ಅಮ್ಮ ಅನ್ನು ಅಂದರೆ ಅಪ್ಪಅಂತಾನೆ ರಾಯನ್… ವಿಡಿಯೋ ಮಾಡಿ ಶೇರ್ ಮಾಡಿದ ಮೇಘನಾ…

ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ನಟಿಯರಲ್ಲಿ ಒಬ್ಬರಾದ ಮೇಘನಾ ರಾಜ್ ಸರ್ಜಾ ಇದೀಗ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮೇಘನಾ ಪತಿ ಚಿರು ಸರ್ಜಾ ಮೃತಪಟ್ಟ ಬಳಿಕ ಇಡೀ ಕುಟುಂಬದ ಜೊತೆ ಅವರ ಅಭಿಮಾನಿಗಳು ಶೋಕದಲ್ಲಿದ್ದರು. ಇದೀಗ ನಟಿ ಮೇಘನಾ ಮಗ ರಾಯನ್ ನಲ್ಲಿ ಚಿರುವನ್ನು ಕಾಣುತ್ತಾ ಜೀವನ ಸಾಗಿಸುತ್ತಿದ್ದಾಳೆ. ಇನ್ನೂ ಮಗನ ಜೊತೆ ಕಳೆದ ಸಂತೋಷದ ಕ್ಷಣಗಳನ್ನು ನಟಿ ಮೇಘನಾ ಆಗಾಗ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ವಿಡಿಯೋಗಳು ಕ್ಷಣ ಮಾತ್ರದಲ್ಲೇ ವೈರಲ್ ಆಗುತ್ತಿರುತ್ತವೆ.

ಇನ್ನೂ ನಟಿ ಮೇಘನಾ ಮತ್ತೊಂದು ಹೊಸ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನಟಿ ಮೇಘನಾ ಮಗ ರಾಯನ್ ಜೊತೆ ಮಾತನಾಡುತ್ತಾ ಸಂತಸದಿಂದ ಕಳೆದಿದ್ದಾರೆ. ಈ ವಿಡಿಯೋದಲ್ಲಿ ಮೇಘನಾ ರಾಯನ್ ಜೊತೆ ಮಾತನಾಡುತ್ತಿರುತ್ತಾರೆ, ಮೇಘನ ರಾಯನ್ ಗೆ ಅಮ್ಮ ಎಂದು ಹೇಳಿಕೊಡುತ್ತಿದ್ದರೇ ರಾಯನ್ ಮಾತ್ರ ಅಪ್ಪ ಎನ್ನುತ್ತಿದ್ದಾನೆ. ಮೊದಲಿಗೆ ಎರಡು ಬಾರಿ ಅಮ್ಮ ಅಮ್ಮಾ ಎಂದು ಕರೆದ ರಾಯನ್ ಅಪ್ಪ ಎಂದು ಹೇಳುತ್ತಾನೆ. ಸದ್ಯ ಈ ವಿಡಿಯೋವನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ. ಇನ್ನೂ ಚಿರು ಅಭಿಮಾನಿಗಳಿಂದಲೂ ಸಹ ಮೆಚ್ಚುಗೆಯ ಕಾಮೆಂಟ್ ಗಳು ಹರಿದು ಬರುತ್ತಿವೆ.

ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಆಗಿರುತ್ತಾರೆ. ಅದರಂತೆ ಮೇಘನಾ ಸಹ ತಮ್ಮ ಮಗ ರಾಯನ್ ಗೆ ಆಗಾಗ ಕೆಲವೊಂದು ಪಾಠಗಳನ್ನು ಹೇಳಿಕೊಡುತ್ತಿರುತ್ತಾರೆ. ಈಕೆ ಮಗನೊಂದಿಗೆ ಸಂಭ್ರಮಿಸುವಂತಹ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡಿಂಗ್ ಆಗುತ್ತಿರುತ್ತವೆ. ಇದೇ ರೀತಿ ಮಗನಿಗೆ ಅಮ್ಮಾ ಎಂದು ಹೇಳಿಕೊಡುತ್ತಿರುತ್ತಾರೆ. ಈ ವಿಡಿಯೋದಲ್ಲಿ ರಾಯನ್ ರಾಜ್ ಸರ್ಜಾ ಅಮ್ಮ ಅಮ್ಮ ಎಂದು ಮುದ್ದಾಗಿ ಕರೆಯುತ್ತಿರುತ್ತಾರೆ. ಬಳಿಕ ಎರಡು ಬಾರಿ ಅಮ್ಮ ಎಂದವನು ಬಳಿಕ ಅಪ್ಪ ಎಂದು ಕರೆಯುತ್ತಾನೆ. ಹೀಗೆ ಹೇಳುವಾಗ ನಟಿ ಮೇಘನ ಪುಲ್ ಖುಷಿಯಾಗಿದ್ದಾರೆ. ನಟಿ ಮೇಘನಾ ಚಿರು ನಿಧನ, ಮಗುವಿನ ಜನನ ಹಾಗೂ ಕೋವಿಡ್ ಕಾರಣದಿಂದ ಸಿನೆಮಾಗಳಿಂದ ದೂರ ಉಳಿದಿದ್ದರು. ಇದೀಗ ಮತ್ತೆ ನಟನೆಗೆ ಕಮ್ ಬ್ಯಾಕ್ ಆಗಿರುವ ಮೇಘನಾ ಕಿರುತೆರೆ ರಿಯಾಲಿಟಿ ಕಾರ್ಯಕ್ರಮವೊಂದಕ್ಕೆ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಇನ್ನೂ ಮಗನ ಹಾರೈಕೆಯ ಮೇಲೂ ತುಂಬಾ ಕಾಳಜಿ ಹೊಂದಿರುವ ಈಕೆ ಆಗಾಗ ಮಗನ ತುಂಟಾಟದ ವಿಡಿಯೋಗಳನ್ನು ಶೇರ್‍ ಮಾಡುತ್ತಿರುತ್ತಾರೆ.

ಇನ್ನೂ ನಟಿ ಮೇಘನಾ ಇತ್ತೀಚಿಗಷ್ಟೆ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಎಂಬ ಸಿನೆಮಾದಲ್ಲಿ ಕಾಣಸಿಕೊಂಡಿದ್ದರು. ಈ ಸಿನೆಮಾ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ಇನ್ನೂ ಚಿರಂಜೀವಿ ಸರ್ಜಾ ಅಭಿನಯಿಸಿದ್ದ ರಾಜಮಾರ್ತಾಂಡ ಸಿನೆಮಾ ಸಹ ಬಿಡುಗಡೆಗೆ ಸಜ್ಜಾಗುತ್ತಿದೆ. ಇನ್ನೂ ಈ ಸಿನೆಮಾದ ಟೀಸರ್‍ ಸಹ ರಾಯನ್ ಬಿಡುಗಡೆ ಮಾಡಿದ್ದರು. ಇನ್ನೂ ಸಿನೆಮಾದಲ್ಲಿ ರಾಯನ್ ಸಹ ಒಂದು ದೃಶ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Previous articleಬಾಡಿ ಶೇಮಿಂಗ್ ಬಗ್ಗೆ ಓಪೆನ್ ಆದ ಇಲಿಯಾನಾ… ಬಾಡಿಶೇಮಿಂಗ್ ಬಗ್ಗೆ ದಿನಕ್ಕೆ 10 ಸಂದೇಶಗಳು ಬರುತ್ತಂತೆ…!
Next articleವಿದೇಶದಲ್ಲಿ ಪಟಾಕಿ ಆಶಿಕಾ ಹಾಟ್ ಅವತಾರಾ.. ಬೋಲ್ಡ್ ಪೋಟೊಗಳ ಮೂಲಕ ಹೈಪ್ ಹೆಚ್ಚಿಸಿದ ಪಟಾಕಿ ಪೋರಿ