಿರಾಸೆ ಮೂಡಿಸಿತು.

ಸಿನಿಕೆರಿಯರ್‍  ಸಕ್ಸಸ್ ತಂದುಕೊಡದ ವೇಳೆಯಲ್ಲೇ ನಿಷಾ ಅಗರ್ವಾಲ್ ಬ್ರಿಲಿಯೆಂಟ್ ಆಗಿ ಮದುವೆ ಮಾಡಿಕೊಂಡು ಸೆಟಲ್ ಆದರು. ಕಳೆದ 2014 ರಲ್ಲಿ ಮುಂಬೈ ಮೂಲದ ಬಂಗಾರದ ಉದ್ಯಮಿ ಕರಣ್ ವಲೆಚ ಎಂಬುವವರನ್ನು ಮದುವೆಯಾದರು. ಬಳಿಕ 2017 ರಲ್ಲಿ ನಿಷಾ ಒಂದು ಗಂಡು ಮಗುವಿಗೆ ಜನ್ಮ ಸಹ ನೀಡಿದ್ದರು. ಮದುವೆ ಬಳಿಕ ನಿಷಾ ಸಿನೆಮಾಗಳಿಗೂ ಸಹ ಗುಡ್ ಬೈ ಹೇಳಿದರು. ಇನ್ನೂ ಆಕೆಯ ಅಭಿಮಾನಿಗಳೂ ಸಹ ಆಕೆ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಯಾವಾಗ ಎಂದು ಕಾಯುತ್ತಿದ್ದರು. ಇದಕ್ಕೆ ನಿಷಾ ಗುಡ್ ನ್ಯೂಸ್ ಒಂದನ್ನು ಸಹ ನೀಡಿದ್ದಾರೆ. ಆಕೆಯ ಇನ್ಸ್ಟಾ ಖಾತೆಯಲ್ಲಿ ಒಂದು ಹಾಟ್ ಪೊಟೋವನ್ನು ಶೇರ್‍ ಮಾಡಿದ್ದಾರೆ. ಆಕೆ ಕಮ್ ಬ್ಯಾಕ್ ಎಂದು ಪೊಟೋ ಶೇರ್‍ ಮಾಡಿದ್ದಾರೆ. ಸದ್ಯ ಆಕೆ ಹಂಚಿಕೊಂಡ ಪೊಟೋ ತುಂಬಾನೆ ಹಾಟ್ ಆಗಿದ್ದು ಪೊಟೋ ಸಿಕ್ಕಾಪಟ್ಟೆ ವೈರಲ್ ಸಹ ಆಗುತ್ತಿದೆ.

ಇನ್ನೂ ನಿಷಾ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋ ಒಂದನ್ನು ಶೇರ್‍ ಮಾಡಿದ್ದು, ಹಿಂದೆಗಿಂದ ರೀ ಎಂಟ್ರಿ ತುಂಬಾ ಬಲವಾಗಿರಲಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಬ್ಯಾಕ್ ಟು ವರ್ಕ್ ಎಂಬ ಹ್ಯಾಷ್ ಟ್ಯಾಗ್ ಸಹ ಹಾಕಿದ್ದಾರೆ. ಸದ್ಯ ಆಕೆ ಯಾವ ಸಿನೆಮಾದಲ್ಲಿ ನಟಿಸುತ್ತಿದ್ದಾರೆ ಎಂಬ ವಿಚಾರ ಮಾತ್ರ ನಿಗೂಡವಾಗಿಯೇ ಇಟ್ಟಿದ್ದಾರೆ ನಿಷಾ.

Trending

To Top