Uncategorized

ಮದುವೆ ಬಳಿಕ ವೆಬ್ ಸೀರಿಸ್ ನಲ್ಲಿ ನಟಿಸಲು ಮುಂದಾದ ನಿಹಾರಿಕಾ

ಹೈದರಾಬಾದ್: ಇತ್ತೀಚಿಗಷ್ಟೆ ಮದುವೆಯಾದ ಮೆಗಾಸ್ಟಾರ್ ಫ್ಯಾಮಿಲಿಯ ನಿಹಾರಿಕಾ ಕೊನಿದೇಲಾ ತಮ್ಮ ಅಭಿಮಾನಿಗಳಿಗಾಗಿ ಗುಡ್ ನ್ಯೂಸ್ ನೀಡಿದ್ದಾರೆ. ವೆಬ್ ಸೀರಿಸ್ ಒಂದರಲ್ಲಿ ನಟಿಸುವ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮುಂದೆ ಬರಲಿದ್ದಾರೆ ನಿಹಾರಿಕಾ.

ಟಾಲಿವುಡ್ ನ ನಿರ್ದೇಶಕ ಭಾನು ರಾಯುಡು ನಿರ್ದೇಶನದಲ್ಲಿ ಈ ವೆಬ್ ಸೀರಿಸ್ ಬರಲಿದ್ದು, ಇನ್ನೂ ಇದಕ್ಕೆ ಟೈಟಲ್ ಫಿಕ್ಸ್ ಮಾಡಿಲ್ಲ. ಈ ಹಿಂದೆಯೂ ಸಹ ನಿಹಾರಿಕಾ ಮುದ್ದಪಪ್ಪು ಅವಕಾಯ್, ನಾನ್ನ ಕೂಚಿ, ಮ್ಯಾಡ್ ಹೌಸ್ ಸೇರಿದಂತೆ ಹಲವು ವೆಬ್ ಸಿರೀಸ್ ಗಳ ಮೂಲಕ ದೊಡ್ಡ ಮಟ್ಟದಲ್ಲಿ ನಿಹಾರಿಕ ಹೆಸರು ಗಳಿಸಿದ್ದಾರೆ. ಇದೀಗ ನಿಹಾರಿಕಾ ರಾಯುಡು ನಿರ್ದೇಶನದ ವೆಬ್ ಸಿರೀಸ್ ನಲ್ಲಿ ನಟಿಸಲು ಒಪ್ಪಿದ್ದಾರೆ. ಇನ್ನೂ ಈ ವೆಬ್ ಸಿರೀಸ್ ಗೆ ಅಧಿಕೃತವಾಗಿ ಚಾಲನೆ ಸಹ ದೊರೆತಿದ್ದು, ನಿಹಾರಿಕಾ ಒತಿ ಚೈತನ್ಯ ಸಹ ವೆಬ್ ಸಿರೀಸ್ ಲಾಂಚ್ ಈವೆಂಟ್ ನಲ್ಲಿ ಭಾಗಿಯಾಗಿದ್ದರು.

ಮದುವೆ ಬಳಿಕ ನಿಹಾರಿಕಾ ಸಿನಿಮಾ ಕ್ಷೇತ್ರದಿಂದ ದೂರ ಉಳಿಯುತ್ತಾರೆ ಎಂಬ ಸುದ್ದಿಯಲ್ಲಿತ್ತು. ಆದರೆ ವೆಬ್ ಸಿರೀಸ್ ಮೂಲಕ ತಾವು ಇನ್ನೂ ಚಿತ್ರರಂಗದಲ್ಲೇ ಇರುವುದಾಗಿ ತಿಳಿಸಿದ್ದಾರೆ. ಇನ್ನೂ ಟಾಲಿವುಡ್ ಖ್ಯಾತ ನಿರೂಪಕಿ ಹಾಗೂ ನಟಿ ಅನಸೂಯ ಸಹ ಈ ಸಿರೀಸ್ ನಲ್ಲಿ ನಟಿಸಲಿದ್ದು, ಮತಷ್ಟು ಹೈಪ್ ಕ್ರಿಯೇಟ್ ಮಾಡಿದೆ.

ಕೆಲವು ತಿಂಗಳುಗಳ ಹಿಂದೆಯಷ್ಟೆ ನಿಹಾರಿಕಾ ಹಾಗೂ ಚೈತನ್ಯ ಮದುವೆ ರಾಜಸ್ಥಾನದಲ್ಲಿ ಅದ್ದೂರಿಯಾಗಿ ನಡೆದಿತ್ತು. ಈ ಸಮಾರಂಭದಲ್ಲಿ ಇಡೀ ಮೆಗಾಸ್ಟಾರ್ ಕುಟುಂಬ ಸಂಭ್ರಮಿಸಿತ್ತು. ನಂತರ ಕ್ರಿಸ್ಮಸ್ ಹಬ್ಬದ ಆಚರಣೆ ಬಳಿಕ ರಾಮ್ ಚರಣ್ ತೇಜ್ ಹಾಗೂ ವರುಣ್ ತೇಜ್ ರವರು ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಇದೀಗ ಕೊರೋನಾ ಸೋಂಕು ಮುಕ್ತರಾಗಿದ್ದು, ಸಿನೆಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

Trending

To Top