Film News

ನಲವತ್ತರ ವಯಸ್ಸಿನಲ್ಲೂ ಕ್ಲೀವೇಜ್ ಶೋ ನಲ್ಲಿ ನೆಕ್ಸ್ಟ್ ಲೆವೆಲ್ ಪೋಸ್ ಕೊಟ್ಟ ಮೀರಾ…!

ಬಹುಭಾಷಾ ನಟಿ ಮೀರಾ ಜಾಸ್ಮೀನ್ ಕೆಲ ವರ್ಷಗಳು ಸಿನಿರಂಗದಲ್ಲಿ ದೊಡ್ಡ ಹೆಸರು ಗಳಿಸಿ ಮಾಯವಾಗಿದ್ದರು. ತೆಲುಗು, ಕನ್ನಡ, ತಮಿಳು ಭಾಷೆಗಳ ಅನೇಕ ಸಿನೆಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಕನ್ನಡ ಸಿನೆಮಾಗಳಲ್ಲೂ ನಟಿಸಿದ ಈ ನಟಿಯನ್ನು ಯಾರು ಮರೆತಿಲ್ಲ. ಸಿನೆಮಾ ರಂಗದಿಂದ ದೂರವುಳಿದರೂ ಸಹ ಅವರು ಅಭಿಮಾನಿಗಳ ಮನದಲ್ಲಿ ಇನ್ನೂ ನೆಲೆಯೂರಿದ್ದಾರೆ. ಇತ್ತೀಚಿಗೆ ಆಕೆ ಸಿನೆಮಾಗಳಲ್ಲಿ ರೀ ಎಂಟ್ರಿ ಕೊಡಲು ಸಿದ್ದವಾಗಿದ್ದಾರೆ. ಈ ಹಾದಿಯಲ್ಲೇ ಆಕೆ ಸೋಷಿಯಲ್ ಮಿಡಿಯಾದಲ್ಲಿ ಇತ್ತೀಚಿಗೆ ಹಾಟ್ ಟ್ರೀಟ್ ನೀಡುತ್ತಿದ್ದಾರೆ.

ಸೌತ್ ಸಿನಿರಂಗದಲ್ಲಿ ಒಂದು ಕಾಲದಲ್ಲಿ ಬಹುಬೇಡಿಕೆ ಹೊಂದಿರುವ ನಟಿಯರಲ್ಲಿ ಮೀರಾ ಜಾಸ್ಮೀನ್ ಸಹ ಒಬ್ಬರಾಗಿದ್ದಾರೆ. ನಟನೆ, ಸೌಂದರ್ಯದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಸ್ಟಾರ್‍ ನಟರೊಂದಿಗೆ ತೆರೆ ಹಂಚಿಕೊಂಡು ಅನೇಕ ಹಿಟ್ ಸಿನೆಮಾಗಳನ್ನು ಸಹ ನೀಡಿದ್ದರು. ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ಆಕೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು ಬಳಿಕ ಸಿನೆಮಾಗಳಿಂದ ದೂರವಾದರು. ಆಕೆ ಕಳೆದ 2014 ರಲ್ಲಿ ಇಂಜನೀಯರ್‍ ಅನೀಲ್ ಜಾನ್ ಎಂಬಾತನೊಂದಿಗೆ ವಿವಾಹವಾದರು. ವಿವಾಹದ ಬಳಿಕ ಆಕೆ ಪತಿಯೊಂದಿಗೆ ದುಬೈನಲ್ಲಿ ಸೆಟಲ್ ಆಗಿದ್ದಾರೆ. ಜೊತೆಗೆ ಇತ್ತೀಚಿಗೆ ಆಕೆ ಪತಿಯೊಂದಿಗೆ ಬೇರೆಯಾಗಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.

ಇನ್ನೂ ನಟಿ ಮೀರಾ ಜಾಸ್ಮೀನ್ ಇತ್ತೀಚಿಗೆ ಸೋಷಿಯಲ್ ಮಿಡಿಯಾವನ್ನು ವೇದಿಕೆಯನ್ನಾಗಿ ಮಾಡಿಕೊಂಡು ಹಾಟ್ ಟ್ರೀಟ್ ನೀಡುತ್ತಿದ್ದಾರೆ. ಯುವ ನಟಿಯರನ್ನೂ ಸಹ ನಾಚಿಸುವಂತಹ ಪೋಸ್ ಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಆಕೆಯ ಹಾಟ್ ನೆಸ್ ದಿನೇ ದಿನೇ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ. ಆಕೆಯ ಪೊಟೋಗಳನ್ನು ನೋಡಿದರೇ ಆಕೆಯ ವಯಸ್ಸು ದಿನೇ ದಿನೇ ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ.  ಅಷ್ಟರ ಮಟ್ಟಿಗೆ ಆಕೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತಿಚಿಗೆ ಆಕೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು ಪೊಟೊಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗಿದೆ. ಜೊತೆಗೆ ಪೊಟೋಗಳಿಗೆ ಹಾಟ್ ಕಾಮೆಂಟ್ ಗಳ ಮೂಲಕ, ಲೈಕ್ ಬಟನ್ ಪ್ರೆಸ್ ಮಾಡುವ ಮೂಲಕ ಪೊಟೋಗಳನ್ನು ವೈರಲ್ ಮಾಡಿದ್ದಾರೆ.

ಇನ್ನೂ ಮೀರಾ ಹಂಚಿಕೊಂಡ ಪೊಟೋಗಳನ್ನು ನೋಡಿದರೇ ಆಕೆಗೆ 40 ರ ವಯಸ್ಸಾಗಿದೆ ಎಂದು ತಿಳಿಯುವುದೇ ಇಲ್ಲ. ವೈಟ್ ಕಲರ್‍ ಟೀ ಶರ್ಟ್ ನಲ್ಲಿ ತನ್ನ ಕ್ಲೀವೇಜ್ ಸೌಂದರ್ಯವನ್ನು ಪ್ರದರ್ಶನ ಮಾಡುತ್ತಾ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ. ಈ ತಣ್ಣನೇಯ ವಾತವರಣದಲ್ಲೂ ಆಕೆ ನೆಕ್ಸ್ಟ್ ಲೆವೆಲ್ ಅನ್ನೋ ತರಹ ಹಾಟ್ ಟ್ರೀಟ್ ನೀಡಿದ್ದಾರೆ. ಇನ್ನೂ ಮೀರಾ ಜಾಸ್ಮೀನ್ ಮತ್ತೆ ಸಿನೆಮಾಗಳಲ್ಲಿ ರೀ ಎಂಟ್ರಿ ಕೊಡಲಿದ್ದಾರೆ. ಈ ಹಿನ್ನೆಲೆಯಲ್ಲೇ ಆಕೆ ಹಾಟ್ ಪೊಟೋಶೂಟ್ ಮೂಲಕ ನಿರ್ಮಾಪಕರು ಹಾಗೂ ನಿರ್ದೇಶಕರ ಗಮನ ಸೆಳೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Trending

To Top