ಮಾಜಿ ಮಿಸ್ ವರ್ಲ್ಡ್ ಗೆ ಟಾಲಿವುಡ್ ನಟನೊಂದಿಗೆ ಡೇಟ್ ಮಾಡುವ ಆಸೆಯಂತೆ…!

ಮಾಜಿ ವಿಶ್ವ ಸುಂದರಿ ಮನುಷಿ ಚಿಲ್ಲರ್‍ ಗೆ ಟಾಲಿವುಡ್ ನ ಖ್ಯಾತ ನಟನೊಂದಿಗೆ ಡೇಟ್ ಮಾಡುವ ಆಸೆಯಿದೆಯಂತೆ. ಇತ್ತೀಚಿಗೆ ಆಕೆ ಆಂಕರ್‍ ಒಬ್ಬರು ನಿಮಗೆ ಡೇಟ್ ಮಾಡುವ ಅವಕಾಶ ದೊರೆತರೇ ಯಾರ ಜೊತೆ ಮಾಡಲು ಇಷ್ಟಪಡುತ್ತಾರೆ ಎಂದು ಕೇಳಿದ್ದಾರೆ. ಆಕೆ ಟಾಲಿವುಡ್ ಸ್ಟಾರ್‍ ನಟನೊಂದಿಗೆ ಡೇಟ್ ಮಾಡಲು ಇಷ್ಟ ಪಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ನಟಿ ಮಾನುಷಿ ಚಿಲ್ಲರ್‍ ಡೇಟ್ ನಟಿಸಲು ಇಷ್ಟ ಪಟ್ಟ ನಟ ಯಾರು ಎಂಬುದನ್ನು ತಿಳಿಯಲು ಮುಂದೆ ಓದಿ..

ಕಳೆದ 2017 ರ ಮಿಸ್ ವರ್ಲ್ಡ್ ವಿಜೇತೆ ಮನುಷಿ ಚಿಲ್ಲರ್‍ ಬಾಲಿವುಡ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್‍ ರೊಂದಿಗೆ ಪೃಥ್ವಿರಾಜ್ ಚೌಹಾಣ್ ಎಂಬ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾದ ಪ್ರಮೋಷನ್ ಕುರಿತಂತೆ ಇಂಟರ್‍ ವ್ಯೂವ್ ಒಂದರಲ್ಲಿ ಅವರು ತಮ್ಮ ಅಭಿಮಾನದ ನಟನ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ನಿಮಗೆ ಡೇಟ್ ಮಾಡಲು ಅವಕಾಶ ಬಂದರೇ ಯಾವ ನಟನೊಂದಿಗೆ ಡೇಟ್ ಗೆ ಹೋಗುತ್ತಿರಾ ಎಂದು ಕೇಳಿದ್ದು, ಇದಕ್ಕೆ ಟಾಲಿವುಡ್ ನಟನೊಂದಿಗೆ ಡೇಟ್ ಗೆ ಹೋಗಲು ಇಚ್ಚೆ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ನಟಿ ಮನುಷಿ ಚಿಲ್ಲರ್‍ ಗೆ ಟಾಲಿವುಡ್ ಸ್ಟಾರ್‍ ನಟ ಮೆಗಾ ಕುಟುಂಬದ ರಾಮ್ ಚರಣ್ ತೇಜ್ ಜೊತೆ ಡೇಟ್ ಗೆ ಹೋಗಲು ಇಷ್ಟ ಎಂಬ ಮಾತನ್ನು ಹೇಳಿಕೊಂಡಿದ್ದಾರೆ.

ಇತ್ತೀಚಿಗೆ ನಟ ರಾಮ್ ಚರಣ್ ಬಾಲಿವುಡ್ ಹಿರೋಗಳಿಗೆ ಸಮ ಎಂದು ಹೇಳಲಾಗಿದೆ. ಆರ್‍.ಆರ್‍.ಆರ್‍ ಸಿನೆಮಾ ಬಳಿಕ ರಾಮ್ ಚರಣ್ ರವರು ಬಾಲಿವುಡ್ ನಲ್ಲೂ ಪ್ರತ್ಯೇಕವಾದ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಿವುಡ್ ಸ್ಟಾರ್‍ ಹಿರೋಯಿನ್ ಗಳೂ ಸಹ ಟಾಲಿವುಡ್ ಹಿರೋಗಳ ಜೊತೆ ನಟಿಸಲು ಆಸಕ್ತಿ ಹೊಂದಿರುವುದಾಗಿ ಕೆಲವು ಕಡೆ ಆಸಕ್ತಿ ತೋರಿದ್ದಾರೆ. ಇದೀಗ ನಟಿ ಮನುಷಿ ಚಿಲ್ಲರ್‍ ತಾನು ರಾಮ್ ಚರಣ್ ಜೊತೆಗೆ ಡೇಟ್ ಮಾಡಲು ಆಸಕ್ತಿ ಹೊಂದಿರುವುದಾಗಿ ಹೇಳಿದ್ದು, ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ಮನುಷಿ ಚಿಲ್ಲರ್‍ ರವರಿಗೆ ಆಂಕರ್‍ ಒಬ್ಬರು ಈ ಪ್ರಶ್ನೆಯನ್ನು ಕೇಳಿದ್ದು, ಇದಕ್ಕೆ ಮನುಷಿ ಚಿಲ್ಲರ್‍ ಕೂಲ್ ಆಗಿ ಸ್ವೀಟ್ ಆಗಿ ಉತ್ತರ ನೀಡಿದ್ದಾರೆ. ಈ ಪ್ರಶ್ನೆ ನನಗೆ ತುಂಭಾ ಕ್ಲಿಷ್ಟಕರವಾದ ಪ್ರಶ್ನೆಯಾಗಿದೆ. ನಾನು ನಟ ರಾಮ್ ಚರಣ್ ರವರನ್ನು ತುಂಭಾನೆ ಇಷ್ಟಪಡುತ್ತೇನೆ. ಆದರೆ ಅವರಿಗೆ ಮದುವೆಯಾಗಿಬಿಟ್ಟಿದೆ. ಆದ್ದರಿಂದ ಅವರ ಜೊತೆ ಡೇಟ್ ಮಾಡಲು ಅವಕಾಶವಿಲ್ಲ.  ಒಂದು ವೇಳೆ ಅವಕಾಶ ದೊರೆತರೇ ಆತನೊಂದಿಗೆ ಯಾವುದಾದರೂ ಮೂವಿಗೆ ಅಥವಾ ಡಿನ್ನರ್‍ ಗೆ ಹೋಗುತ್ತೇನೆ ಎಂದು ರಾಮ್ ಚರಣ್ ಮೇಲಿನ ಕ್ರಷ್ ಅನ್ನು ಹೊರಹಾಕಿದ್ದಾರೆ.

Previous articleಫ್ರೆಂಡ್ಸ್ ಜೊತೆ ಸಮಂತಾ ನೈಟ್ ಔಟ್ ನಲ್ಲಿ ಸಖತ್ ಎಂಜಾಯ್…
Next articleಹಾಟ್ ಬ್ಯೂಟಿ ಅಮಲಾ ಪಾಲ್ ಹಾಟ್ ಪೋಸ್.. ಫಿದಾ ಆದ ಅಭಿಮಾನಿಗಳು…