Film News

ಪಂಚರಂಗಿ ತುಂಟ ಹುಡುಗಿ, ಹಾರರ್ ಚಿತ್ರದಲ್ಲಿ!

ಬೆಂಗಳೂರು: ದೂದ್ ಪೇಡ ದಿಗಂತ್ ಅಭಿನಯದ ಪಂಚರಂಗಿ ಸಿನೆಮಾದಲ್ಲಿ ತುಂಟ ಹುಡುಗಿಯ ಪಾತ್ರದಲ್ಲಿ ಪ್ರೇಕ್ಷಕರ ಮನಗೆದ್ದ ನಟಿ ನಿಧಿ ಸುಬ್ಬಯ್ಯ ಹಾರರ್ ಚಿತ್ರವೊಂದರಲ್ಲಿ ಅಭಿನಯಿಸಲಿದ್ದಾರಂತೆ. ಇನ್ನೂ ಶೀಘ್ರದಲ್ಲಿಯೇ ಚಿತ್ರದ ಶೂಟಿಂಗ್ ಸಹ ಪ್ರಾರಂಭವಾಗಲಿದೆಯಂತೆ.

ಕೆಲವು ವರ್ಷಗಳ ಹಿಂದೆ ತಮ್ಮ ಮುಗ್ದತೆ, ಮುದ್ದಾದ ನಗು, ತುಂಟತನದೊಂದಿಗೆ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದ ನಿಧಿ ಸುಬ್ಬಯ್ಯ ಸಿನೆಮಾಗಳ ಆಯ್ಕೆಯಲ್ಲಿ ಬ್ಯೂಸಿ ಆಗಿದ್ದರು. ಇಲ್ಲಿಯವರೆಗೂ ತಾವು ಮುಗ್ದ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದವರು, ಪ್ರಸ್ತುತ ಹಾರರ್ ಸಿನೆಮಾವೊಂದರಲ್ಲಿ ನಟಿಸಲು ಸಿದ್ದರಾಗಿದ್ದಾರೆ. ಈ ಚಿತ್ರ ನಿರ್ದೇಶಕ ಲೋಹಿತ್ ರವರ ಫ್ರೈಡೇ ಫಿಲ್ಮ್ಸ್ ಬ್ಯಾನರ್‌ನಡಿ ಮೂಡಿಬರುತ್ತಿದ್ದು, ಪವನ್ ಹಾಗೂ ಪ್ರಸಾದ್ ರವರು ಜಂಟಿಯಾಗಿ ನಿರ್ದೇಶಿಸಲಿರುವ ಚಿತ್ರವಾಗಿದೆ. ಇನ್ನೂ ತುಂಟ ಹುಡುಗಿ ಪಾತ್ರದಲ್ಲಿ ನಟಿಸುತ್ತಿದ್ದ ನಿಧಿ ಹಾರರ್ ಚಿತ್ರದಲ್ಲಿ ನಟಿಸಲು ಉತ್ಸುಕರಾಗಿದ್ದಾರಂತೆ.

ಇನ್ನೂ ಈ ಚಿತ್ರದ ಕುರಿತು ನಿಧಿ ಪ್ರತಿಕ್ರಿಯಿಸಿ ನನಗೆ ಬಬ್ಲಿ ಹುಡುಗಿಯ ಪಾತ್ರಗಳೇ ಹೆಚ್ಚಾಗಿ ಸಿಗುತ್ತಿದ್ದವು. ಹೊಸ ಪಾತ್ರಗಳಲ್ಲಿ ನಟಿಸಬೇಕೆಂಬ ಹುಮ್ಮಸ್ಸು ನನ್ನಲ್ಲಿತ್ತು. ಈ ಚಿತ್ರದಲ್ಲಿ ಅವಕಾಶ ಬಂದ ತಕ್ಷಣ ಒಪ್ಪಿಕೊಂಡಿದ್ದೇನೆ. ಈ ಚಿತ್ರದಲ್ಲಿನ ಪಾತ್ರವನ್ನು ಈ ಹಿಂದೆ ನಾನು ಮಾಡಿಯೇ ಇಲ್ಲ. ನನಗೆ ಮಲಗುವ ಮುನ್ನ ಹಾರರ್ ಅಥವಾ ಥ್ರಿಲ್ಲರ್ ಸಿನೆಮಾಗಳನ್ನು ನೊಡುವ ಅಭ್ಯಾಸವಿದೆ. ಪ್ರಸ್ತುತ ಈ ಹಾರರ್ ಚಿತ್ರದಲ್ಲಿ ನಟಿಸುತ್ತಿರುವುದು ನನಗೂ ಥ್ರಿಲ್ಲಿಂಗ್ ಆಗಿದೆ ಎಂದಿದ್ದಾರೆ.

Trending

To Top