41ನೇ ವಯಸ್ಸಿನಲ್ಲಿ ತಾಯಿಯಾಗುತ್ತಿದ್ದಾರೆ ನಟಿ ನಮಿತಾ… ಸೋಷಿಯಲ್ ಮಿಡಿಯಾದಲ್ಲಿ ಸಂತಸ ಹಂಚಿಕೊಂಡ ನಟಿ

ಟಾಲಿವುಡ್‌ ಸೊಂತಂ ಎಂಬ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ನಮಿತ ತಾಯಿಯಾಗುವ ಸಂತಸದಲ್ಲಿದ್ದಾರೆ. ತಮ್ಮ ನಟನೆಯ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಹ ಗಳಿಸಿಕೊಂಡಿದ್ದರು. ಜೆಮಿನಿ ಸೇರಿದಂತೆ ದೊಡ್ಡ ನಟರ ಜೊತೆಗೂ ಸಹ ತೆರೆಯನ್ನು ಹಂಚಿಕೊಂಡಿದ್ದರು ನಟಿ ನಮಿತ.

ನಮಿತ ಕಾಲಕ್ರಮೇಣ ದೇಹವನ್ನು ಬೆಳೆಸಿಕೊಂಡರೂ ಸಹ ದಪ್ಪವಾಗಿದ್ದರು ಮುದ್ದಾಗಿ ಇದ್ದಾರೆ ಎಂದು ಅಭಿಮಾನಿಗಳು ಗುಣಗಾಣ ಮಾಡುತ್ತಿದ್ದರು. ನಟಿ ನಮಿತ ಅನೇಕ ಸಿನೆಮಾಗಳಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡರು. ನಂದಮೂರಿ ಬಾಲಕೃಷ್ಣ ಸಿನೆಮಾದಲ್ಲಿ ಸಹ ನಟಿಸುವ ಮೂಲಕ ಎಲ್ಲರನ್ನೂ ರಂಜಿಸಿದ್ದರು. ಅಷ್ಟೇ ಅಲ್ಲದೇ ಮಹಿಳಾ ಪ್ರಧಾನವುಳ್ಳ ಅನೇಕ ಸಿನೆಮಾಗಳಲ್ಲೂ ಸಹ ನಟಿ ನಮಿತ ಬಣ್ಣ ಹಚ್ಚಿದ್ದರು. ಇದೆಲ್ಲದರ ನಡುವೆ ನಮಿತ ಕೆಲ ದಿನಗಳಿಂದ ಸಿನೆಮಾ ರಂಗಕ್ಕೆ ದೂರವಿದ್ದರು.

ಇದಕ್ಕೆ ನಮಿತ ಉತ್ತರ ನೀಡಿದ್ದು, ನಮಿತ ಗರ್ಭಿಣಿಯಾದ ಕಾರಣ ಸಿನೆಮಾಗಳಿಂದ ದೂರವುಳಿದಿದ್ದಾರೆ. ಈ ಕುರಿತು ಕೆಲ ಪೊಟೋಗಳನ್ನು ಸಹ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‍ ಮಾಡಿದ್ದಾರೆ. ಬೇಬಿ ಬಂಪ್ ಪೊಟೋಗಳನ್ನು ಶೇರ್‍ ಮಾಡುವ ಮೂಲಕ ತಾನು ಸಿನೆಮಾಗಳಿಂದ ದೂರವುಳಿಯಲು ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಇನ್ನೂ ನಟಿ ನಮಿತ ಸಿನೆಮಾಗಳಲ್ಲಿ ಬ್ಯುಸಿ ಇರುವಾಗಲೇ ಮದುವೆಯಾದರೂ. ಮದುವೆ ಆದ ಬಳಿಕವೂ ನಮಿತ ಸಿನೆಮಾಗಳಲ್ಲಿ ನಟಿಸಿದ್ದರು.

ಇನ್ನೂ ನಮಿತ ಸಿನೆಮಾ ನಿರ್ಮಾಪಕರಾಗಿ ಕೆಲಸ ಮಾಡಲು ಇಚ್ಚೇ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ನಮಿತ ಗಂಡ ಸಹ ಸಹಕಾರ ನೀಡಲಿದ್ದಾರಂತೆ.  ಇನ್ನೂ 41ನೇ ವಯಸ್ಸಿನಲ್ಲಿ ನಟಿ ನಮಿತ ಗರ್ಭಿಣಿಯಾಗುತ್ತಿದ್ದು, ಬೇಬಿ  ಬಂಪ್ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ತೆಲುಗು ತಮಿಳು ಸಿನೆಮಾರಂಗದಲ್ಲಿ ಹೆಚ್ಚು ಬೇಡಿಕೆಯುಳ್ಳ ನಟಿಯಾಗಿದ್ದು, ಮಗು ಜನಿಸಿದ ಬಳಿಕ ಪುನಃ ಸಿನಿರಂಗಕ್ಕೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.

Previous articleಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಜೊತೆ ಕಾಣಿಸಿಕೊಂಡ ವ್ಯಕ್ತಿ ಯಾರು? ಅಭಿಮಾನಿಗಳಲ್ಲಿ ಮೂಡಿದೆ ಪ್ರಶ್ನೆ….!
Next articleಸಿನೆಮಾ ರಂಗಕ್ಕೆ ಶೀಘ್ರದಲ್ಲೇ ರಿ ಎಂಟ್ರಿ ಕೊಡಲಿದ್ದಾರೆ ಖ್ಯಾತ ನಟಿ ಸೋನಾಲಿ ಬಿಂದ್ರೆ….