ಚೆನೈ: ತನ್ನ ಗ್ಲಾಮರ್ ಮೂಲಕವೇ ಅನೇಕ ಹುಡುಗರ ನಿದ್ದೆ ಕೆಡಿಸಿದ ಗ್ಲಾಮರಸ್ ಬ್ಯೂಟಿ ನಮಿತಾ ಕೆಲವು ದಿನಗಳ ಹಿಂದೆ ಡಿಪ್ರೆಶನ್ ಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದರಂತೆ.
ಹೌದು ನಟಿ ನಮಿತಾ ದಕ್ಷಿಣ ಭಾರತದಲ್ಲಿ ಬಹುಬೇಡಿಕೆ ನಟಿಯಾಗಿದ್ದರು. ತಾವು ಡಿಪ್ರೆಶನ್ ಗೆ ಒಳಗಾಗಿದ್ದಾಗಿ, ಆತ್ಮಹತ್ಯೆಗೂ ಸಹ ಪ್ರಯತ್ನ ಮಾಡಿದ್ದಾಗಿ ಸ್ವತಃ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನೂ ಡಿಪ್ರೆಶನ್ ಕುರಿತು ಈ ಪೋಸ್ಟ್ ಮಾಡಲಾಗಿದೆ ಎಂದು ಸಹ ಹೇಳಿದ್ದಾರೆ.
ನಟಿ ನಮಿತಾ ಬ್ಲಾಕ್ ಡ್ರೆಸ್ನಲ್ಲಿರುವ ಸುಮಾರು ೧೦ ವರ್ಷಗಳ ಹಿಂದಿನ ಪೊಟೋ ಹಾಗೂ ಅದರ ಪಕ್ಕದಲ್ಲಿರುವ ಈಗಿನ ಪೊಟೋ ಶೇರ್ ಮಾಡಿ, ಹಿಂದೆ ತೆಗೆದ ಪೊಟೋದಲ್ಲಿ ಯಾವುದೇ ಮೇಕಪ್ ಇಲ್ಲ. ನಾನು ಈ ಪೊಟೋಗಳನ್ನು ಶೇರ್ ಮಾಡುತ್ತಿರುವುದು ಡಿಪ್ರೆಶನ್ ಕುರಿತು ಅರಿವು ಮೂಡಿಸುವ ಸಲುವಾಗಿ. ನಾನು ತುಂಬಾ ಡಿಪ್ರೆಶನ್ ನಿಂದ ಬಳಲಲುತ್ತಿದ್ದೆ. ಆದರೆ ಅದು ನನಗೆ ತಿಳಿದೇ ಇರಲಿಲ್ಲ. ಇದೊಂದು ದುರಂತದ ಸಂಗತಿಯೇ ಸರಿ. ಜೊತೆಗೆ ಮಾನಸಿಕವಾಗಿಯೂ ತುಂಬಾ ನೊಂದಿದೆ ಎಂದಿದ್ದಾರೆ.
ಅಷ್ಟೇ ಅಲ್ಲದೇ ಚೆನ್ನಾಗಿ ತಿನ್ನುತ್ತಿದ್ದೆ, ದಿನಾಲೂ ಪಿಜ್ಜಾ ಆರ್ಡರ್ ಮಾಡಿ ತಿನ್ನುತ್ತಿದ್ದೆ, ರಾತ್ರಿ ವೇಳೆ ನಿದ್ದೆ ಬರುತ್ತಿರಲಿಲ್ಲ. ಏಕಾಏಕಿ ೯೭ ಕೆಜಿಯಾಗಿಬಿಟ್ಟೆ, ಬಾಡಿ ಶೇಪ್ ಕೂಡ ಹಾಳಾಯ್ತು, ಜೊತೆಗೆ ಮದ್ಯಪಾನ ಮಾಡುತ್ತಿದ್ದೆ. ಅಕ್ಕಪಕ್ಕದ ಜನರು ತರೇಹವಾರಿ ಮಾತಾನಾಡಲು ಪ್ರಾರಂಭಿಸಿದರು. ಇದೆಲ್ಲರದ ಜೊತೆಗೆ ಆರೋಗ್ಯ ಸಮಸ್ಯೆಗಳಾದ ಪಿಸಿಓಡಿ ಹಾಗೂ ಥೈರಾಯಿಡ್ ನಿಂದ ಸಹ ಬಳಲುತ್ತಿದೆ ಇದೆಲ್ಲಾ ನನಗೆ ಮಾತ್ರ ಗೊತ್ತಿತ್ತು ಎಂದು ಸಾಮಾಜಿಕ ಜಾಲಾತಾಣಗಳಲ್ಲಿ ಬಹಿರಂಗ ಮಾಡಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ ನನಗೆ ಕೃಷ್ಣನ ಕೃಪೆ ದೊರೆಯಿತು. ದಿನಾಲು ಕೃಷ್ಣನ ಆರಾಧನೆಯಲ್ಲಿ ಮುಳುಗುತ್ತಿದ್ದೆ. ಮಂತ್ರ ಧ್ಯಾನಗಳನ್ನು ಮಾಡುವುದರಲ್ಲಿ ತಲ್ಲೀನಳಾಗಿದ್ದೆ, ಡಿಪ್ರೆಶನ್ ನಿಂದ ಹೊರಬರಲು ನಾನು ವೈದ್ಯರ ಬಳಿ ಹೋಗಲಿಲ್ಲ ಬದಲಿಗೆ ಕೃಷ್ಣನ ಆರಾಧನೆಯೇ ನನ್ನ ಥೆರಫಿಯಾಗಿದೆ ಎಂದು ತಿಳಿಸಿದ್ದಾರೆ.
