ಸ್ಟಾರ್ ಕಿಡ್ ಮಂಚು ಲಕ್ಷ್ಮೀ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ಸ್, ಟ್ರೋಲ್ ಮಾಡಿದ್ದಾದರೂ ಯಾಕೆ?

ಸಿನೆಮಾ ಸೆಲೆಬ್ರೆಟಿಗಳಿಗೆ ಟ್ರೋಲ್ ಗಳು, ವಿಮರ್ಶೆಗಳು, ಟೀಕೆಗಳು ಹೊಸದೇನಲ್ಲ. ಒಂದಲ್ಲ ಒಂದು ವಿಚಾರಕ್ಕೆ ಟ್ರೋಲ್ ಆಗುತ್ತಲೇ ಇರುತ್ತಾರೆ. ಇನ್ನೂ ಟಾಲಿವುಡ್ ನಲ್ಲಿ ಹೆಚ್ಚು ಟ್ರೋಲ್ ಆಗುವುದೆಂದರೇ ಅದು ಮಂಚು ಫ್ಯಾಮಿಲಿ ಮಾತ್ರ. ಮಂಚು ಫ್ಯಾಮಿಲಿ ಸಹ ಅದೇ ರೀತಿಯ ಕೆಲಸಗಳನ್ನು ಮಾಡುತ್ತಾ ಟ್ರೋಲ್ ಆಗುತ್ತಿರುತ್ತಾರೆ. ಅದರಲ್ಲೂ ಮೋಹನ್ ಬಾಬು ಪುತ್ರಿ ಮಂಚು ಲಕ್ಷ್ಮೀ ಮಾತನಾಡುವ ವಿಧಾನಕ್ಕೆ ಸಿಕ್ಕಾಪಟ್ಟೆ ಟ್ರೋಲ್ಸ್, ಮೀಮ್ಸ್ ಸಹ ಕಾಣುತ್ತಿರುತ್ತವೆ. ಇದೀಗ ಮತ್ತೆ ಮಂಚು ಲಕ್ಷ್ಮೀ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಆಕೆ ಟ್ರೋಲ್ ಆಗಲು ಕಾರಣ ಏನು ಎಂಬ ವಿಚಾರಕ್ಕೆ ಬಂದರೇ,

ನಟಿ ಮಂಚು ಲಕ್ಷ್ಮೀ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಹೇಳಿಕೆಗಳು ಟ್ರೋಲ್ ಗೆ ಕಾರಣವಾಗಿದೆ. ಸಂದರ್ಶನದಲ್ಲಿ ನನಗೆ ತೆಲುಗು ಬರಲ್ಲ ಎಂದು ಹೇಳುವ ಮೂಲಕ ಟ್ರೋಲ್ ಗೆ ಗುರಿಯಾಗಿದ್ದಾರೆ. ಟಾಲಿವುಡ್ ಸಿನಿರಂಗಕ್ಕೆ ಅನೇಕರು ಬರುತ್ತಿದ್ದಾರೆ. ಇಲ್ಲಿ ದೊಡ್ಡ ಸಕ್ಸಸ್ ಕಂಡುಕೊಳ್ಳುತ್ತಿದ್ದಾರೆ. ತೆಲುಗು ರಾಷ್ಟ್ರಗಳಿಗೆ ಸೇರಿದರೇ ಇದ್ದರೂ ಅವರು ಮಾತ್ರ ತೆಲುಗು ಕಲಿಯಲು ಕಾಳಜಿ ತೋರುತ್ತಿದ್ದಾರೆ. ಆದರೆ ತೆಲುಗು ನಾಡಿನಲ್ಲಿ ಹುಟ್ಟಿದವರು ಮಾತ್ರ ತೆಲುಗು ಭಾಷೆಯ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಕಾರಣಕ್ಕೆ ಮಂಚು ಲಕ್ಷ್ಮೀ ಸಹ ಟ್ರೋಲ್ ಗೆ ಗುರಿಯಾಗಿದ್ದಾರೆ. ಸಂದರ್ಶನವೊಂದರಲ್ಲಿ ಆಕೆ ನನಗೆ ತೆಲುಗು ಬರುವುದಿಲ್ಲ ಎಂದು ಹೇಳಿಕೆ ನೀಡಿದ್ದು, ಇದಕ್ಕೆ ಟ್ರೋಲರ್‍ ಗಳು ಆಕೆ ಹೇಳಿಕೆಗಳನ್ನು ಬಳಸಿ ಸಖತ್ ಟ್ರೋಲ್ ಮಾಡುತ್ತಿದ್ದಾರೆ.

ಸಂದರ್ಶನದಲ್ಲಿ ಮಂಚು ಲಕ್ಷ್ಮೀ ನನಗೆ ತೆಲುಗು ಓದಲು ಬರುವುದಿಲ್ಲ ಎಂದು ಹೇಳಿದ್ದು ಈ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಅನೇಕರು ವಿವಿಧ ಮಾದರಿಯ ಕಾಮೆಂಟ್ ಗಳ ಮೂಲಕ್ ಟ್ರೋಲ್ ಮಾಡುತ್ತಿದ್ದಾರೆ. ಜೊತೆಗೆ ಆಕೆ ಸಂದರ್ಶನದಲ್ಲಿ ಮಾತನಾಡಿದ ಮಾತುಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ವಿಮರ್ಶೆಗಳಿಗೆ ಕಾರಣವಾಗಿದೆ. ತೆಲುಗ ಸಿನಿರಂಗದಲ್ಲಿ ಮಂಚು ಲಕ್ಷ್ಮೀ ಗೆ ತುಂಬಾನೆ ಕ್ರೇಜ್ ಇದೆ. ಅದರಲ್ಲೂ ಆಕೆ ಮಾತನಾಡುವ ಮಾತುಗಳಿಗಂತೂ ದೊಡ್ಡ ಫಾಲೋಯಿಂಗ್ ಇದೆ. ಆಕೆ ತೆಲುಗು ಭಾಷೆಗೆ ಅಮೇರಿಕನ್ ಭಾಷೆ ಮಿಕ್ಸ್ ಮಾಡಿ ಮಾತನಾಡುವ ಮಾತುಗಳನ್ನು ಪ್ರೇಕ್ಷಕರು ಸಖತ್ ಎಂಜಾಯ್ ಮಾಡುತ್ತಾರೆ. ಮಂಚು ಲಕ್ಷ್ಮೀಯ ಈ ಮಾತುಗಳಿಗೆ ಕೆಲವರು ಫಿದಾ ಆಗಿದ್ದಾರೆ, ಮತ್ತೆ ಕೆಲವರು ವಿಮರ್ಶೆಗಳನ್ನು ಸಹ ಮಾಡುತ್ತಾರೆ.

ಮಂಚು ಲಕ್ಷ್ಮೀ ಸಂದರ್ಶನದಲ್ಲಿ ತನಗೆ ತಾನೆ ಪಂಚ್ ಹಾಕಿಕೊಂಡಿದಾರೆ. ಆಕೆ ಭಾಷೆಯ ಬಗ್ಗೆ ಹೇಳಿದ್ದಾರೆ. ನಾನು ಬೆಳೆದ ವಾತಾವರಣ ಬೇರೆ, ಸಿನಿಮಾ ರಂಗ ಬೇರೆ ಎಂದು ಹೇಳಿದ್ದಾರೆ. ಈ ಕುರಿತು ಯಾರು ಎಷ್ಟು ಮಾದರಿಯಲ್ಲಿ ಟ್ರೋಲ್ ಮಾಡುತ್ತಾರೆ ನೋಡುತ್ತೇನೆ, ಎಲ್ಲವನ್ನೂ ನಾನು ಸಂತೋಷದಿಂದ ಸ್ವೀಕರಿಸುತ್ತೇನೆ ಎಂದಿದ್ದಾರೆ. ಅಷ್ಟೇಅಲ್ಲದೇ  ನಾನು ಸಿನೆಮಾಗಳನ್ನು ಪ್ರೋಡ್ಯೂಸ್ ಮಾಡಬಾರದು, ವೆಬ್ ಸೀರಿಸ್ ಗಳನ್ನು ಮಾತ್ರ ಮಾಡಲು ನಿರ್ಧಾರ ಮಾಡಿದ್ದೇನೆ. ವೆಬ್ ಸೀರಿಸ್ ನಲ್ಲಿ ತುಂಬಾ ಎಂಜಾಯ್ ಮಾಡಬಹುದು ಎಂದಿದ್ದಾರೆ. ಅಷ್ಟೇಅಲ್ಲದೇ ಕುಟುಂಬದೊಂದಿಗೆ ಕಾಲ ಕಳೆಯಲು ಸಿನೆಮಾಗಳಿಗೆ ದೂರವಿದ್ದೇನೆ. ಮಗಳು ಬೆಳೆದ ಬಳಿಕ ನಾನು ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತೇನೆ ಎಂದಿದಾರೆ.

Previous articleಅಂಡರ್ ವಾಟರ್ ನಲ್ಲಿ ಹಾಟ್ ಪೋಸ್ ಕೊಟ್ಟ ಕಿಯಾರಾ ಅಡ್ವಾನಿ, ಹಾಟ್ ಲುಕ್ಸ್ ಗೆ ಫಿದಾ ಆದ ಅಭಿಮಾನಿಗಳು..!
Next articleಆ ನಟನೊಂದಿಗೆ ಒಂದು ಸಿನೆಮಾದಲ್ಲಿ ನಟಿಸಲು ಒಂದು ಚಾನ್ಸ್ ಸಿಕ್ಕರೇ ಸಾಕು ಅಂದ್ರು ನಟಿ ಅನುಪಮಾ..!