ತನ್ನ ಪತಿ ಎಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ ಎಂಬುದನ್ನು ರಿವೀಲ್ ಮಾಡಿದ ನಿಹಾರಿಕಾ!

ಹೈದರಾಬಾದ್: ಇತ್ತೀಚಿಗಷ್ಟೆ ರಾಜಸ್ಥಾನದ ಜೈಪುರದಲ್ಲಿ ಮದುವೆಯಾದ ಮೆಗಾ ಕುಟುಂಬದ ನಿಹಾರಿಕಾ ಕೊನಿದೆಲಾ ತನ್ನ ಪತಿ ಚೈತನ್ಯ ಎಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಾರೆಂಬುದನ್ನು ನಿಹಾರಿಕಾ ಬಹಿರಂಗಗೊಳಿಸಿದ್ದಾರೆ.

ನಿಹಾರಿಕಾ ಅತ್ತೆಯ ಮನೆಯಲ್ಲಿ ಮಹಾರಾಣಿಯಂತೆ ಇದ್ದಾರಂತೆ. ತವರು ಮನೆಗಿಂತಲೂ ಅತ್ತೆ ಮನೆಯಲ್ಲೇ ಫ್ರೀಡಂ ಇದೆಯಂತೆ. ಇನ್ನೂ ನಿಹಾರಿಕಾ ಅತ್ತೆ ಮಾವ ಸಹ ನನ್ನ ಮಗನನ್ನು ನೀನು ಚೆನ್ನಾಗಿ ನೋಡಿಕೋ, ನಾವು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ಸಹ ಹೇಳಿದ್ದಾರೆ ಎನ್ನಲಾಗಿದೆ. ಇನ್ನೂ ಇತ್ತೀಚಿಗೆ ತನ್ನ ಮದುವೆ ನಂತರ ಜೀವನದ ಕುರಿತು ಮಾದ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

ಇನ್ನೂ ಮನೆಯಲ್ಲಿ ಸಣ್ಣ ಪುಟ್ಟ ಗಲಾಟೆ ನಡೆಯುತ್ತಿರುತ್ತದೆ. ನಾನೇ ಜೋರಾಗಿ ಕಿರುಚಾಡುತ್ತೇನೆ. ಆದರೆ ಮೊದಲು ಕ್ಷಮೆ ಕೇಳುವುದು ಚೈತನ್ಯ. ಇಬ್ಬರಲ್ಲೂ ಹೋಲಿಕೆ ಮಾಡಿದರೇ ನನಗೆ ಜಾಸ್ತಿ ಕೋಪ ಎಂದಿದ್ದಾರೆ ನಿಹಾರಿಕಾ. ಅಷ್ಟೇ ಅಲ್ಲದೇ ಮದುವೆಯಾದ ಬಳಿಕ ನನಗೆ ಯಾವುದೇ ನಿಬಂಧನೆಗಳನ್ನು ಅತ್ತೆ ಮನೆಯವರು ಹಾಕುತ್ತಿಲ್ಲ. ನಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯಿಂದಲೂ ನನಗೆ ಕಂಡಿಷನ್ ಬರುತ್ತಿಲ್ಲ. ನನ್ನ ಇಷ್ಟವನ್ನು ಯಾರು ಅಡ್ಡಿ ಪಡಿಸಲ್ಲ ಎಂದಿದ್ದಾರೆ.

ಅಷ್ಟೇ ಅಲ್ಲದೇ ನಿಹಾರಿಕಾ ಇತ್ತಿಚಿಗಷ್ಟೆ ಶೂಟಿಂಗ್ ನಲ್ಲಿದ್ದಾಗ ಕಾಲಿಗೆ ಗಾಯವಾಗಿದ್ದು, ತಾಯಿಯಂತೆ ನನ್ನನ್ನು ಟ್ರೀಟ್ ಮಾಡುತ್ತಿದ್ದಾರೆ ಚೈತನ್ಯ. ಗಾಯಗೊಂಡ ನಾನು ಬೆಡ್‌ಮೇಲೆ ಇದ್ದಾಗ ಮಗುವಿನಂತೆ ನೋಡಿಕೊಂಡಿದ್ದಾರೆ. ಈ ಕುರಿತು ನಿಹಾರಿಕಾ ಮಾಡಿದ ಪೋಸ್ಟ್ ಸಹ ವೈರಲ್ ಆಗುತ್ತಿದೆ.

Previous articleಕನ್ನಡವನ್ನು ಕಿತ್ತುಕೊಳ್ಳುವ ತಾಕತ್ತು ಯಾರಿಗೂ ಇಲ್ಲ: ಸುದೀಪ್
Next articleಪತ್ನಿಗೆ ಸ್ಟೈಲಿಷ್ ಆಗಿ ವಿಶ್ ಮಾಡಿದ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್