Film News

ಪವನ್ ಕಲ್ಯಾಣ್ ಸಿನೆಮಾದಲ್ಲಿ ನಿಧಿ ಅಗರ್ವಾಲ್!

ಹೈದರಾಬಾದ್: ಟಾಲಿವುಡ್‌ನಲ್ಲಿ ಸಖತ್ ಫೇಮ್ ಹೊಂದಿರುವ ನಟ ಪವನ್ ಕಲ್ಯಾಣ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಅನೇಕ ನಟಿಯರು ಕಾಯುತ್ತಿರುತ್ತಾರೆ. ಇದೀಗ ಈ ಅವಕಾಶ ಯುವನಟಿಯೊಬ್ಬರಿಗೆ ದೊರೆತಿದೆ ಎನ್ನಲಾಗುತ್ತಿದೆ.

ನಟ ಪವನ್ ಕಲ್ಯಾಣ್ ಇತ್ತೀಚಿಗಷ್ಟೆ ವಕೀಲ್ ಸಾಭ್ ಚಿತ್ರವನ್ನು ಮುಗಿಸಿದ್ದು, ಮಲಯಾಳಂನ ಅಯ್ಯುಪ್ಪನುಮ್ ಕೋಶಿಯಂ ರಿಮೇಕ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಬಂದ ಮತ್ತೊಂದು ಸುದ್ದಿಯೆಂದರೇ ನಿರ್ದೇಶಕ ಕ್ರಿಷ್ ಜೊತೆಗೆ ಪಾನ್ ಇಂಡಿಯಾ ಸಿನೆಮಾ ಒಂದರಲ್ಲಿ ಪವನ್ ಬಣ್ಣ ಹಚ್ಚಲಿದ್ದು, ಈ ಚಿತ್ರದಲ್ಲಿ ನಾಯಕಿಯಾಗಿ ದಕ್ಷಿಣ ಭಾರತದ ಖ್ಯಾತ ನಟಿ ನಿಧಿ ಅಗರ್ವಾಲ್ ಅಭಿನಯಿಸಲಿದ್ದಾರೆ ಎಂದು ತಿಳಿದು ಬಂದಿದೆ.

ನಿರ್ದೇಶಕ ಕ್ರಿಷ್ ರವರ ಸಾರಥ್ಯದಲ್ಲಿ ಪವನ್ ಕಲ್ಯಾಣ್ ನಟಿಸಲಿದ್ದು, ಈಗಾಗಲೇ ಚಿತ್ರದ ಶೂಟಿಂಗ್ ಸಹ ಪ್ರಾರಂಭವಾಗಿದೆಯಂತೆ ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಇನ್ನೂ ಈ ಚಿತ್ರ ಪಾನ್ ಇಂಡಿಯಾದಡಿ ನಿರ್ಮಾಣ ವಾಗುತ್ತಿದ್ದು, ಈ ಚಿತ್ರದಲ್ಲಿ ನಾಯಕಿಯಾರು ಎಂಬುದರ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿದ್ದು, ಇದೀಗ ನಾಯಕಿಯಾರು ಎಂಬುದು ಬಹಿರಂಗವಾಗಿದೆ.

ಇನ್ನೂ ನಿಧಿ ಅಗರ್ವಾಲ್ ರವರೇ ಪವನ್ ಸಿನೆಮಾದಲ್ಲಿ ನಟಿಸುವುದರ ಬಗ್ಗೆ ಬಹಿರಂಗಪಡಿಸಿದ್ದು, ಸಿನೆಮಾದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಟ ನಿಧಿ ನಾನು ಪವನ್ ಕಲ್ಯಾಣ್ ರವರೊಂದಿಗೆ ಅಭಿನಯಿಸುತ್ತಿರುವುದು ತುಂಬಾ ಸಂತಸದ ವಿಚಾರ ಹಾಗೂ ಇದು ನನ್ನ ಕನಸು ಸಹ ಹೌದು. ಇನ್ನೂ ಇದು ನನ್ನ ೯ನೇ ಚಿತ್ರವಾಗಿದ್ದು, ಇದನ್ನು ಗೋಲ್ಡನ್ ಸಿನೆಮಾ ಎಂದು ನನ್ನ ಜೀವನದಲ್ಲಿಟ್ಟುಕೊಳ್ಳುತ್ತೇನೆ. ನಟ ಪವನ್ ಕಲ್ಯಾಣ್ ರವರು ತುಂಬಾ ಸರಳ ವ್ಯಕ್ತಿ. ಅವರು ಬೆಸ್ಟ್ ಎಂದು ಹೇಳುತ್ತೇನೆ ಎಂದು ಶೇರ್ ಮಾಡಿದ್ದಾರೆ.

Trending

To Top