ಮೀರಾ ಜಾಸ್ಮಿನ್ ಗೆ 40 ವಯಸ್ಸಾದರೂ, ಕಾಣೋದು 20ರ ಪ್ರಾಯದ ಹುಡುಗಿಯಂತೆ…..

ಬಹುಭಾಷಾ ನಟಿ ಮೀರಾ ಜಾಸ್ಮೀನ್ ಕೆಲ ವರ್ಷಗಳು ಸಿನಿರಂಗದಲ್ಲಿ ದೊಡ್ಡ ಹೆಸರು ಗಳಿಸಿ ಮಾಯವಾಗಿದ್ದರು. ತೆಲುಗು, ಕನ್ನಡ, ತಮಿಳು ಭಾಷೆಗಳ ಅನೇಕ ಸಿನೆಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಕನ್ನಡ ಸಿನೆಮಾಗಳಲ್ಲೂ ನಟಿಸಿದ ಈ ನಟಿಯನ್ನು ಯಾರು ಮರೆತಿಲ್ಲ. ಸಿನೆಮಾ ರಂಗದಿಂದ ದೂರವುಳಿದರೂ ಸಹ ಅವರು ಅಭಿಮಾನಿಗಳ ಮನದಲ್ಲಿ ಇನ್ನೂ ನೆಲೆಯೂರಿದ್ದಾರೆ.

ಸದ್ಯ ಮೀರಾ ಜಾಸ್ಮೀನ್ ಸಿನಿರಂಗಕ್ಕೆ ರಿ-ಎಂಟ್ರಿ ಕೊಟ್ಟಿದ್ದಾರೆ. ತಮಿಳು ಭಾಷೆಯ ಸಿನೆಮಾವೊಂದರಲ್ಲಿ ನಟಿಸುವ ಮೂಲಕ ಸಿನಿ ಲೋಕಕ್ಕೆ ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಅದೂ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದು. ಅವರನ್ನು ನೋಡಿದವರು ನಿಜವಾಗಲೂ ಅವರು ಮೀರಾ ಜಾಸ್ಮೀನ್ ರವರೇನಾ ಎಂಬ ಅಚ್ಚರಿಗೆ ಗುರಿಯಾಗಬೇಕಿದೆ. ಅಷ್ಟರ ಮಟ್ಟಿಗೆ ಅವರ ಲುಕ್ ಬದಲಾಗಿದೆ. ಇನ್ನೂ ಹಿಂದಿನ ಸಿನೆಮಾಗಳಲ್ಲಿ ಕಾಣಿಸಿಕೊಂಡ ಲುಕ್ ಗಿಂತ ಈಗ ಕಾಣಿಸುತ್ತಿರುವ ಲುಕ್ ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಗ್ಲಾಮರ್‍ ಬೊಂಬೆಯಂತೆ ಮಿರಮಿರ ಮಿಂಚುತ್ತಿದ್ದಾರೆ ಮೀರಾ ಜಾಸ್ಮೀನ್.

ಮಲಯಾಳಂ ಮೂಲದ ನಟಿ ಮೀರಾ ಜಾಸ್ಮೀನ್ ರವರಿಗೆ ವಯಸ್ಸು 40 ಆದರೂ ಕಾಣಿಸುವುದು ಮಾತ್ರ 20 ಯುವತಿಯಂತೆ. ಬಾಡಿ ಫಿಟ್‌ನೆಸ್ ಕುರಿತು ಮೀರಾ  ಹೆಚ್ಚು ಕಾಳಜಿ ತೋರುತ್ತಾರೆ. ಸದ್ಯ ಮೀರಾ ಜಾಸ್ಮೀನ್ ಜಿಮ್ ನಲ್ಲಿ ವರ್ಕೌಟ್ ಮಾಡುವ ಪೊಟೋಗಳನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಲುಕ್ ಕಂಡ ಅಭಿಮಾನಿಗಳು ಮೀರಾ ಜಾಸ್ಮೀನ್ ಅವರೇನಾ ಎಂಬ ಗೊಂದಲಕ್ಕೆ ಗುರಿಯಾಗಿದ್ದಾರೆ. ಸದ್ಯ ಈ ಪೊಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಮೀರಾ ನಟಿಸಿದ್ದು ಕೆಲವೇ ಸಿನೆಮಾಗಳಲ್ಲಿ ಆದರೂ ಸಹ ಬಹುಬೇಡಿಕೆ ನಟಿಯಾಗಿ ದೊಡ್ಡ ಫ್ಯಾನ್ ಫಾಲೊಯೀಂಗ್ ಸಹ ಗಳಿಸಿಕೊಂಡಿದ್ದಾರೆ.  ಸದ್ಯ ಮೀರಾ ಜಾಸ್ಮೀನ್ ಹೊಸ ಲುಕ್ ನೋಡಿದ ಅಭಿಮಾನಿಗಳಂತೂ ಶಾಕ್ ಆಗಿದ್ದಾರೆ. ಜೊತೆಗೆ ಕೆಲವರು ಮೀರಾ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಅವರ ಮೂಗು ತುಟಿಯ ಆಕಾರ ಬದಲಾಗಿದೆ. ಇದೆಲ್ಲ ನೋಡಿದರೇ ಅವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಗೊತ್ತಾಗುತ್ತದೆ ಎಂಬೆಲ್ಲಾ ಚರ್ಚೆಗಳೂ ಸಹ ಶುರುವಾಗಿದೆ.

Previous articleಬಾಲಿವುಡ್ ಗೆ ಟಾಂಗ್ ಕೊಟ್ಟ ಪ್ರಿನ್ಸ್ ಮಹೇಶ್ ಬಾಬು.. ನನ್ನನ್ನು ನಿಭಾಯಿಸುವ ಶಕ್ತಿ ಬಾಲಿವುಡ್ ಗಿಲ್ಲ ಎಂದ್ರು ಮಹೇಶ್…
Next articleಶೃತಿ ಹಾಸನ್ ರವರ ಹಾಟ್ ಸೆಲ್ಫಿಗೆ ಅಭಿಮಾನಿಗಳ ಮೈಂಡ್ ಬ್ಲಾಕ್…..