Film News

ಹ್ಯಾಕ್ ಆಯ್ತು ಮತ್ತೋರ್ವ ನಟಿ ಇನ್ಸ್ಟಾಗ್ರಾಂ ಖಾತೆ

ತಿರುವನಂತಪುರ: ಇತ್ತೀಚಿಗೆ ಖ್ಯಾತ ನಟ-ನಟಿಯರ, ರಾಜಕಾರಣಿಗಳ, ಸೆಲಬ್ರೆಟಿಗಳ ಸಾಮಾಜಿಕ ಜಾಲತಾಣಗಳ ಖಾತೆಗಳು ಹ್ಯಾಕ್ ಮಾಡುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದೀಗ ಮತ್ತೋರ್ವ ಮಾಲಿವುಡ್ ನಟಿಯ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಮಾಡಿದ್ದಾರೆ ಎನ್ನಲಾಗಿದೆ.

ಖ್ಯಾತ ಮಾಲಿವುಡ್ ನಟಿ ನಜ್ರಿಯಾ ನಜೀಮ್ ರವರ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಮಾಡಿದ್ದು, ಸೋಮವಾರ ರಾತ್ರಿ ಅನಾಮಿಕ ವಿದೇಶಿಯರು ನಜ್ರಿಯಾ ಇನ್ಸ್ಟಾ ಖಾತೆಯಿಂದ ಲೈವ್ ಬಂದಿದ್ದಾರಂತೆ. ಲೈವ್ ನಲ್ಲಿ ಇಬ್ಬರು ವ್ಯಕ್ತಿಗಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಇಬ್ಬರೂ ಸಹ ವಿದೇಶಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ.

ಇನ್ನೂ ಈ ಕುರಿತು ನಜ್ರಿಯಾ ನಜೀಮ್ ತಮ್ಮ ಇನ್ಸ್ಟಾ ಖಾತೆ ಹ್ಯಾಕ್ ಆಗಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ನನ್ನ ಇನ್ಸ್ಟಾ ಖಾತೆಯನ್ನು ಅನಾಮಿಕ ಜೋಕರ್ ಗಳು ಹ್ಯಾಕ್ ಮಾಡಿದ್ದು, ನನ್ನ ಖಾತೆಯಿಂದ ಯಾರಿಗಾದರೂ ಸಂದೇಶಗಳು ಹೋಗಿದ್ದರೇ ಅದನ್ನು ನಿರ್ಲಕ್ಷ್ಯ ಮಾಡಿ ಎಂದು ಸಹ ಮನವಿ ಮಾಡಿದ್ದಾರೆ. ನಟಿ ನಜ್ರಿಯಾ ದಕ್ಷಿಣ ಭಾರತದ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಅನೇಕ ಸಿನೆಮಾಗಳಲ್ಲಿ ನಟಿಸಿದ್ದು, ಸದ್ಯ ಟಾಲಿವುಡ್ ಸ್ಟಾರ್ ನಾನಿ ನಾಯಕನಾಗಿ ಅಭಿನಯಿಸುತ್ತಿರುವ ಅಂತೆ ಸುಂದರಾನಿಕಿ ಎಂಬ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಇತ್ತೀಚಿಗಷ್ಟೆ ನಟಿ ರಾಜಕಾರಣಿ ಊರ್ಮಿಳಾ, ಕನ್ನಡ ಸಂಗೀತಗಾರ ಚಂದನ್ ಶೆಟ್ಟಿ, ನಟಿ ಟಬು ರವರ ಇನ್ಸ್ಟಾಗ್ರಾಂ ಖಾತೆಗಳು ಸಹ ಹ್ಯಾಕ್ ಆಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Trending

To Top