Film News

ಯಂಗ್ ನಟರೊಂದಿಗೆ ನಟಿಸಲು ಕಂಫರ್ಟ್ ಎನ್ನುತ್ತಿದ್ದಾರಂತೆ ಮೀರಾ ಜಾಸ್ಮೀನ್, ಆ ನಟರು ಬೇಡ ಎಂದರೇ ಮೀರಾ?

ಒಂದು ಕಾಲದಲ್ಲಿ ಟಾಲಿವುಡ್ ಸಿನಿರಂಗವನ್ನು ಆಳಿದಂತಹ ನಟಿಯರಲ್ಲಿ ಮೀರಾ ಜಾಸ್ಮೀನ್ ಸಹ ಟಾಪ್ ಸ್ಥಾನದಲ್ಲಿರುತ್ತಾರೆ. ಸಣ್ಣ ನಟರಿಂದ ಹಿಡಿದು ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸಿ ಕಡಿಮೆ ಸಮಯದಲ್ಲೇ ಆಕೆ ಸ್ಟಾರ್‍ ಡಮ್ ಗಿಟ್ಟಿಸಿಕೊಂಡರು. ಮದುವೆಯಾದ ಬಳಿಕ ಆಕೆ ಸಿನಿರಂಗದಿಂದ ದೂರವೇ ಉಳಿದಿದ್ದು, ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಂತೂ ಯಂಗ್ ನಟಿಯರನ್ನೂ ಸಹ ನಾಚಿಸುವಂತಹ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಆಕೆಯ ಕುರಿತು ಹೊಸದೊಂದು ಸುದ್ದಿ ಸಿನಿರಂಗದಲ್ಲಿ ಹರಿದಾಡುತ್ತಿದೆ.

ತೆಲುಗು ಸಿನಿರಂಗವನ್ನು ಸುಮಾರು ವರ್ಷಗಳ ಕಾಳ ಆಳಿದಂತಹ ಮೀರಾ ಜಾಸ್ಮೀನ್ ಮಾಲಿವುಡ್ ಸಿನಿರಂಗದಿಂದ ಟಾಲಿವುಡ್ ಗೆ ಎಂಟ್ರಿ ಕೊಟ್ಟರು. ಟಾಲಿವುಡ್ ನಲ್ಲಿ ಹೆಚ್ಚು ಸಕ್ಸಸ್ ಕಂಡುಕೊಂಡ ಮಾಲಿವುಡ್ ನಟಿರಯಲ್ಲಿ ಮೀರಾ ಜಾಸ್ಮೀನ್ ಸಹ ಒಬ್ಬರಾಗಿದ್ದಾರೆ. ಇನ್ನೂ ಆಕೆಯ ಸಿನಿ ಕೆರಿಯರ ಉತ್ತುಂಗದ ಹಂತದಲ್ಲಿರುವಾಗಲೇ ಆಕೆ ಮದುವೆಯಾದರು. ಮದುವೆಯಾದ ಬಳಿಕ ಆಕೆ ಸಿನಿರಂಗದಿಂದ ದೂರವೇ ಉಳಿದರು. ಆದರೆ ಮೀರಾ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಪುಲ್ ಆಕ್ಟೀವ್ ಆಗಿದ್ದಾರೆ. ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ಹಾಗೂ ನೆಟ್ಟಿಗರನ್ನೂ ಸಹ ರಂಜಿಸುತ್ತಲೇ ಇರುತ್ತಾರೆ. ತಾನು ಇನ್ನೂ ಸಿನಿರಂಗದಲ್ಲಿ ಮುಂದುವರೆಯಬಲ್ಲೆ ಎಂಬುದನ್ನು ಸೋಷಿಯಲ್ ಮಿಡಿಯಾ ಮೂಲಕವೇ ಸಾರಿ ಹೇಳುತ್ತಿದ್ದಾರೆ ಮೀರಾ ಜಾಸ್ಮೀನ್.

ಇತ್ತಿಚಿಗಷ್ಟೆ ಮೀರಾ ತನ್ನ ಪತಿಯೊಂದಿಗೆ ದೂರವಾಗಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿದೆ. ಸದ್ಯ ಆಕೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಸೆಕೆಂಡ್ ಇನ್ನಿಂಗ್ಸ್ ನಲ್ಲಿ ತಮ್ಮ ಹಿಂದಿನ ಚಾರ್ಮ್ ಗಳಿಸಿಕೊಳ್ಳುವ ನಿಟ್ಟಿನಲ್ಲಿ ದೊಡ್ಡ ಮಟ್ಟದಲ್ಲೇ ಟ್ರೈ ಮಾಡುತ್ತಿದ್ದಾರೆ. ಇನ್ನೂ ಇತ್ತಿಚಿಗಷ್ಟೆ ಆಕೆಗೆ ವಿಕ್ಟರಿ ವೆಂಕಟೇಶ್ ಜೊತೆಗೆ ನಟಿಸುವ ಅವಕಾಶ ಬಂದಿತ್ತಂತೆ. ನಾರಪ್ಪ ಸಿನೆಮಾದಲ್ಲಿ ಆಕೆಯನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧಾರ ಮಾಡಲಾಗಿತ್ತಂತೆ. ಆದರೆ ಮೀರಾ ಜಾಸ್ಮೀನ್ ನಾನು ವೆಂಕಟೇಶ್ ಜೊತೆಗೆ ನಟಿಸುವುದಿಲ್ಲ ಎಂದು ನೇರವಾಗಿಯೇ ಹೇಳಿದ್ದರಂತೆ. ಆತ ಒಂದು ಕಾಲದಲ್ಲಿ ಹಿರೋ ಇದೀಗ ವಯಸ್ಸಾಗಿದೆ ಎಂದು ನಿರ್ದೇಶಕನ ಮುಂದೆಯೇ ಹೇಳಿದ್ದರಂತೆ. ಜೊತೆಗೆ ಬಾಲಕೃಷ್ಣ ಸಿನೆಮಾದಲ್ಲೂ ಸಹ ನಟಿಸುವ ಅವಕಾಶ ಬಂದಿತ್ತಂತೆ ಅದನ್ನೂ ಸಹ ರಿಜೆಕ್ಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ..

ಇನ್ನೂ ಮೀರಾ ಜಾಸ್ಮೀನ್ ಈ ರೀತಿಯಾಗಿ ಹೇಳಿದ್ದಾರೋ ಇಲ್ಲವೋ, ಈ ಸುದ್ದಿ ನಿಜವೋ ಸುಳ್ಳೋ ತಿಳಿಯದು. ಈ ಸುದ್ದಿ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಆಕೆಯ ಈ ಹೇಳಿಕೆಗಳಿಗೆ ಅನೇಕರು ಸಹ ವಿಮರ್ಶೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಮೀರಾ ಜಾಸ್ಮೀನ್ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಯಶಸ್ಸು ಗಳಿಸಿಕೊಳ್ಳಲು ತುಂಬಾನೆ ಪ್ರಯತ್ನ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಸಾಲು ಸಾಲು ಹಾಟ್ ಪೊಟೋಶೂಟ್ಸ್ ಮೂಲಕ ನಿರ್ಮಾಪಕರು ಹಾಗೂ ನಿರ್ದೇಶಕರ ಗಮನ ಸೆಳೆಯುತ್ತಿದ್ದಾರೆ ಎನ್ನಬಹುದಾಗಿದೆ.

Trending

To Top