ಮುಂದಿನ ತಿಂಗಳಲ್ಲಿ ನಟಿ ಮೆಹರೀನ್ ನಿಶ್ಚಿತಾರ್ಥ!

ಹೈದರಾಬಾದ್: ದಕ್ಷಿಣ ಭಾರತದಲ್ಲಿ ಬಹುಬೇಡಿಕೆ ನಟಯಾಗಿ ಹೊರಹೊಮ್ಮಿದ ಮೆಹರೀನ್ ಕೌರ್ ಫಿರ್ಜಾದ್ ಮದುವೆಯಾಗಿ ಸೆಟಲ್ ಆಗುವ ಉದ್ದೇಶದಲ್ಲಿದ್ದು, ಮಾರ್ಚ್ 16 ರಂದು ಮೆಹರೀನ್ ರವರ ನಿಶ್ಚಿತಾರ್ಥ ಕೂಡ ನೆರವೇರಲಿದೆ ಎನ್ನಲಾಗಿದೆ.

ಮೆಹರೀನ್ ರವರಿಗೆ ಇನ್ನೂ 25 ವರ್ಷ. ಸಿನಿರಂಗದಲ್ಲಿ ಸಾಕಷ್ಟು ಭವಿಷ್ಯವಿದ್ದರೂ ಸಹ ಮೆಹರೀನ್ ಮದುವೆಯಾಗುವುದರ ಕುರಿತು ಯೋಚನೆ ಮಾಡಿದ್ದು, ಹರ್ಯಾಣ ಮಾಜಿ ಸಿಎಂ ಭಜನ್ ಲಾಲ್ ಮೊಮ್ಮಗ ಭವ್ಯ ಬಿಷ್ಣೋಯ್ ಎಂಬುವರರನ್ನು ವರಿಸಲಿದ್ದಾರಂತೆ. ಇನ್ನೂ ಇವರಿಬ್ಬರ ಎಂಗೇಜ್‌ಮೆಂಟ್ ಸಹ ಇದೇ ಮಾರ್ಚ್ 13 ರಂದು ರಾಜಾಸ್ಥಾನ್‌ನ ಜೈಪುರದಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ಭವ್ಯ ಬಿಷ್ಣೋಯ್ ರವರ ತಂದೆ ಹರ್ಯಾಣದ ಅದಂಪೂರ್ ಎಂಬ ಕ್ಷೇತ್ರದ ಶಾಸಕರಾಗಿದ್ದು, ಭವ್ಯ ಬಿಷ್ಣೋಯ್ ಸಹ ತಮ್ಮ ತಾತ ತಂದೆಯರಂತೆ ರಾಜಕೀಯ ಕ್ಷೇತ್ರದಲ್ಲಿ ಮುನ್ನುಗ್ಗಲಿದ್ದಾರೆ ಎನ್ನಲಾಗಿದೆ.

ಇನ್ನೂ ಮೆಹರೀನ್ ಹಾಗೂ ಭವ್ಯ ಬಿಷ್ಣೋಯ್ ರವರ ಮದುವೆ ದಿನಾಂಕ ಘೋಷಣೆಯಾಗಿಲ್ಲ. ಅಷ್ಟೇ ಅಲ್ಲದೇ ಮದುವೆ ನಂತರ ಮೆಹರೀನ್ ಸಿನೆಮಾ ಕ್ಷೇತ್ರದಿಂದ ದೂರವುಳಿಯಲಿದ್ದಾರೆ ಎನ್ನಲಾಗುತ್ತಿದ್ದು, ಸದ್ಯ ಮೆಹರೀನ್ ಎಫ್-೩ ಎಂಬ ಸಿನೆಮಾದಲ್ಲಿ ನಟ ವರುಣ್ ತೇಜ್ ರವರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಇನ್ನೂ ತೆಲುಗು ನಟ ನಾನಿ ಅಭಿನಯದ ಕೃಷ್ಣಗಾಡಿ ವೀರ ಪ್ರೇಮಗಾಧ ಎಂಬ ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಮೆಹರೀನ್ ಕಡಿಮೆ ಸಮಯದಲ್ಲೇ ಅನೇಕ ಹಿಟ್ ಸಿನೆಮಾಗಳನ್ನು ಮುಡಿಗೇರಿಸಿಕೊಂಡು, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

Previous articleಎರಡನೇ ಮದುವೆ ತಯಾರಿಯಲ್ಲಿ ದಿಯಾ ಮಿರ್ಜಾ!
Next articleಆಚಾರ್ಯ ಚಿತ್ರದಲ್ಲಿನ ಪಾತ್ರಕ್ಕಾಗಿ ಪೂಜಾ ಕೇಳಿದ್ರು ದೊಡ್ಡ ಸಂಭಾವನೆ!