ಆತನ ಮೋಸದ ಆಲೋಚನೆಗಳನ್ನು ಅಳೆಯಲು ಸಾಧ್ಯವಿಲ್ಲ ಎಂದು ಮಂಚು ಲಕ್ಷ್ಮೀ ಕಾಮೆಂಟ್ಸ್, ಆಕೆ ಹೇಳಿದ್ದು ಯಾರ ಬಗ್ಗೆ?

ಟಾಲಿವುಡ್ ನ ಖ್ಯಾತ ನಟ ಮೋಹನ್ ಬಾಬು ರವರ ಪುತ್ರಿ ಮಂಚು ಲಕ್ಷ್ಮೀ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಫನ್ನಿ ವಿಡಿಯೋಗಳನ್ನು, ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಫೇಮ್ ದಕ್ಕಿಸಿಕೊಂಡಿದ್ದಾರೆ. ಆಕೆ ಅಭಿನಯದ ಮೊದಲನೇ ಅನಗನಗಾ ಓ ಧೀರುಡು ಎಂಬ ಸಿನೆಮಾದಲ್ಲಿ ಲೇಡಿ ವಿಲನ್ ಪಾತ್ರಧಾರಿಯಾಗಿ ಕಾಣಿಸಿಕೊಂಡು ಸಿನಿರಂಗಕ್ಕೆ ಎಂಟ್ರಿಕೊಟ್ಟರು. ಕಳೆದೆರಡು ದಿನಗಳ ಹಿಂದೆಯಷ್ಟೆ ಮಂಚು ಲಕ್ಷ್ಮೀ ತನ್ನ ಮಗಳನ್ನು ಶಾಲೆಗೆ ಕಳುಹಿಸುವುದು ತುಂಬಾ ನೋವು ತಂದಿದೆ ಎಂದು ಕಣ್ಣೀರುಡುತ್ತಾ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇದೀಗ ಆಕೆ ಮತ್ತೊಮ್ಮೆ  ಕೆಲವೊಂದು ಕಾಮೆಂಟ್ ಗಳನ್ನು ಹಂಚಿಕೊಂಡಿದ್ದು, ಅವು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.

ನಟಿ ಲಕ್ಷ್ಮೀ ಅನಗನಗಾ ಓ ಧೀರುಡು ಸಿನೆಮಾದ ಬಳಿಕ ಸಾಲು ಸಿನೆಮಾಗಳಲ್ಲಿ ನಟಿಸುವ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡುರ. ಇನ್ನೂ ಈಕೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಉತ್ಸಾಹದಿಂದ ಕಾಣಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ವೈಯುಕ್ತಿಕ ವಿಚಾರಗಳ ಬಗ್ಗೆ ನಿರ್ಭಯದೀಂದ ಹೇಳಿಕೊಳ್ಳುತ್ತಾರೆ. ಸೋಷಿಯಲ್ ಮಿಡಿಯಾ ಮೂಲಕವೇ ಅನೇಕ ವಿಚಾರಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಸದ್ಯ ಆಕೆ ಹೊಸ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಇದು ಕಡಿಮೆ ಸಮಯದಲ್ಲೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮಂಚು ಲಕ್ಷ್ಮೀ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್‍ ಸಿನೆಮಾ ಅಗ್ನಿ ನಕ್ಷತ್ರಂ ಎಂಬ ಸಿನೆಮಾದ ಮೂಲಕ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾದ ಬಿಡುಗಡೆಗೆ ಸಿದ್ದವಾಗಿದ್ದು, ಈ ಕುರಿತು ಒಂದು ಅಪ್ಡೇಟ್ ಅನ್ನು ಚಿತ್ರ ತಂಡ ನೀಡಿದೆ. ಈ ಸಿನೆಮಾದ ಹೊಸ ಪೋಸ್ಟ್ ಒಂದು ಬಿಡುಗಡೆಯಾಗಿದ್ದು, ಇದರಲ್ಲಿ ಕೇರಳ ನಟ ಸಿದ್ದಿಕ್ ಕಾಣಿಸಿಕೊಂಡಿದ್ದಾರೆ. ಈ ಪೊಸ್ಟರ್‍ ಅನ್ನು ಮಂಚು ಲಕ್ಷ್ಮೀ ಟ್ವಿಟರ್‍ ನಲ್ಲಿ ಪೋಸ್ಟ್ ಮಾಡಿ ನೀಡಿದ ಕ್ಯಾಪ್ಷನ್ ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿದೆ.

ಕೇರಳ ಸಿನಿರಂಗದ ನಟ ಸಿದ್ದಿಕ್ ರವರನ್ನು ಪರಿಚಯ ಮಾಡುತ್ತಾ, ಮಂಚು ಲಕ್ಷ್ಮಿ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಅತ್ಯಂತ ಶಕ್ತಿವಂತ, ಫೆರೋಷಿಯಲ್ ಫಾರ್ಮಾ ಟೈಕೂನ್ ಬಲರಾಂ ವರ್ಮಾ ನನ್ನು ನಿಮಗೆ ಪರಿಚಯ ಮಾಡುತ್ತಿದ್ದೇವೆ. ಮೋಸಪೂರಿಯವಾದ ಆತನಲ್ಲಿನ ಆಲೋಚನೆಗಳನ್ನು ತಿಳಿಯುವುದು ತುಂಬಾ ಕಷ್ಟ. ಜೊತೆಗೆ ಆತನ ಆಲೋಚನೆಗಳನ್ನು ನಿಲ್ಲಿಸಲು ಸಾಧ್ಯವೇ ಇಲ್ಲ. ಕೇರಳಗೆ ಸೇರಿದ ಪ್ರಮುಖ ನಟ ಶ್ರೀ ಸಿದ್ದಿಕ್ ರವರು ನಮ್ಮ ಸಿನೆಮಾದಲ್ಲಿ ಒಂದು ಭಾಗವಾಗಿರುವುದು ನಮಗೆ ತುಂಬಾ ಗೌರವವಾಗಿದೆ ಎಂದು ಹೇಳಿದ್ದಾರೆ. ಇನ್ನೂ ಸಿನೆಮಾದಲ್ಲಿನ ಸಿದ್ದಿಕ್ ರವರ ಆಲೋಚನೆ ಮೇಲೆ ಆಕೆ ಈ ರೀತಿಯಲ್ಲಿ ಕಾಮೆಂಟ್ ಗಳು ಮಾಡಿದ್ದು, ಸದ್ಯ ಚರ್ಚೆಗೆ ಕಾರಣವಾಗಿದೆ.

ಇನ್ನೂ ಈಗಾಗಲೇ ಶೂಟಿಂಗ್ ಪೂರ್ಣಗೊಳಿಸಿದ ಅಗ್ನಿ ನಕ್ಷತ್ರಂ ಚಿತ್ರ ತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್‍ ಕಥೆಯುಳ್ಳ ಈ ಸಿನೆಮಾ ಸೆಪ್ಟೆಂಬರ್‍ 16 ರಂದು ತೆರೆಗೆ ಬರಲಿದೆ. ಈ ಸಿನೆಮಾವನ್ನು ಶ್ರೀ ಲಕ್ಷ್ಮೀ ಪ್ರಸನ್ನ ಪಿಕ್ಚರ್ಸ್‌ ಹಾಗೂ ಮಂಚು ಎಂಟರ್‍ ಟೈನ್ ಮೆಂಟ್ಸ್ ಬ್ಯಾನರ್‍ ನಡಿ ಮೋಹನ್ ಬಾಬು ಹಾಗೂ ಲಕ್ಷ್ಮೀ ಪ್ರಸನ್ನ ನಿರ್ಮಾಣ ಮಾಡಿದ್ದು,  ಡೈಮಂಡ್ ರತ್ನಬಾಬು ಈ ಸಿನೆಮಾಗೆ ಕಥೆ ಹಾಗೂ ನಿರ್ದೇಶನ ಮಾಡಿದ್ದಾರೆ.

Previous articleಶೂಟಿಂಗ್ ವೇಳೆ ಗಂಭೀರವಾಗಿ ಗಾಯಗೊಂಡ ಕಿರಿಕ್ ಹುಡುಗಿ ಸಂಯುಕ್ತಾ…!
Next articleವಿಕ್ರಾಂತ್ ರೋಣ ಸಿನೆಮಾ ನೋಡುವಾಗ ಥಿಯೇಟರ್ ನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ…!