ಬಾಲಿವುಡ್ ನಟಿಯರನ್ನೂ ಹಿಂದಿಕ್ಕಿದ ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ..!

ದಕ್ಷಿಣ ಭಾರತದ ಸಿನಿರಂಗದಲ್ಲಿ ದೊಡ್ಡ ಕ್ರೇಜ್ ಹೊಂದಿರುವ ನಟಿಯರಲ್ಲಿ ನಯನತಾರಾ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ದೊಡ್ಡ ಸ್ಠಾರ್‍ ನಟರ ಜೊತೆ ದೊಡ್ಡ ಸಿನೆಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಕ್ಷಣ ಭಾರತದ ಕ್ರೇಜಿ ನಟಿಯಾದ ಈಕೆ ಇದೀಗ ಬಾಲಿವುಡ್ ಸಿನೆಮಾರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಇದೀಗ ನಯನತಾರಾ ಬಾಲಿವುಡ್ ನಟಿಯರನ್ನೂ ಮಿರೀಸಿ ಸಂಭಾವನೆಯನ್ನು ಪಡೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ವಿಚಾರ ಎಲ್ಲಾ ಕಡೆ ಚರ್ಚೆಗೆ ಕಾರಣವಾಗಿದ್ದು, ಸಿನೆಮಾ ಒಂದಕ್ಕೆ ಆಕೆ ಬರೊಬ್ಬರಿ 10 ಕೋಟಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರಂತೆ. ಇದು ನಿಜವಾದರೇ ಅತಿ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ನಟಿಯಾಗಲಿದ್ದಾರೆ ನಯನತಾರಾ.

ನಟಿ ನಯನತಾರಾ ಕಾಲಿವುಡ್ ನಲ್ಲಿ ಲೇಡಿ ಸೂಪರ್‍ ಸ್ಟಾರ್‍ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. ಸಾಮಾನ್ಯವಾಗಿ ಮದುವೆಯಾದ ಬಳಿಕ ನಟಿಯರಿಗೆ ಡಿಮ್ಯಾಂಡ್ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ನಯನತಾರಾ ವಿಚಾರದಲ್ಲಿ ಅದಾಗಿಲ್ಲ. ಮದುವೆಯಾದ ಮೇಲೂ ನಯನತಾರಾ ಭಾರಿ ಮೊತ್ತದ ಸಂಭಾವನೆ ಪಡೆದುಕೊಳ್ಳಲಿದ್ದಾರಂತೆ. ಇತ್ತಿಚಿಗೆ ಆಕೆ ಕಮರ್ಷಿಯಲ್ ಹಾಗೂ ಲೇಡಿ ಓರಿಯೆಂಟೆಂಡ್ ಸಿನೆಮಾಗೆ ನಾಲ್ಕರಿಂದ ಐದು ಕೋಟಿ ಡಿಮ್ಯಾಂಡ್ ಇಟ್ಟಿದ್ದಾರಂತೆ. ಇನ್ನೂ ಮೆಗಾಸ್ಟಾರ್‍ ಚಿರಂಜೀವಿ ಅಭಿನಯಿಸುವ ಗಾಡ್ ಫಾಧರ್‍ ಎಂಬ ಸಿನೆಮಾದಲ್ಲಿ ಸಹ ನಯನತಾರಾ ನಡೆಯುತ್ತಿದ್ದಾರೆ. ಇದೀಗ ಬಾಲಿವುಡ್ ನಲ್ಲೂ ಸಹ ನಯನತಾರಾ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕಾಲಿವುಡ್ ನಿರ್ದೇಶಕ ಅಟ್ಲಿ ಹಾಗೂ ಬಾಲಿವುಡ್ ಖ್ಯಾತ ನಟ ಶಾರುಖ್ ನಟನಾಗಿ ಕಾಣಿಸಿಕೊಳ್ಳಲಿರುವ ಜವಾನ್ ಎಂಬ ಸಿನೆಮಾಗಾಗಿ ಐದು ಕೋಟಿಗೂ ಅಧಿಕ ಸಂಭಾವನೆ ಪಡೆದುಕೊಳ್ಳುವುದಾಗಿ ಸಹ ಸುದ್ದಿ ಬಂದಿತ್ತು.

ಇದೀಗ ನಯನತಾರಾ ಮತ್ತೊಂದು ಸಿನೆಮಾಗಾಗಿ ಬರೊಬ್ಬರಿ 10 ಕೋಟಿ ಡಿಮ್ಯಾಂಡ್ ಮಾಡಿದ್ದಾರಂತೆ. ಲೇಡಿ ಓರಿಯೆಂಟೆಂಡ್ ಸಿನೆಮಾ ಒಂದಕ್ಕಾಗಿ ಆಕೆ 10 ಕೋಟಿ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಜಿ ಸ್ಟುಡಿಯೋ ಸಂಸ್ಥೆಯ ಬ್ಯಾನರ್‍ ನಡಿ ಬಿಡುಗಡೆಯಾಗಲಿರುವ ಥ್ರಿಲ್ಲರ್‍ ಕಥೆಯುಳ್ಳ ಸಿನೆಮಾದಲ್ಲಿ ಆಕೆ ನಟಿಸಲಿದ್ದಾರಂತೆ. ಈ ಸಿನೆಮಾವನ್ನು ಖ್ಯಾತ ನಿರ್ದೇಶಕ ಶಂಕರ್‍ ಶಿಷ್ಯ ನಿಲೇಶ್ ಕೃಷ್ಣ ನಿರ್ದೇಶನ ಮಾಡಲಿದ್ದಾರಂತೆ. ಈ ಸಿನೆಮಾದಲ್ಲಿ ನಟಿಸಲು ನಯನತಾರಾ ಹತ್ತು ಕೋಟಿ ಡಿಮ್ಯಾಂಡ್ ಇಟ್ಟಿರುವುದು ಎಲ್ಲಾ ಕಡೆ ಜೋರಾಗಿಯೇ ಹರಿದಾಡುತ್ತಿದೆ.

ಇನ್ನೂ ಬಾಲಿವುಡ್ ನಲ್ಲಿ ಖ್ಯಾತ ಸ್ಟಾರ್‍ ನಟಿಯರಾದ ದೀಪಿಕಾ ಪಡುಕೋಣೆ, ಅಲಿಯಾ ಭಟ್ ಸೇರಿದಂತೆ ಕಲವರು ಎಂಟರಿಂದ ಒಂಬತ್ತು ಕೋಡಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ನಯನತಾರಾ ಮಾತ್ರ ಹತ್ತು ಕೋಡಿ ಡಿಮ್ಯಾಂಡ್ ಮಾಡಿದ್ದು, ಹೆಚ್ಚು ಸಂಭಾವನೆ ಪಡೆದುಕೊಳ್ಳುವ ನಟಿಯರಲ್ಲಿ ಟಾಪ್ ಸ್ಥಾನ ಪಡೆದುಕೊಂಡಿದ್ದಾರೆ.  ಅದರಲ್ಲೂ ಕಾಲಿವುಡ್ ಸಿನಿರಂಗದ ಒಬ್ಬ ನಟಿ ಬಾಲಿವುಡ್ ನಟಿಯರಿಗಿಂತಲೂ ಹೆಚ್ಚು ಮೊತ್ತ ಡಿಮ್ಯಾಂಡ್ ಮಾಡುತ್ತಿರುವುದು ಸಿನಿವಲಯದಲ್ಲಿ ಹಾಟ್ ಟಾಪಿಕ್ ಆಗಿದೆ.

Previous articleಟಾಲಿವುಡ್ ನಲ್ಲಿ ಮತ್ತೊಂದು ಸ್ಟಾರ್ ಜೋಡಿಯ ದಾಂಪತ್ಯ ಜೀವನದಲ್ಲಿ ಬಿರುಕು, ಮತ್ತೆ ಒಂದಾಗಿದ್ದಾರೆಯೇ?
Next articleಥೈಸ್ ಶೋ ಮೂಲಕ ಎಲ್ಲರನ್ನು ತನ್ನತ್ತ ಸೆಳೆದ ಪೂಜಾ ಹೆಗ್ಡೆ, ವೈರಲ್ ಆದ ಥೈಸ್ ಪೊಟೋಸ್….!