ರೊಮ್ಯಾನ್ಸ್ ಪಾತ್ರಗಳನ್ನು ಸಂಪೂರ್ಣವಾಗಿ ಸ್ಟಾಪ್ ಮಾಡುತ್ತಾರಾ ನಯನತಾರಾ..!

ದಕ್ಷಿಣ ಭಾರತದಲ್ಲಿ ದೊಡ್ಡ ಸ್ಟಾರ್‍ ನಟಿಯಾಗಿ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ನಟಿ ನಯನತಾರಾ ಇತ್ತೀಚಿಗಷ್ಟೆ ವಿಘ್ನೇಶ್ ಶಿವನ್ ಜೊತೆ ಸಪ್ತಪದಿ ತುಳಿದಿದ್ದಾರೆ. ಇನ್ನೂ ಇತ್ತೀಚಿಗಷ್ಟೆ ಈ ಜೋಡಿ ಹನಿಮೂನ್ ಸಹ ಮುಗಿಸಿ ವಾಪಸ್ಸಾಗಿದ್ದಾರೆ. ಸದ್ಯ ನಯನತಾರಾ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಯಾದರೂ ಸಹ ನಯನತಾರಾ ರವರ ಕ್ರೇಜ್ ಸಹ ಹೆಚ್ಚಾಗಿದೆ. ದೊಡ್ಡ ಮೊತ್ತದ ಸಂಭಾವನೆ ಪಡೆಯಲಿದ್ದಾರೆ ಎಂಬ ಸುದ್ದಿಗಳೆಲ್ಲಾ ಹರಿದಾಡಿತ್ತು. ಜೊತೆಗೆ ಆಕೆ ರೊಮ್ಯಾಂಟಿಕ್ ಪಾತ್ರಗಳಲ್ಲಿ ಇನ್ನು ಮುಂದೆ ಕಾಣಿಸಿಕೊಳ್ಳಲ್ಲ ಎಂಬ ಮಾತುಗಳೂ ಸಹ ಕೇಳಿಬಂದಿತ್ತು.

ಸಾಮಾನ್ಯವಾಗಿ ಮದುವೆಯಾದ ಬಳಿಕ ನಟಿಯರಿಗೆ ಕ್ರೇಜ್ ಕಡಿಮೆಯಾಗುತ್ತದೆ. ಆದರೆ ನಟಿ ನಯನತಾರಾ ವಿಚಾರದಲ್ಲಿ ಇದು ರಿವರ್ಸ್ ಆಗಿದೆ. ಇನ್ನೂ ನಟಿ ನಯನತಾರಾ ಮದುವೆಯಾದ ಬಳಿಕ ತಮ್ಮ ಸಂಭಾವನೆಯನ್ನು ದೊಡ್ಡ ಮಟ್ಟದಲ್ಲೇ ಏರಿಕೆ ಮಾಡಿಕೊಂಡಿದ್ದು, ಈ ವಿಚಾರ ದಕ್ಷಿಣ ಸಿನಿರಂಗದಲ್ಲಿ ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿತ್ತು. ಈ ಹಿಂದೆ ಆಕೆ ತೆಗೆದುಕೊಳ್ಳುತ್ತಿದ್ದ ಸಂಭಾವನೆಗಿಂತ ಎರಡು ಪಟ್ಟು ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಇನ್ನೂ ಆಕೆ ಮದುವೆಯಾದ ಬಳಿಕ ರೊಮ್ಯಾನ್ಸ್ ದೃಶ್ಯಗಳಲ್ಲಿ ನಟಿಸುವುದಿಲ್ಲ ಎನ್ನಲಾಗಿತ್ತು. ಆದರೆ ಆಕೆ ಮದುವೆಯಾದರೂ, ಮಕ್ಕಳಿಗೆ ಜನ್ಮ ನೀಡಿದರೂ ಕೂಡ ರೊಮ್ಯಾನ್ಸ್ ಸನ್ನಿವೇಶಗಳಲ್ಲಿ ನಟಿಸುತ್ತಾರಂತೆ. ಈ ವಿಚಾರದಲ್ಲಿ ಆಕೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರಂತೆ. ನಯನತಾರಾ ಜೀವನದಲ್ಲಿ ಸಿನೆಮಾ ಮೊದಲು ಎಂಟ್ರಿಕೊಟ್ಟಿದ್ದು, ಸಿನೆಮಾ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಇರುವುದಾಗಿ ಹಾಗೂ ಸಿನೆಮಾಗಳಲ್ಲಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಲು ಸಿದ್ದವಾಗಿರುವುದಾಗಿ ಹೇಳುತ್ತಿದ್ದಾರಂತೆ. ಆ ಮೂಲಕ ತಮ್ಮ ವೃತ್ತಿಪರತೆಯನ್ನು ಸಾರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ನಟಿ ನಯನತಾರಾ ಈ ಹಿಂದೆ ಅನೇಕ ಸಿನೆಮಾಗಳಲ್ಲಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ತುಂಬಾನೆ ಬೋಲ್ಡ್ ಆಗಿ ನಟಿಸಿದ್ದಾರೆ. ಅನೇಕ ಸಿನೆಮಾಗಳಲ್ಲಿ ತುಂಬಾ ಬೋಲ್ಡ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಇದೀಗ ಮದುವೆಯಾದ ನಯನತಾರಾ ರೊಮ್ಯಾಂಟಿಕ್ ಸಿನೆಮಾಗಳಲ್ಲಿ ನಟಿಸಲು ಕಠಿಣವಾದ ನಿರ್ಣಯವನ್ನು ತೆಗೆದುಕೊಳ್ಳಬೇಕಿದೆ. ಜೊತೆಗೆ ಅನೇಕ ಸವಾಲುಗಳನ್ನು ಸಹ ಎದುರಿಸಬೇಕಿದೆ. ಲಿಪ್ ಲಾಕ್, ಬೆಡ್ ರೂಂ ಸನ್ನಿವೇಶಗಳೂ ಎಲ್ಲವೂ ರೊಮ್ಯಾಂಟಿಕ್ ದೃಶ್ಯಗಳು ಸಿನೆಮಾಗಳಲ್ಲಿ ಇರುತ್ತವೆ. ಜೊತೆಗೆ ಹಾಟ್ ಡ್ರೆಸ್ ಗಳನ್ನು ಸಹ ಧರಿಸಿಬೇಕಾಗುತ್ತಿದೆ. ಕೆಲವೊಂದು ಮೂಲಗಳ ಪ್ರಕಾರ ನಟಿ ನಯನತಾರ ಸಿನೆಮಾಗಳಲ್ಲಿ ಮೊದಲಿನಂತೆಯೇ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಸದ್ಯ ನಯನತಾರಾ ಕೈಯಲ್ಲಿ ನಾಲ್ಕೈದು ಸಿನೆಮಾಗಳು ಇದ್ದು, ಈ ಸಿನೆಮಾಗಳು ರಿಲೀಸ್ ಆದ ಬಳಿಕ ಆಕೆ ರೊಮ್ಯಾಂಟಿಕ್ ಸೀನ್ ಗಳಲ್ಲಿ ಕಾಣಿಸಿಕೊಳ್ಳುತ್ತಾರಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.

ಸದ್ಯ ನಟಿ ನಯನತಾರಾ ಬಾಲಿವುಡ್ ಬಾದ್ ಷಾ ಶಾರುಕ್ ಖಾನ್ ಹಾಗೂ ನಿರ್ದೇಶಕ ಅಟ್ಲಿ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಜವಾನ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ನಟಿ ನಯನ್ ಶಾರುಕ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ. ಬಾಲಿವುಡ್ ಸಿನೆಮಾಗಳಲ್ಲಿ ರೊಮ್ಯಾಂಟಿಕ್ ದೃಶ್ಯಗಳು ತುಂಬಾನೆ ಇರುತ್ತದೆ. ಆದ್ದರಿಂದ ಜವಾನ್ ಸಿನೆಮಾದಲ್ಲಿ ಯಾವ ರೀತಿಯ ದೃಶ್ಯಗಳಲ್ಲಿ ನಯನತಾರಾ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Previous articleಮದುವೆಯ ಬಗ್ಗೆ ಶಾಕಿಂಗ್ ಸ್ಟೇಟ್ ಮೆಂಟ್ ಕೊಟ್ಟ ಬಾಲಿವುಡ್ ಟಾಪ್ ನಟಿ ಸೋನಾಕ್ಷಿ…!
Next articleವಿಚಿತ್ರ ರವಿಕೆ ಧರಿಸುವ ಮೂಲಕ ಹಾಟ್ ಪೋಸ್ ಕೊಟ್ಟ ನಟಿ ಉರ್ಫಿ, ಇದೇನು ರವಿಕೆ ಗುರು ಎಂದ ನೆಟ್ಟಿಗರು..!