ಸ್ನೇಹಕ್ಕಾಗಿ ಆತ್ಮಹತ್ಯೆಗೂ ಸಿದ್ದ ಎಂದ ನಟಿ ಮೌನಿ ರಾಯ್…

ಬಾಲಿವುಡ್ ಬ್ಯೂಟಿ ಮೋಸ್ಟ್ ಟ್ಯಾಲೆಂಟೆಂಡ್ ನಟಿ ಎಂದು ಕರೆಯಲಾಗುವ ನಟಿ ಮೌನಿ ರಾಯ್, ಸಿನೆಮಾಗಳಿಗಿಂತ ಕಿರುತೆರೆಯ ಮೂಲಕ ಹೆಚ್ಚು ಫೇಮಸ್ ಆದ ನಟಿಯಾಗಿದ್ದಾರೆ. ಅದರಲ್ಲೂ ನಾಗಿನಿ ಎಂಬ ತೆಲುಗು ಸಿರೀಯಲ್ ಮೂಲಕ ಮತಷ್ಟು ಫೇಮಸ್ ಆಗಿದ್ದಾರೆ. ಇನ್ನೂ ಇತ್ತೀಚಿಗಷ್ಟೆ ಈಕೆ ಉದ್ಯಮಿ ಸೂರಜ್ ನಂಬಿಯಾರ್‍ ಎಂಬುವವರೊಂದಿಗೆ ಹಸೆಮಣೆ ಏರಿದ್ದಾರೆ. ಇದೀಗ ಈಕೆ ಸ್ನೇಹಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಸಿದ್ದ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ.

ಸದ್ಯ ಮೌನಿ ರಾಯ್ ಮದುವೆ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಸಾಕಷ್ಟು ಸಮಯವನ್ನು ತಮ್ಮ ಕುಟುಂಬದೊಂದಿಗೆ ಹಾಗೂ ಗಂಡನಿಗಾಗಿ ಮೀಸಲಿಡುತ್ತಿದ್ದಾರೆ. ಇತ್ತೀಚಿಗೆ ತನ್ನ ಬೆಸ್ಟ್ ಫ್ರೆಂಡ್ ಹುಟ್ಟುಹಬ್ಬದ ನಿಮಿತ್ತ ಶುಭಾಷಯ ತಿಳಿಸುವ ಸಲುವಾಗಿ ಪೊಟೋ ಶೇರ್‍ ಮಾಡಿ ಆಸಕ್ತಿಕರವಾದ ಹೇಳಿಕೆಗಳನ್ನು ಹಾಕಿದ್ದಾರೆ. ಇದೀಗ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಮೌನಿ ರಾಯ್ ತನ್ನ ಪ್ರೀತಿಯ ಬೆಸ್ಟ್ ಫ್ರೆಂಡ್ ರೂಪಾಲಿಗೆ ವಿಶೇಷ ರೀತಿಯಲ್ಲಿ ಶುಭಾಷಯ ತಿಳಿಸಿದ್ದಾರೆ. ಇದೀಗ ಮೌನಿರಾಯ್ ರವರ ಈ ಪೊಸ್ಟ್ ವೈರಲ್ ಆಗುತ್ತಿದೆ.

ನಟಿ ಮೌನಿ ರಾಯ್, ತನ್ನ ಸ್ನೇಹಿತ ರೂಪಾಲಿ ರವರ ಹುಟ್ಟುಹಬ್ಬಕ್ಕೆ ವಿಶೇಷ ವಾಗಿ ಶುಭಾಷಯ ತಿಳಿಸಿದ್ದಾರೆ. ನಿನ್ನ ಸ್ನೇಹಕ್ಕಾಗಿ 50 ಅಂತಸ್ಥಿನ ಮೇಲಿಂದ ಬೀಳು ಎಂದು ಹೇಳಿದರೇ ಬೇರೆ ಏನು ಹೇಳದೇ ಬಿದ್ದುಬಿಡುತ್ತೇನೆ. ನಿನ್ನೊಂದಿಗೆ ಜಗಳ ಮಾಡಿಕೊಂಡ ಪ್ರತಿಬಾರಿ ನಿನ್ನ ಜೊತೆ ಮಾತನಾಡಬಾರದೆಂದು ಅಂದುಕೊಳ್ಳುತ್ತೇನೆ. ಆದರೆ ಒಂದು ಗಂಟೆ ಇರಲು ಸಾಧ್ಯವಾಗಲ್ಲ. ನೀನು ನನಗೆ ಎಷ್ಟು ಇಷ್ಟ ಎಂದು ಪ್ರತಿಬಾರಿ ನೆನಪು ಮಾಡಿಕೊಳ್ಳುತ್ತೇನೆ. ನನ್ನ ಇಷ್ಟು ಜೀವನ ಸಮಯದಲ್ಲಿ ಇಂತಹ ಸನ್ನಿವೇಶಗಳು ಸುಮಾರು ಬಾರಿ ಬಂದು ಹೋಗಿದೆ. ಆದರೆ ನಾನು ಚೇಂಜ್ ಆಗಿಲ್ಲ. ನೀನು ಆಗಿಲ್ಲ. ನಮ್ಮ ಸ್ನೇಹ ಅಷ್ಟು ಸ್ವಚ್ಚವಾಗಿದೆ.

ಹುಟ್ಟುಹಬ್ಬದ ಶುಭಾಷಯಗಳು ರೂಪ್ಸಿ, ನಾವು ಇದೇ ರೀತಿ ತುಂಬಾನೆ ಹೊಸ ವರ್ಷ, ವಾಲೆಂಟೈನ್ ಡೇ, ಹೋಲಿ ಮೊದಲಾದವುಗಳನ್ನು ಸಂಭ್ರಮದಿಂದ ಆಚರಿಸೋಣ. ನೀನು ನನ್ನವಳು ನಾನು ಎಂದಿಗೂ ನಿನ್ನನ್ನು ಮರೆಯುವುದಿಲ್ಲ. ಜೀವನ ಪರ್ಯಂತ ನಿನ್ನನ್ನು ಪ್ರೀತಿ ಮಾಡುತ್ತೇನೆ. ಎಂದು ಮೌನಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಾಲು ಸಾಲಾಗಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿದರೇ ರೂಪಾಲಿ ಅಂದರೇ ಮೌನಿ ರಾಯ್ ಗೆ ಎಷ್ಟು ಇಷ್ಟ ಎಂಬುದು ತಿಳಿಯುತ್ತದೆ.

Previous articleಬಾಲಿವುಡ್ ಕ್ಯೂಟ್ ಕಪಲ್ಸ್ ಆಲಿಯಾ ರಣಭೀರ್ ಅನ್ ಸೀನ್ ಪೊಟೋಗಳು ವೈರಲ್…
Next articleರೌಡಿ ಹಿರೋ ಜೊತೆಗಿನ ಅಮೆರಿಕಾ ಟೂರ್ ನಲ್ಲಿ ಕಳೆದ ಸಮಯವನ್ನು ಎಂದಿಗೂ ಮರೆಯಲ್ಲ ಎಂದ ಅನನ್ಯ…..