ಚಿರು ಜಾಗ ತುಂಬಲು ಯಾರಿಗೂ ಸಾಧ್ಯವಿಲ್ಲ ಎಂದ ನಟಿ ಮೇಘನಾ ರಾಜ್…!

ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ ಚಿರಂಜೀವಿ ಸರ್ಜಾ ತಮ್ಮ ನಟನೆ ಹಾಗೂ ವ್ಯಕ್ತಿತ್ವದ ಮೂಲಕ ದೊಡ್ಡ ಪ್ರಮಾಣದ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದರು. ಆದರೆ ವಿಧಿಯಾಟಕ್ಕೆ ಚಿರು ಸರ್ಜಾ ಇಹಲೋಕ ತ್ಯೆಜಿಸಿದರು. ಅವರನ್ನು ಕಳೆದುಕೊಂಡ ದಿನ ಇಡೀ ಕರುನಾಡು ಶೋಕ ಆಚರಿಸಿತ್ತು. ಇನ್ನೂ ಚಿರು ಇಹಲೋಕ ತ್ಯೆಜಿಸಿ ಎರಡು ವರ್ಷಗಳು ಪೂರ್ಣಗೊಂಡಿದ್ದು, ಎರಡನೇ ವರ್ಷದ ಕಾರ್ಯ ಮಾಡಿದರು. ಈ ವೇಳೆ ಚಿರು ಪತ್ನಿ ಮೇಘನಾ ಭಾವುಕ ಮಾತುಗಳನ್ನಾಡಿದ್ದಾರೆ.

ಇತ್ತೀಚಿಗಷ್ಟೆ ಧ್ರುವ ಫಾರ್ಮ್ ಹೌಸ್ ನಲ್ಲಿ ಚಿರು ಸಮಾಧಿಗೆ ಪೂಜೆ ಸಲ್ಲಿಸಿದ ಮೇಘನಾ ಕಾರ್ಯದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಭಾವುಕರಾಗಿ ಮಾತನಾಡಿದ್ದಾರೆ. ಚಿರು ಪತ್ನಿ ಮೇಘನಾ ಮಾದ್ಯಮಗಳೊಂದಿಗೆ ಮಾತನಾಡುತ್ತಾ, ನಾನು ಚಿರು ನ ಹೇಗೆ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬುದನ್ನು ಮಾತುಗಳ ಮೂಲಕ ಹೇಳಲು ಸಾಧ್ಯವಿಲ್ಲ. ನಾನು ಹೇಗೆ ಚಿರುನ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬುದು ಎಲ್ಲರಿಗೂ ತಿಳಿದಿದೆ. ಚಿರು ಸ್ಥಾನವನ್ನು ಯಾರೂ ತುಂಬಲು ಸಾಧ್ಯವೇ ಇಲ್ಲ. ರಾಯನ್ ಗೂ ಸಹ ಚಿರು ಸ್ಥಾನ ತುಂಬಲೂ ಸಾಧ್ಯವಿಲ್ಲ. ಚಿರು ಸ್ಥಾನ ತುಂಬಲು ಚಿರುನೇ ಬರಬೇಕು ಎಂದಿದ್ದಾರೆ. ಅಷ್ಟೇ ಅಲ್ಲದೇ ಚಿರುನ ಕಳೆದುಕೊಂಡು ಎರಡು ವರ್ಷ ಅಲ್ಲ ನೂರು ವರ್ಷಗಳು ಕಳೆದರೂ ಚಿರುನನ್ನು ನಮ್ಮ ಕುಟುಂಬ ಮರೆಯುವುದಿಲ್ಲ. ಇಡೀ ಕರುನಾಡು ಸಹ ಮರೆಯಲು ಸಾಧ್ಯವಿಲ್ಲ. ನಾವು ಮಾತ್ರವಲ್ಲ ಮಾಧ್ಯಮಗಳು ಸಹ ಚಿರುನನ್ನು ಮರೆಯಲು ಸಾಧ್ಯವಿಲ್ಲ ಎಂದು ಭಾವುಕ ನುಡಿಗಳನ್ನು ಆಡಿದ್ದಾರೆ.

ಇನ್ನೂ ಚಿರು ಅಭಿಮಾನಿಗಳು ಅವರನ್ನು ದೇವರ ಸ್ಥಾನದಲ್ಲಿಟ್ಟು ನೋಡುತ್ತಿದ್ದಾರೆ. ಅನೇಕ ಅಭಿಮಾನಿಗಳು ಅವರನ್ನು ನೋಡಲು ಬರುತ್ತಿದ್ದಾರೆ. ನಮ್ಮೆಲ್ಲರಿಗೂ ಚಿರು ದೇವರಾಗಿದ್ದಾರೆ. ಅದೇ ರೀತಿ ಎಲ್ಲರೂ ದೇವರಂತೆ ಕಾಣುತ್ತಿದ್ದಾರೆ. ಈ ದಿನ ಪ್ರಮುಖವಾದ ದಿನವಾಗಿದ್ದು, ಅವರಿಗಾಗಿ ಈ ದಿನವನ್ನು ಮೀಸಲಿಟ್ಟಿದ್ದು, ಅನೇಕರು ಬರುತ್ತಿರುವುದಕ್ಕೆ ನನಗೆ ತುಂಭಾ ಸಂತಸ ತಂದಿದೆ ಎಂದಿದ್ದಾರೆ. ಇನ್ನೂ ಚಿರು ಅಭಿಮಾನಿಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಅವರಿಗಾಗಿ ಸಹ ಮೇಘನಾ ಕೆಲವೊಂದು ಮಾತುಗಳನ್ನು ಹೇಳಿದ್ದಾರೆ.

ನಟಿ ಮೇಘನಾ ಚಿರು ಅಭಿಮಾನಿಗಳ ಬಗ್ಗೆ ಸಹ ಮಾತನಾಡಿದ್ದಾರೆ. ನಿಮಗೆ ಚಿರು ಬಗ್ಗೆ ಇರುವಂತಹ ಪ್ರೀತಿಗೆ ಹಾಗೂ ರಾಯನ್ ಗೆ ನೀವು ನೀಡುತ್ತಿರುವ ಆರ್ಶಿವಾದ ಹೀಗೆ ಮುಂದುವರೆಯಬೇಕು ಎಂದು ಆಶೀಸುತ್ತೇನೆ. ಜೊತೆಗೆ ನಮ್ಮ ಕುಟುಂಬ ಮತಷ್ಟು ಮುಂದೆ ಹೋಗಲು ನಿಮ್ಮೆಲ್ಲರ ಸಹಕಾರ ಬೇಕಿದೆ. ನಿಮ್ಮ ಮೂಲಕ ನಾನು ಸ್ಪೂರ್ತಿ ಪಡೆದುಕೊಳ್ಳುತ್ತೇನೆ. ನಾನು ಮುಂದೆ ಯಶಸ್ಸಿನ ಹೆಜ್ಜೆ ಹಾಕಲು ನನಗೆ ಶಕ್ತಿಕೊಡಿ ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಚಿರುಗಾಗಿ ಬಂದಂತಹ ಎಲ್ಲಾ ಅಭಿಮಾನಿಗಳಿಗೂ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದಿದ್ದಾರೆ ಮೇಘನಾ.

Previous articleJGM ಸಿನೆಮಾಗಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರಂತೆ ನಟಿ ಪೂಜಾ ಹೆಗ್ಡೆ…!
Next articleಶೀಘ್ರದಲ್ಲೇ ಸೋನಾಕ್ಷಿ ಸಿನ್ಹಾ ಮದುವೆ, ವಿಡಿಯೋ ಮೂಲಕ ಕ್ಲಾರಿಟಿ ಕೊಟ್ಟ ಬಾಯ್ ಫ್ರೆಂಡ್…..